ಗಾಸಿಪ್ ಗೆಳತಿಗೆ ಶುಭಾಶಯ ತಿಳಿಸಿದ ಕೆಎಲ್ ರಾಹುಲ್

0 1

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರು ತನ್ನ ಗಾಸಿಪ್ ಗೆಳತಿ ನಟಿ ಅತಿಯಾ ಶೆಟ್ಟಿಗೆ ಹ್ಯಾಪಿ ಬರ್ತಡೇ ಹುಚ್ಚು ಮಗು ಎಂದು ಹುಟ್ಟುಹಬ್ಬದ ಶುಭಕೋರಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಎಲ್ ರಾಹುಲ್ ಅವರು ತಮ್ಮ ಗರ್ಲ್ ಫ್ರೆಂಡ್ ಗೆ ಯಾವರೀತಿ ವಿಭಿನ್ನವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಎನ್ನುವುದನ್ನು ನಾವಿಲ್ಲಿ ನೋಡೋಣ.

ಬಾಲಿವುಡ್‍ನ ಹಿರಿಯ ನಟ ಸುನಿಲ್ ಶೆಟ್ಟಿಯವರ ಪುತ್ರಿ ಅತಿಯಾ ಶೆಟ್ಟಿ ತಮ್ಮ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅತಿಯಾ ಶೆಟ್ಟಿ ಸುನೀಲ್ ಶೆಟ್ಟಿ ಅವರ ಮಗಳು ಮಾತ್ರ ಅಲ್ಲಾ ಭಾರತದ ಉಪನಾಯಕ ಕೆಎಲ್ ರಾಹುಲ್ ಅವರ ಗಾಸಿಪ್ ಗರ್ಲ್‍ಫ್ರೆಂಡ್ ಕೂಡಾ. ಗೆಳತಿಯ ಹುಟ್ಟುಹಬ್ಬಕ್ಕೆ ಕೆಎಲ್ ರಾಹುಲ್ ಅವರು ಪ್ರೀತಿಯಿಂದ ವಿಶ್ ಮಾಡಿದ್ದನ್ನು ಅತಿಯಾ ಶೆಟ್ಟಿ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಅತಿಯಾ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರಾಹುಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಇಬ್ಬರ ಫೋಟೋವನ್ನು ಹಂಚಿಕೊಂಡಿದ್ದು , ಈ ಫೋಟೋದಲ್ಲಿ ರಾಹುಲ್ ಹೆಗಲ ಮೇಲೆ ಅತಿಯಾ ತಲೆ ಇಟ್ಟಿರುವ ಫೋಟೋ ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಹುಚ್ಚು ಮಗು ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಕಳೆದ ಜೂನ್‍ನಲ್ಲಿ ನಡೆದ ರಾಹುಲ್ ಅವರ ಹುಟ್ಟುಹಬ್ಬಕ್ಕೂ ಕೂಡ ಅತಿಯಾ ಶೆಟ್ಟಿಯವರು ನನ್ನವನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

ಈ ಹಿಂದೆ ಅಥಿಯಾ ಶೆಟ್ಟಿ ಬಿಳಿ ಶರ್ಟ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡಿದ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಗೆಳೆಯ ಕೆ.ಎಲ್ ರಾಹುಲ್ ಅವರು ಒಳ್ಳೆಯ ಶರ್ಟ್ ಎಂದು ಕಾಮೆಂಟ್ ಮಾಡಿದ್ದರು. ಇಬ್ಬರ ಅಭಿಮಾನಿಗಳಿಗೆ ಇಷ್ಟೇ ಸಾಕಿತ್ತು ಅಥಿಯಾ ಮತ್ತು ರಾಹುಲ್ ಇಬ್ಬರ ಕಾಲೆಳೆಯಲು ಆರಂಭಿಸಿದ್ದರು. ಹೀಗಾಗಿ ರಾಹುಲ್ ಕಾಮೆಂಟ್ ಕಾರಣಕ್ಕೆ ಅಥಿಯಾ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಕೆಲವರು ಈ ಶರ್ಟ್ ಬಹುಶಃ ನಿಮ್ಮದಾಗಿರಬೇಕು ಎಂದು ರಾಹುಲ್ ಕಾಲೆಳೆದರೆ, ಶರ್ಟ್ ನಿಮಗೆ ಇಷ್ಟವಾಗಿದೆಯಾ? ಎಂದು ಕೆಲವರು ಪ್ರಶ್ನಿಸಿದ್ದರು. ಇನ್ನು ಕೆಲವರಂತೂ ನಿಮ್ಮಿಬ್ಬರ ಜೋಡಿ ಫೋಟೊವನ್ನು ಹಂಚಿಕೊಳ್ಳಿ ಎಂದು ಬೇಡಿಕೆಯನ್ನು ಸಹ ಇಟ್ಟಿದ್ದರು. ಅಷ್ಟಕ್ಕೂ ರಾಹುಲ್ ಕಾಮೆಂಟ್ ಜೊತೆಗೆ ಈ ಫೋಟೋ ವೈರಲ್ ಆಗೋದಕ್ಕೆ ಮತ್ತೊಂದು ಕಾರಣವೂ ಇದೆ. ಇಲ್ಲಿ ಅಥಿಯಾ ತನ್ನದಲ್ಲದ ಸೈಜ್‍ನ ಶರ್ಟ್ ಧರಿಸಿದ್ದರು. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಕಾಮೆಂಟ್ ಜೊತೆಗೆ ಅಭಿಮಾನಿಗಳು ತಮಾಷೆ ಮಾಡಿ ಟ್ರೋಲ್ ಮಾಡಿದ್ದರು. ಸದ್ಯ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಿಂದ ಹೊರಗೆ ಬಿದ್ದಿದೆ. ನಾಯಕನಾಗಿ ರಾಹುಲ್ ವಿಫಲರಾದರೂ ಬ್ಯಾಟ್ಸ್ ಮ್ಯಾನ್ ಆಗಿ ಮಿಂಚಿದ್ದಾರೆ. ಐಪಿಎಲ್-2020ಯಲ್ಲಿ ತಾವು ಆಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕದ ಸಹಾಯದಿಂದ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ತಂಡದ ಉಪನಾಯಕನಾಗಿಯೂ ಸಹ ಕೆಎಲ್ ರಾಹುಲ್ ಅವರು ಆಯ್ಕೆ ಆಗಿದ್ದಾರೆ.

Leave A Reply

Your email address will not be published.