ಭಾರತವು ಹೇಗೆ ವಿಶೇಷವಾದ ದೇವಾಲಯಗಳನ್ನು ಹೊಂದಿದೆಯೋ ಹಾಗೆ ಬೇರೆ ದೇಶಗಳೂ ಕೂಡ ವಿಶೇಷತೆಯುಳ್ಳ ದೇವಾಲಯಗಳನ್ನು ಹೊಂದಿವೆ. ಆಸ್ಟ್ರೇಲಿಯಾ ಕೂಡ ಅನೇಕ ದೇವಾಲಯಗಳನ್ನು ಹೊಂದಿದೆ.ಇಲ್ಲಿ ಹಲವಾರು ಹಿಂದೂ ದೇವಸ್ಥಾನ ಇದೆ.ಅವುಗಳಲ್ಲಿ ಮುರುಗಾನ್ ಸುಬ್ರಹ್ಮಣ್ಯ ದೇವಸ್ಥಾನ ಕೂಡ ಒಂದು.ಅದರ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ತಿಳಿಯೋಣ.

ಆಸ್ಟ್ರೇಲಿಯಾದ ಮುರುಗಾನ್ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಗುಲಾಬಿ ಗಿಡಗಳನ್ನು ನೆಟ್ಟು ತುಂಬಾ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.ಮುರುಗಾನ್ ದೇವಸ್ಥಾನದ ಒಳಗೆ ಭಾರತೀಯ ದೇವಸ್ಥಾನದ ರೀತಿಯಲ್ಲಿ ಇದೆ. ಒಳಗಡೆ ಹೋದ ತಕ್ಷಣ ಗಣಪತಿ ದೇವರ ದರ್ಶನ ಆಗುತ್ತದೆ.ಗಣಪತಿ ದೇವರ ಎಡಭಾಗದಲ್ಲಿ ಮುರುಗನ್ ಅವರ ಪತ್ನಿಯರ ವಿಗ್ರಹಗಳನ್ನು ಇಡಲಾಗಿದೆ.

ಇಲ್ಲಿ ದಿನವೂ ಗಣಪತಿ ಪೂಜೆ ನಡೆಯುತ್ತದೆ.ಅಲ್ಲಿಯೇ ಪಕ್ಕದಲ್ಲಿ ದಾಕ್ಷಾಯಿಣಿ ದೇವಿ ಮತ್ತು ದುರ್ಗಾಮಾತಾರ ವಿಗ್ರಹಗಳೂ ಇದೆ. ಅಲ್ಲಿಯೇ ಮುರುಗನ್ ಎಂಬ ಹೆಸರಿನಿಂದ ಕರೆಯಲ್ಪಡುವ ಅಕ್ಕ ಪಕ್ಕ ಒಂದೊಂದು ಪತ್ನಿಯನ್ನು ಹೊಂದಿದ ವಿಗ್ರಹಗಳು ಇವೆ.ಅಲ್ಲಿ ಅಷ್ಟ ದೇವರುಗಳನ್ನು ಸ್ಥಾಪನೆ ಮಾಡಲಾಗಿದೆ.ನವಗ್ರಹಗಳ ವಿಗ್ರಹಗಳೂ ಕೂಡ ಇವೆ.ಇಲ್ಲಿ ಹಣತೆಯಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ.

ಇದರಲ್ಲಿ ವಿಶೇಷತೆ ಏನು ಇಲ್ಲ ಎಂದು ಅನಿಸಬಹುದು. ಆದರೆ ವಿದೇಶದಲ್ಲಿದ್ದು ನಮ್ಮ ಭಾರತೀಯ ದೇವಸ್ಥಾನದಂತ ದೇವಾಲಯಗಳನ್ನು ನೋಡುವುದೆಂದರೆ ಬಹಳ ಖುಷಿ ಎನಿಸುತ್ತದೆ.ಭಾರತದಲ್ಲೇ ಇರುವ ಅನುಭವ ಉಂಟಾಗುತ್ತದೆ. ನಾವು ಎಲ್ಲಿಯೇ ಇದ್ದರು ನಮ್ಮದು, ನಮ್ಮವರು ಎಂದರೆ ಅದರ ವಿಶೇಷತೆಯೇ ಬೇರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!