ದೇವರಮನೆ ಕಾಲಭೈರವೇಶ್ವರ ದೇವಾಲಯ ಎಲ್ಲಿದೆ ಹಾಗೂ ಅದರ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭೂಲೋಕದ ಸ್ವರ್ಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಪ್ರಕೃತಿ ಸೌಂದರ್ಯದಿಂದ ವರ್ಷದ 365 ದಿನಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯು ಧಾರ್ಮಿಕ ಕ್ಷೇತ್ರದಲ್ಲೂ ಪ್ರಸಿದ್ದಿ ಪಡೆದಿದೆ. ಕೆಲವು ದೇವಸ್ಥಾನಗಳು ಎಲೆಮರೆಯ ಕಾಯಿಯಂತಿದೆ ಅವುಗಳಲ್ಲಿ ದೇವರಮನೆ ದೇವಾಲಯ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಕಳಸದ ಮಾರ್ಗವಾಗಿ 20 ಕಿ.ಮೀ ದೂರದಲ್ಲಿ ದೇವರಮನೆ ಕ್ಷೇತ್ರ ಸಿಗುತ್ತದೆ. ಇಲ್ಲಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ಕಾಲಭೈರವೇಶ್ವರನ ದೇವಾಲಯವಿದೆ.

ದೇವರಮನೆಯಲ್ಲಿ ದೇವರೆ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಒಮ್ಮೆ ಪರಶಿವನು ತನ್ನ ವಾಹನವಾದ ನಂದಿಯನ್ನು ಭೂಲೋಕಕ್ಕೆ ಕಳುಹಿಸಿ ಅಲ್ಲಿನ ಜನರು ಸುಖವಾಗಿದ್ದಾರೊ ಇಲ್ಲವೋ ಎಂದು ನೋಡಿಕೊಂಡು ಬರುವಂತೆ ಹೇಳುತ್ತಾರೆ. ನಂದಿ ಭೂಲೋಕಕ್ಕೆ ಬಂದಾಗ ಹಸಿವು, ಕ್ಷಾಮದಿಂದ ಜನರು ನರಳುತ್ತಿರುತ್ತಾರೆ. ಇದನ್ನು ನೋಡಿದ ನಂದಿ ಶಿವನ ಹತ್ತಿರ ಜನರು ಸುಖವಾಗಿದ್ದಾರೆ ಎಂದು ಸುಳ್ಳು ಹೇಳುತ್ತಾನೆ. ನಂತರ ಸತ್ಯ ತಿಳಿದ ಶಿವನು ನಂದಿ ಮಾಡಿದ ತಪ್ಪಿಗೆ ಭೂಲೋಕದಲ್ಲಿ ಜನರಿಗೆ ಉಳುಮೆ ಕಾರ್ಯದಲ್ಲಿ ಸಹಾಯ ಮಾಡುವಂತೆ ಆಜ್ಞೆ ನೀಡುತ್ತಾನೆ. ಅದರಂತೆ ನಂದಿ ಭೂಲೋಕಕ್ಕೆ ಬರುತ್ತಾನೆ ಅವನ ಹಿಂದೆಯೇ ಶಿವನು ಭೂಲೋಕಕ್ಕೆ ಬಂದು ದೇವರಮನೆಯಲ್ಲಿ ಕಾಲಭೈರವನಾಗಿ ನೆಲೆಸುತ್ತಾನೆ. ಈ ಕಾರಣದಿಂದ ಜನರು ತಾವು ಬೆಳೆದ ಹೊಸ ಫಸಲನ್ನು ವರ್ಷಕ್ಕೊಮ್ಮೆ ಈ ದೇವಾಲಯಕ್ಕೆ ತಂದು ನೈವೇದ್ಯ ರೂಪದಲ್ಲಿ ಕೊಡುತ್ತಾರೆ.

ಈ ದೇವಾಲಯವನ್ನು ಕಟ್ಟಿರುವ ಬಗ್ಗೆ ಪುರಾವೆ ದೊರೆತಿಲ್ಲ ಕೆಲವರ ಪ್ರಕಾರ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ. ಈ ದೇವಾಲಯದ ಎದುರಿಗೆ ಒಂದು ಸರೋವರವಿದೆ ಅಲ್ಲಿಯ ನೀರನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಈ ದೇವಾಲಯದ ಹಿಂಭಾಗದಲ್ಲಿ ದೇವರಮನೆ ಗುಡ್ಡವಿದೆ. ಈ ಗುಡ್ಡ ಸಮುದ್ರ ಮಟ್ಟದಿಂದ 2,000 ಅಡಿ ಎತ್ತರವಿದೆ. ಈ ಗುಡ್ಡದ ಮೇಲೆ ನಿಂತು ಪ್ರಕೃತಿ ಸೊಬಗನ್ನು ಸವಿಯಬಹುದು. ಈ ಗುಡ್ಡದಲ್ಲಿ ಧಾರವಾಹಿ ಹಾಗೂ ಸಿನಿಮಾಗಳ ಶೂಟಿಂಗ್ ನಡೆಯುತ್ತದೆ. ಬೆಂಗಳೂರು, ಹಾಸನ, ಮೈಸೂರು, ಚಿಕ್ಕಮಗಳೂರು, ಮಂಗಳೂರಿನಿಂದ ಮೂಡಿಗೆರೆಗೆ ನಿಯಮಿತ ಬಸ್ ವ್ಯವಸ್ಥೆಯಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!