ನಮ್ಮಲ್ಲಿ ಸಾಕಷ್ಟು ಜನರಿಗೆ ಈ ರೀತಿ ಒಂದು ಅನುಮಾನ ಇದ್ದೇ ಇರುತ್ತದೆ. ಐಪಿಎಲ್ ನಲ್ಲಿ ಆಯಾ ತಂಡದ ಮಾಲೀಕರುಗಳು ಆಟಗಾರರನ್ನು ಕೊಂಡುಕೊಳ್ಳುವುದರ ಸಲುವಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಾರೆ. ಈ ರೀತಿಯಾಗಿ ಆಟಗಾರರ ಮೇಲೆ ನೂರಾರು ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡುವುದರಿಂದ ಮಾಲೀಕರಿಗೆ ಆಗುವ ಲಾಭವಾದರೂ ಏನು? ಐಪಿಎಲ್ ತಂಡದ ಮಾಲೀಕರಿಗೆ ಹಣ ಎಲ್ಲಿಂದ ? ಯಾವ ರೀತಿಯಾಗಿ ಬರುತ್ತದೆ? ಎನ್ನುವುದರ ಬಗ್ಗೆ ಸಂಪೂರ್ಣ ವಿವರಣೆಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಐಪಿಎಲ್ ನ ಪ್ರತಿಯೊಂದು ತಂಡದ ಮಾಲೀಕರಿಗೆ ಆದಾಯ ಬರುವ ಮೂಲ ಎಂದರೆ ಟಿವಿಯಲ್ಲಿ ಪ್ರಸಾರ ಮಾಡುವ ಹಕ್ಕಾಗಿರುತ್ತದೆ. ಐಪಿಎಲ್ ಮ್ಯಾಚ್ ಅನ್ನು ವಿಶ್ವದಾದ್ಯಂತ ಪ್ರಚಾರ ಮಾಡುವುದರ ಸಲುವಾಗಿ ಟಿವಿ ಚಾನಲ್ ಗಳು ಹಕ್ಕನ್ನು ಪಡೆದಿರುತ್ತಾರೆ. ಐಪಿಎಲ್ ಮ್ಯಾಚ್ ಲೈವ್ ಪ್ರಸಾರ ಮಾಡುವುದರ ಸಲುವಾಗಿ ಸುಮಾರು ಒಂದು ಶತಕೋಟಿ ಡಾಲರ್ ಗೆ ಹಕ್ಕನ್ನು ಪಡೆಯಲಾಗಿದೆ. ಇದನ್ನು ಭಾರತೀಯ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೆ 7000 ಕೋಟಿ ರೂಪಾಯಿ ಆಗಿದ್ದು ಹತ್ತು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತದೆ. ಹತ್ತುವರ್ಷದ ಅಗ್ರಿಮೆಂಟ್ ನಲ್ಲಿ 7000 ಕೋಟಿ ರೂಪಾಯಿಯಲ್ಲಿ ಒಂದು ಪಾಲನ್ನು ಎಲ್ಲಾ ತಂಡಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಇನ್ನು ಎರಡನೆಯದಾಗಿ ಯಾವುದೇ ಒಂದು ಐಪಿಎಲ್ ತಂಡವು ಸಹ ಆಟವಾಡಿ ಗೆದ್ದ ತಕ್ಷಣ ಅವರಿಗೆ ಹಣ ಸಿಗುವುದಿಲ್ಲ. ಪ್ರಾಯೋಜಕತ್ವ ಅಂದರೆ , ಆಟದ ಮಧ್ಯಮಧ್ಯ ಟಿವಿಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ಸ್ಪಾನ್ಸರ್ ಮಾಡಿದಾಗ ಮಾತ್ರ ಹಣ ದೊರೆಯುತ್ತದೆ. ಇಲ್ಲವಾದರೆ ಗೆದ್ದಾಗ ದೊರೆಯುವ ಬಹುಮಾನದ ಮೊತ್ತ ಮಾತ್ರ ದೊರೆಯುತ್ತದೆ.
ಐಪಿಎಲ್ ನಲ್ಲಿ ಪ್ರತಿಯೊಂದು ತಂಡಕ್ಕೂ ಸಹ ಜಾಹೀರಾತುದಾರರು ಪ್ರಮುಖವಾಗಿರುತ್ತವೆ. ಐಪಿಎಲ್ ಆಯೋಜಕರು ನೀಡುವಂತಹ ಸ್ಪಾನ್ಸರ್ ಹಣ ದಲ್ಲಿಯೂ ಸಹ ತಂಡದ ಮಾಲೀಕರಿಗೆ ಪಾಲು ಇರುತ್ತದೆ. ಇದರಲ್ಲಿ ನಗದು ಬಹುಮಾನವಾಗಿ ಐಪಿಎಲ್ ನ ಇತರ ಖರ್ಚುಗಳಿಗೆ ಸಹ ಇದೇ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಐಪಿಎಲ್ ತಂಡದ ಮಾಲೀಕರುಗಳ ಇನ್ನೊಂದು ಮೂಲ ಆದಾಯ ಎಂದರೆ ಟಿಕೆಟುಗಳ ಹಂಚಿಕೆ. ಶೇಕಡ 80ರಷ್ಟು ಟಿಕೆಟ್ ಮಾರಾಟದ ಹಣ ಐಪಿಎಲ್ ತಂಡದ ಮಾಲೀಕರುಗಳಿಗೆ ದೊರೆಯುತ್ತದೆ. ಕ್ರೀಡಾಂಗಣದ ಬಾಡಿಗೆ ಸಾರಿಗೆ ವೆಚ್ಚ, ಆಟಗಾರರ ವಸತಿ, ಆಹಾರ, ಕಚೇರಿಯ ವೆಚ್ಚ , ಮಾಲೀಕರ ಉತ್ಪನ್ನಗಳ ಮಾರಾಟ, ಪ್ರಚಾರದ ವೆಚ್ಚ ಇವೆಲ್ಲವುಗಳನ್ನು ಸಹ ಐಪಿಎಲ್ ತಂಡದ ಮಾಲೀಕರುಗಳೇ ನೋಡಿಕೊಳ್ಳಬೇಕಾಗುತ್ತದೆ.
ಐಪಿಎಲ್ ನಲ್ಲಿ ಮಾಲೀಕರುಗಳಿಗೆ ಹೆಚ್ಚಿನ ಒತ್ತಡ ಬೀಳುವುದು ಆಟಗಾರರನ್ನು ಖರೀದಿ ಮಾಡುವ ಸಂದರ್ಭದಲ್ಲಿ. ಸರ್ಕಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಸಂದರ್ಭದಲ್ಲಿ ಟ್ಯಾಕ್ಸ್ ಗಳನ್ನು ಹಾಕುತ್ತದೆ. ಈ ಹಣವನ್ನು ಸಹ ಸಂಘಟಕರು ಮತ್ತು ಮಾಲೀಕರೆ ನೀಡಬೇಕಾಗಿರುತ್ತದೆ. ಹೀಗಾದಾಗ ಬರೀ ಲಾಭವಂದೇ ಅಲ್ಲದೆ ಖರ್ಚು ಕೂಡ ಅಷ್ಟೇ ಬರುತ್ತದೆ ಹಾಗೂ ಎಲ್ಲಾ ಸಮಯದಲ್ಲಿ ಲಾಭವೇ ಉಂಟಾಗುತ್ತದೆ ಎಂದು ಹೇಳುವುದು ಕೂಡ ಸಾಧ್ಯವಿಲ್ಲ. ಒಂದು ವೇಳೆ ಟಿವಿಯನ್ನು ನೋಡುವ ವೀಕ್ಷಕರ ಸಂಖ್ಯೆ ಕಡಿಮೆಯಾದರೆ ಇವರ ಆದಾಯದ ಮೂಲ ಕುಸಿಯುತ್ತದೆ. ಇನ್ನು ಟಿಕೆಟ್ ವಿತರಣೆ ಸಂದರ್ಭದಲ್ಲಿ ಸ್ಟೇಡಿಯಂಗೆ ನೇರವಾಗಿ ಆಟವನ್ನು ನೋಡಲು ಹೆಚ್ಚಿನ ಜನರು ಬರದೇ ಇದ್ದಾಗ ಅಲ್ಲಿಯೂ ಕೂಡ ಆದಾಯ ಕಡಿಮೆಯಾಗುತ್ತದೆ. ಇನ್ನು ಕೆಲವು ಸಲ ತಂಡಕ್ಕೆ ಸ್ಪಾನ್ಸರ್ ಗಳು ಸಿಗದೆ ಇದ್ದಾಗ ಅಥವಾ ಇರುವ ಸ್ಪಾನ್ಸರ್ ಗಳು ಸರಿಯಾಗಿ ಸ್ಪಾನ್ಸರ್ ಮಾಡದೆ ಇದ್ದಾಗ ಸಹ ನಷ್ಟ ಉಂಟಾಗುತ್ತದೆ. ಈ ರೀತಿಯಾಗಿ ಟಿವಿ ಜಾಹೀರಾತುಗಳು, ಟಿವಿಯಲ್ಲಿ ಪ್ರಸಾರ ಮಾಡುವ ಹಕ್ಕನ್ನು ಹೊಂದಿರುವುದರಿಂದ ಎಲ್ಲ ಮೂಲಗಳಿಂದ ಐಪಿಎಲ್ ತಂಡದ ಮಾಲೀಕರಿಗೆ ಹಣ ದೊರೆಯುತ್ತದೆ.