ನಾವು ನಮ್ಮ ಸೌಂದರ್ಯ ವರ್ಧನೆಗಾಗಿ ಏನೆಲ್ಲಾ ಮಾಡುತ್ತೇವೆ. ಎಷ್ಟೊಂದು ಪ್ರಯೋಗಗಳನ್ನು ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಅದೆಷ್ಟೋ ಬೆಲೆಯಾದರೂ ಸರಿ ಹಣವನ್ನು ಕೊಟ್ಟು ಖರೀದಿಸುತ್ತೇವೆ.ಆದರೆ ಎಷ್ಟೋ ಪ್ರಯೋಜನಕ್ಕೆ ಬರುವುದಿಲ್ಲ. ಕೇವಲ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗುತ್ತವೆ. ಆದ್ದರಿಂದ ನಾವು ಇಲ್ಲಿ ಕಡಿಮೆ ಬೆಲೆಯಲ್ಲಿ ಕಡಿಮೆ ಪ್ರಯತ್ನದಲ್ಲಿ ಅಂದರೆ ಕೇವಲ ಟೂತ್ ಪೇಸ್ಟ್ ಬಳಸಿ ಸುಂದರವಾಗುವ ಬಗೆಯನ್ನು ಇಲ್ಲಿ ತಿಳಿಯೋಣ.
ಕೆಲವರಿಗೆ ಮೊಣಕೈ ಮತ್ತು ಮೊಣಕಾಲಿಗಳಿಗೆ ಕಪ್ಪಾದ ಕಲೆಗಳು ಆಗಿರುತ್ತವೆ.ಕೆಲವರಿಗೆ ತುಂಬಾ ಮೊಡವೆಗಳು ಆಗುತ್ತಿರುತ್ತವೆ. ಹಾಗೆಯೇ ಮೂಗಿನ ಮೇಲೆ ಕಪ್ಪು ಕಪ್ಪು ಚುಕ್ಕೆಗಳಾಗಿರುತ್ತವೆ. ಇವುಗಳಿಗೆ ಪರಿಹಾರೋಪಾಯಗಳನ್ನು ನೋಡೋಣ.
ಮೊಣಕೈ ಮತ್ತು ಮೊಣಕಾಲಿನ ಮೇಲೆ ಕಪ್ಪು ಕಲೆಗಳು ಆಗುತ್ತದೆ. ಇದಕ್ಕೆ ಆದಷ್ಟು ಬಿಳಿಯಾದ ಟೂತ್ ಪೇಸ್ಟ್ ಬಳಸಿದರೆ ಒಳ್ಳೆಯದು. ಮೊದಲು ಒಂದು ಚಮಚ ಟೂತ್ ಪೇಸ್ಟ್ ಗೆ ಅರ್ಧ ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಬೇಕು. ಆದರೆ ಬೇಕಿಂಗ್ ಪೌಡರ್ ಹಾಕಬಾರದು.ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮೊಣಕೈ ಅಥವಾ ಮೊಣಕಾಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ನಂತರ ತಣ್ಣ ನೀರಿನಲ್ಲಿ ತೊಳೆಯಬೇಕು. 2 ರಿಂದ 3 ದಿನ ಹೀಗೆ ಮಾಡುವುದರಿಂದ ಕಲೆಗಳು ಮಾಯವಾಗುತ್ತವೆ.
ಮೊಡವೆಗಳ ತೊಂದರೆಗೆ ಮೊದಲು ಬಿಳಿ ಟೂತ್ ಪೇಸ್ವ್ ತೆಗೆದುಕೊಂಡು ಇಯರ್ ಬಡ್ಸ್ ನ ತುದಿಯಲ್ಲಿ ಹಾಕಿ ಮೊಡವೆ ಇದ್ದ ಜಾಗದಲ್ಲಿ ಹಚ್ಚಬೇಕು. ಇದರಿಂದ ಮೊಡವೆ ಒಂದೇ ಒಂದು ರಾತ್ರಿಯಲ್ಲಿ ಒಣಗಲು ಶುರುವಾಗುತ್ತದೆ.
ಮೂಗಿನ ಮೇಲೆ ಕೆಲವರಿಗೆ ಕಪ್ಪು ಚುಕ್ಕೆಗಳಾಗಿರುತ್ತವೆ.ಆಗ ಟೂತ್ ಪೇಸ್ಟ್ ತೆಗೆದುಕೊಂಡು ಮೂಗಿನ ಮೇಲೆ ಹಚ್ಚಬೇಕು.ನಂತರ ಹಲ್ಲುಜ್ಜುವ ಬ್ರಶ್ ನಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಇದರಿಂದ ಒಂದೇ ಪ್ರಯತ್ನದಲ್ಲಿ ಪರಿಹಾರ ಕಾಣಬಹುದು.
ತುಂಬಾ ಕುಟೆಕ್ಸ್ ಬಳಸಿ ಕಾಲಿನ ಉಗುರಿನ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ.ಆಗ ಟೂತ್ ಪೇಸ್ಟ್ ನ್ನು ಉಗುರಿಗೆ ಹಚ್ಚಬೇಕು. ಹಲ್ಲುಜ್ಜುವ ಬ್ರಶ್ ನಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಉಜ್ಜುವಾಗ ಸ್ವಲ್ಪ ನೀರು ಹಾಕಿಕೊಳ್ಳಬೇಕು.ಇದರಿಂದ ಹಳದಿಯಾದ ಉಗುರುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ.ಕಾಲಿನ ಸುತ್ತ ಇರುವ ಕಪ್ಪು ಕಪ್ಪು ಕಲೆಗಳು ಮಾಯವಾಗುತ್ತವೆ.
ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ