ಉಗುರು ಸುತ್ತು ಸಮಸ್ಯೆ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಿಗಾದರು ಇದು ಕಾಡುತ್ತದೆ, ಈ ಸಮಸ್ಯೆಗೆ ಮನೆಯಲ್ಲಿಯೇ ಹಲವು ಮನೆಮದ್ದುಗಳನ್ನು ಕಂಡುಕೊಂಡು ಇದರಿಂದ ಪರಿಹಾರ ಪಡೆಯಬಹುದಾಗಿದೆ, ಹಳ್ಳಿಗಳಲ್ಲಿ ಉಗುರು ಸುತ್ತು ಸಮಸ್ಯೆಗೆ ಕೆಲವರು ಮನೆಮದ್ದುಗಳನ್ನು ಬಳಸಿ ಪರಿಹಾರ ಕಾಣುತ್ತಾರೆ. ಅಂತಹ ಒಂದಿಷ್ಟು ಮನೆಮದ್ದುಗಳನ್ನು ಈ ಮೂಲಕ ತಿಳಿಯೋಣ
ಈ ಉಗುರು ಸುತ್ತು ಸಮಸ್ಯೆ ಬಂದ್ರೆ ನಿದ್ರೇನೇ ಮಾಡೋಕೆ ಆಗೋದಿಲ್ಲ ಅಷ್ಟೊಂದು ನೋವು ಕೊಡುತ್ತದೆ, ಇದರಿಂದ ಯಾವಾಗ ಮುಕ್ತಿ ಪಡೆಯೋಣ ಅನ್ನೋ ಅಷ್ಟು ಕಠಿಣ ನೋವನ್ನು ಈ ಸಮಸ್ಯೆಯಿಂದ ಅನುಭವಿಸಬೇಕಾಗುತ್ತದೆ. ಅಂತಹ ಸಮಸ್ಯೆಗೆ ಪರಿಹಾರ ನೀಡುವಂತ ಔಷಧಿಗಳು ಯಾವುವು ಅನ್ನೋದನ್ನ ಹೇಳುವುದಾದರೆ ಮೊದಲನೆಯದಾಗಿ ನಿಂಬೆ ರಸದಲ್ಲಿ ಅಪರಂಜಿ ಸೊಪ್ಪನ್ನು ಅರೆದು ಉಗುರುಸುತ್ತು ಆಗಿರುವಂತ ಜಾಗಕ್ಕೆ ಕಟ್ಟಿ ಅಥವಾ ಒಂದು ನಿಂಬೆಹಣ್ಣನ್ನು ಉಗುರು ಸುತ್ತು ಆಗಿರುವಂತ ಬೆರಳಿನ ಸೈಜ್ ನಿಂಬೆಹಣ್ಣಿನಲ್ಲಿ ಹೋಗುವಷ್ಟು ಒಂದು ಚಿಕ್ಕ ತೂತನ್ನು ಮಾಡಿ ಅದರಲ್ಲಿ ಬೆರಳನ್ನು ಇತ್ತು ಕೊಂಡರೆ ಕೆಲವೇ ದಿನಗಳಲ್ಲಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗುವುದು.
ನಿಂಬೆಹಣ್ಣಿನ ಮತ್ತೊಂದು ಉಪಯೋಗ ಏನು ಅನ್ನೋದನ್ನ ಹೇಳುವುದಾದರೆ ಮುಖದ ಮೇಲಿನ ಮೊಡವೆ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಿತ್ಯ ಬೆಳಗ್ಗೆ ನಿಂಬೆ ರಸವನ್ನು ಲೇಪಿಸಿದರೆ ಮೊಡವೆ ನಿವಾರಣೆಯಾಗುವುದು ಅಥವಾ ಹಾಲಿನ ಕೆನೆಯ ಜೊತೆಗೆ ನಿಂಬೆ ರಸವನ್ನು ಸೇರಿಸಿ ಲೇಪಿಸಿಕೊಳ್ಳಬಹುದು. ಈ ಮನೆಮದ್ದುಗಳು ನಿಮಗೆ ಸುಲಭವಾಗಿ ಸಮಸ್ಯೆಗೆ ಪರಿಹಾರ ನೀಡುವಂತ ಕೆಲಸವನ್ನು ಮಾಡುತ್ತದೆ. ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.