ಆಧುನಿಕ ಜೀವನದ ಶೈಲಿಯಿಂದಾಗಿ ಇವತ್ತು 30 ವರ್ಷದವರು 60ವರ್ಷದವರಾಗಿ ಕಾಣುತ್ತಿದ್ದಾರೆ. ಮುಖದ ಮೇಲೆ ಮೊಡವೆಗಳು ಜಾಸ್ತಿ. ಕಾರಣ ಎಣ್ಣೆಯ ಪದಾರ್ಥಗಳನ್ನು ಅತಿಯಾಗಿ ಸೇವನೆ ಮಾಡುವುದು. ಮುಖದ ಮೇಲೆ ಸುಕ್ಕು ಮತ್ತು ಮೊಡವೆಗಳನ್ನು ದೂರ ಮಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಣ್ಣುಗಳನ್ನು ದಿನವೂ ಸೇವನೆ ಮಾಡಬೇಕು. ಆಹಾರದಲ್ಲಿ ಸೊಪ್ಪುಗಳನ್ನು ಬಳಸಬೇಕು. ಇನ್ನೂ ವಯಸ್ಸಾಗದೇ ಕೆಲವರಿಗೆ ಮುಖದ ಮೇಲೆ ನೆರಿಗೆಗಳು ಉಂಟಾಗುತ್ತವೆ. ಇಂತಹವರು ‘ಎಕ್ಸ್ಟ್ರಾ ಒರಿಜಿನ್ ಪ್ಲಸ್ ಆಲೀವ್ ಆಯಿಲ್’ ನ್ನು ಮಾರುಕಟ್ಟೆಯಿಂದ ತಂದು ದಿನಾ ರಾತ್ರಿ ಮಲಗುವ ಮುನ್ನ ಮುಖಕ್ಕೆ ಮಸಾಜ್ ಮಾಡಬೇಕು. ಇದನ್ನು ಒಂದು ತಿಂಗಳು ಮಾಡಿದಾಗ ಪರಿಣಾಮ ಕಾಣಬಹುದು. ಹಾಗೆಯೇ ಗಜ್ಜರಿಯನ್ನು ತೆಗೆದುಕೊಂಡು 2 ಗಜ್ಜರಿಯನ್ನು ಚೆನ್ನಾಗಿ ಬೇಯಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಅದಕ್ಕೆ ಒಂದು 3ಹನಿ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದನ್ನು 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ವಾಷ್ ಮಾಡಿಕೊಳ್ಳಬೇಕು.
ನಿಂಬೆರಸಕ್ಕೆ ನೀರನ್ನು ಸೇರಿಸಿ ಅದನ್ನು ಚೆನ್ನಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಲೂಬಹುದು. ಆಹಾರದಲ್ಲಿ ಬದಲಾವಣೆ ಮಾಡಬೇಕು. ಎಂದರೆ ಒಮೆಗಾ3, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಹಾಗೂ ಹಾಲು ಇಂತಹವುಗಳನ್ನು ಸೇವಿಸಬೇಕು. ಹಾಗೆಯೇ ವಿಟಮಿನ್ ‘ಸಿ’ ಇರುವ ಸೀಬೇಕಾಯಿಯನ್ನು ತಿನ್ನಬೇಕು. ಪೀನಟ್ಸ್ ಗಳನ್ನು ಸೇವಿಸಬೇಕು. ನೀರನ್ನು ಚೆನ್ನಾಗಿ ಕುಡಿಯಬೇಕು. ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಕು. ಅಲೋವೆರಾ ಜೆಲ್ ನ್ನು ರಾತ್ರಿ ಮಲಗುವ ಮುನ್ನ ಹಚ್ಚುವುದರಿಂದ ಚರ್ಮದ ಸುಕ್ಕು ಕಡಿಮೆಯಾಗಿ ಮುಖದಲ್ಲಿ ಕಾಂತಿ ಹೆಚ್ಚುತ್ತದೆ.