ಚಿಕನ್ ಸೇವನೆ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ, ಆದ್ರೆ ಅತಿಯಾಗಿ ಚಿಕನ್ ಸೇವನೆ ಮಾಡುವುದು ಕೂಡ ಅಷ್ಟೊಂದು ಒಳ್ಳೆಯದಲ್ಲ, ಯಾಕೆಂದರೆ ಅತಿಯಾದರೆ ಅಮೃತವು ಕೂಡ ವಿಷ ಅನ್ನೋದು ನೆನಪಿರಲಿ ಆದ್ದರಿಂದ ಮಿತವಾಗಿ ಸೇವನೆ ಮಾಡಿ ಹಿತವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಕೆಲವರಿಗೆ ಚಿಕನ್ ಸೇವನೆ ಅಂದ್ರೆ ತುಂಬಾನೇ ಇಷ್ಟವಾಗಿರುತ್ತದೆ ಇನ್ನು ಕೇವರಿಗೆ ಸಸ್ಯಾಹಾರ ಅಂದ್ರೆ ಇಷ್ಟ ಎಲ್ಲವು ಕೂಡ ಅವರವರ ಅಭಿರುಚಿಗೆ ತಕ್ಕಂತೆ ಇರುವುದು. ವಿಷ್ಯಕ್ಕೆ ಬರೋಣ ಚಿಕನ್ ಸೇವನೆ ಮಾಡುವುದರಿಂದ ದೇಹಕ್ಕೆ ಸಿಗುವ ಲಾಭಗಳೇನು ಅನ್ನೋದನ್ನ ನೋಡಣ.
ಆರೋಗ್ಯದ ದೃಷ್ಟಿಯಿಂದ ನಾಟಿ ಕೋಳಿ ತಿನ್ನುವುದು ಅತಿ ಉತ್ತಮ ಯಾಕೆಂದರೆ ನಾಟಿಕೋಳಿಗಳಿಗೆ ಯಾವುದೇ ಮೆಡಿಶನ್ ಇಂಜಕ್ಷನ್ ಮಾಡಿರೋದಿಲ್ಲ, ಹಳ್ಳಿಗಳಲ್ಲಿ ಸಾಕಿರುವಂತವರು ಇವುಗಳಿಗೆ ಹಳ್ಳಿಯ ವಾತಾವರಣದಲ್ಲಿ ಬೆಳೆಸಿರುತ್ತಾರೆ ಹಾಗಾಗಿ ಇವುಗಳ ಮಾಂಸ ಕೂಡ ಯಾವುದೇ ಅಡ್ಡ ಪರಿಣಾಮ ಬಿರೋದಿಲ್ಲ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹವನ್ನು ಗಟ್ಟಿಮುಟ್ಟಾಗಿ ಬೆಳೆಯುವಂತೆ ಸಹಕಾರಿಯಾಗುತ್ತದೆ ಹಾಗೂ ದೇಹದ ಬೆಳವಣಿಗೆಗೆ ದೇಹದ ಮೂಳೆಗಳ ಬಲವನ್ನು ಹೆಚ್ಚಿಸಲು ದೇಹದಲ್ಲಿನ ಸ್ನಾಯು ಬೆಳವಣಿಗೆಗೆ ಚಿಕನ್ ಉತ್ತಮ ಅನ್ನೋದನ್ನ ಹೇಳಲಾಗುತ್ತದೆ.
ಚಿಕನ್ ನಲ್ಲಿ ಪ್ರೊಟೀನ್ ಅಂಶವನ್ನು ಪಡೆಯಬಹುದಾಗಿದೆ, ಇನ್ನು ನಾಟಿ ಕೋಳಿಯಾ ಮಾಂಸವನ್ನು ತಿನ್ನೋದ್ರಿಂದ ದೇಹಕ್ಕೆ ಯಾವುದೇ ರೋಗಗಳು ಅಂಟೋದಿಲ್ಲ ಅಷ್ಟೇ ಅಲ್ದೆ ಹಳ್ಳಿಗಳಲ್ಲಿ ನಾಟಿ ಔಷಧಿ ಕೊಡುವಾಗ ಕೂಡ ಇದನ್ನೇ ಹೇಳುತ್ತಾರೆ ನಾಟಿ ಕೋಳಿಯನ್ನು ಬಳಸಲು. ಚಿಕನ್ ನಲ್ಲಿರುವಂತ ಖನಿಜಾಂಶಗಳು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿಕೊಡುತ್ತವೆ ಹಾಗೂ ದೇಹದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಆಹಾರ ಖಾದ್ಯಗಳಲ್ಲಿ ಬಳಸಿ ಮಾಡುವಂತ ಚಿಕನ್ ಸೂಪ್ ಜ್ವರದಿಂದ ಉಂಟಾಗುವಂತ ಸುಸ್ತು ನಿವಾರಿಸುತ್ತದೆ, ದೈಹಿಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಒಟ್ಟಾರೆಯಾಗಿ ಹತ್ತಾರು ಲಾಭಗಳನ್ನು ಚಿಕನ್ ಸೇವನೆಯಿಂದ ಪಡೆದುಕೊಳ್ಳಬಹುದಾಗಿದೆ. ಫಾರಂ ಕೋಳಿಗಳಿಗಿಂತ ನಾಟಿ ಕೋಳಿ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿ ಅನ್ನೋದನ್ನ ಹೇಳಬಹುದಾಗಿದೆ.