ಅಡುಗೆ ಅನಿಲ ಹೊಂದಿರುವವರಿಗೆ ಒಂದು ಮಹತ್ವಪೂರ್ಣವಾದ ಮಾಹಿತಿ ಇದೆ. ಈ ತಿಂಗಳಿನಿಂದ ಅಂದರೆ ನವೆಂಬರ್ 2 ರಿಂದ ಹೊಸ ನಂಬರ್ ಮೂಲಕ ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡಬೇಕಾಗುತ್ತದೆ. ಈ ಮಾಹಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಎಲ್.ಪಿ.ಜಿ. ಸಿಲಿಂಡರ್ ನ ಚಂದಾದಾರರಾಗಿದ್ದರೆ ಇನ್ನು ಮುಂದೆ ಹಳೆಯ ನಂಬರ್ ನಿಂದ ಸಿಲಿಂಡರ್ ನ್ನು ಬುಕ್ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಗ್ಯಾಸ್ ಬುಕ್ ಮಾಡಲು 8970024365 ಈ ನಂಬರ್ ಗೆ ಕರೆ ಮಾಡಬಹುದಿತ್ತು. ಆದರೆ ಇನ್ನು ಮುಂದೆ ಹೊಸ ನಂಬರ್ ಮೂಲಕ ಬುಕ್ ಮಾಡಬಹುದು. ಇನ್ನು ಮುಂದೆ 77189555555 ಈ ನಂಬರ್ ಗೆ ಕರೆ ಮಾಡಿ ಗ್ಯಾಸ್ ಬುಕ್ ಮಾಡಬಹುದು. ಇನ್ನೊಂದು ಸುಲಭ ಮಾರ್ಗವೆಂದರೆ ವಾಟ್ಸಾಪ್ ಮೆಸೆಂಜರ್ ನಲ್ಲಿ ದೊಡ್ಡ ಇಂಗ್ಲೀಷ್ ಅಕ್ಷರದಲ್ಲಿ REFILL ಎಂದು ಟೈಪ್ ಮಾಡಿ 7588888824 ಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಬೇಕಾಗುತ್ತದೆ.
ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ವಾಟ್ಸಾಪ್ ಮಾಡಬೇಕಾಗುತ್ತದೆ. ಇನ್ನು ಮುಂದೆ ಹಳೆಯ ನಂಬರ್ ನಲ್ಲಿ ಯಾವುದೇ ಕಾರಣಕ್ಕೂ ಬುಕ್ ಮಾಡಲು ಸಾಧ್ಯವಿಲ್ಲ. ಹೊಸ ನಂಬರ್ ನಿಂದ ಮಾತ್ರ ಬುಕ್ ಮಾಡಲು ಸಾಧ್ಯ. ಸಿಲಿಂಡರ್ ನ್ನು ಕಾಯ್ದಿರಿಸಲು ಹೊಸ ಮಾರ್ಗಗಳಿವೆ. ಒಂದು ವಿತರಕರನ್ನು ಭೇಟಿ ಮಾಡುವ ಮೂಲಕ, ಎರಡನೆಯದು ತನ್ನ ಮೊಬೈಲ್ ಸಂಖ್ಯೆಯಿಂದ ಬುಕ್ ಮಾಡುವ ಮೂಲಕ, ಆನ್ಲೈನ್ ಮೂಲಕ ಬುಕ್ ಮಾಡಬಹುದು. ನಾಲ್ಕನೆಯದಾಗಿ ಕಂಪನಿಯು ನೀಡಿರುವ ವಾಟ್ಸಾಪ್ ಸಂಖ್ಯೆಯಿಂದ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದು.
ಇಂಡಿಯನ್ ಗ್ಯಾಸ್ ಸಬ್ಸಿಡಿಯನ್ನು ಕೆಲವೇ ನಿಮಿಷಗಳಲ್ಲಿ ಚಂದಾದಾರರು ತಮ್ಮ ಬ್ಯಾಂಕ್ ಖಾತೆಗೆ ಎಲ್.ಪಿ.ಜಿ. ಸಿಲಿಂಡರ್ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು. ಸರ್ಕಾರವು ಎಲ್.ಪಿ.ಜಿ. ಬಳಕೆದಾರರಿಗೆ ಸಬ್ಸಿಡಿ ಒದಗಿಸುತ್ತಿದೆ. ಪ್ರತೀ ತಿಂಗಳು ಒಂದನೇ ತಾರೀಖಿನಂದು ಪರಿಶೀಲಿಸಲಾಗುವುದು. ವರ್ಷಕ್ಕೆ 12ಸಿಲಿಂಡರ್ ಗೆ ಸಬ್ಸಿಡಿಯನ್ನು ನೀಡಲಾಗುವುದು.