ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಆಹಾರದ ಕೊರತೆ ಕಾಣದೆ ಇರಲಿ ಎಂಬ ಕಾರಣದಿಂದ ರೇಷನ್ ಕಾರ್ಡ್ ಎನ್ನುವುದನ್ನು ಜಾರಿಗೆ ತರಲಾಗಿದೆ. ಇಂತಹ ರೇಷನ್ ಕಾರ್ಡ್ ಅನ್ನು ಆನ್ಲೈನ್ ನಿಂದ ವಾಟರ್ ಮಾರ್ಕ್ ಇಲ್ಲದೆಯೆ ಪ್ರಿಂಟ್ ತೆಗೆಯುವುದು ಹೇಗೆ ಎಂಬುದನ್ನು ತಿಳಿಯೋಣ.

ರೇಷನ್ ಕಾರ್ಡ್ ಹರಿದು ಹೋಗಿರುತ್ತದೆ. ಇಲ್ಲವೆ ಕಳೆದು ಹೋಗಿರುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವವರು ಮತ್ತೆ ಪ್ರಿಂಟ್ ತೆಗೆಯಲು ಹಾಗೂ ವಾಟರ್ ಮಾರ್ಕ್ ಇಲ್ಲದೆ ಪ್ರಿಂಟ್ ತೆಗೆಯುವ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ ಕಂಪ್ಯೂಟರ್ ನ ಡೆಸ್ಕ್‌ಟಾಪ್ ಮೇಲೆ ಯಾವುದೇ ಬ್ರೌಸರ್ ತೆರೆದುಕೊಳ್ಳಿ. ನಂತರ ಸರ್ಚ್ ಬಾರ್ ನಲ್ಲಿ ahara.kar.nic.in ಎಂದು ಟೈಪ್ ಮಾಡಿ ಆಫಿಶಿಯಲ್ ವೆಬ್ ಸೈಟ್ ಓಪನ್ ಮಾಡಿಕೊಳ್ಳಬೇಕು. ವೆಬ್ ಸೈಟ್ ಓಪನ್ ಆದ ನಂತರ ಪೇಜ್ ನ ರೈಟ್ ಸೈಡ್ ನಲ್ಲಿ ಇ- ಸೇವೆಗಳು ಎಂದು ಇರುತ್ತದೆ. ಅದನ್ನು ಓಪನ್ ಮಾಡಿ. ನಂತರ ಎಡಗಡೆಯಲ್ಲಿ ಇ-ಸ್ಥಿತಿ ಎಂದು ಇರುತ್ತದೆ. ಅದನ್ನು ಒತ್ತಿದರೆ ಹೊಸ ಪಡಿತರ ಚೀಟಿಯ ಸ್ಥಿತಿ ಎಂದು ಕಾಣಿಸುತ್ತದೆ ಅದನ್ನು ಒತ್ತಿರಿ. ನಂತರ ಕೆಲವು ಜಿಲ್ಲೆಗಳು ಕಾಣಸಿಗುತ್ತದೆ ಯಾವ ಜಿಲ್ಲೆ ಎಂಬುದನ್ನು ಸರಿಯಾಗಿ ಆರಿಸಿ. ಮೇಲೆ ಇರುವ ಲಿಂಕ್ ಬೆಂಗಳೂರಿನಲ್ಲಿ ವಾಸಿಸುವ ಜನರಿಗಾಗಿ ಮಾತ್ರ. ಬೇರೆ ಯಾವುದೇ ಜಿಲ್ಲೆಯವರಾದರೆ ಕೆಳಗೆ ಇರುವ ಲಿಂಕ್ ಒತ್ತಿರಿ. ನಂತರದಲ್ಲಿ ಅಲ್ಲಿ ಇರುವ ಪಡಿತರ ಚೀಟಿ ವಿವರ ಎಂದು ಇರುತ್ತದೆ ಅದನ್ನು ಆಯ್ಕೆ ಮಾಡಿ. ರೇಷನ್ ಕಾರ್ಡ್ ಪಡೆಯಲು ಎರಡು ರೀತಿಯ ಸಾಧ್ಯತೆ ಇದೆ. ಓಟಿಪಿ ಪಡೆದು ಅಥವಾ ಓಟಿಪಿ ಪಡೆಯದೆ ಪ್ರಿಂಟ್ ತೆಗೆಯುವುದು. ಈಗ ಇಲ್ಲಿ ಓಟಿಪಿ ಪಡೆದು ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ ರೇಷನ್ ಕಾರ್ಡ್ ನಂಬರ್ ಕೇಳುತ್ತದೆ. ಅಲ್ಲಿ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಪಕ್ಕದಲ್ಲಿ ಇರುವ ಗೋ ಬಟನ್ ಒತ್ತಬೇಕು. ನಂತರದಲ್ಲಿ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಹೆಸರು ಕಾಣಿಸಿಕೊಳ್ಳುತ್ತದೆ. ಈ ಸದಸ್ಯರಲ್ಲಿ ಯಾರ ಆಧಾರ್ ಕಾರ್ಡ್ ಗೆ ನಂಬರ್ ಲಿಂಕ್ ಇರುತ್ತದೆಯೊ ಅವರ ಹೆಸರನ್ನು ಆಯ್ದುಕೊಳ್ಳಬೇಕು.

ನಂತರ ಪಕ್ಕದಲ್ಲಿ ಇರುವ ಗೋ ಬಟನ್ ಒತ್ತಿದರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಂಬರ್ ಗೆ ಓಟಿಪಿ ಬರುತ್ತದೆ. ಕೆಳಗಡೆ ಓಟಿಪಿ ನಂಬರ್ ಹಾಕಿ ಗೋ ಬಟನ್ ಒತ್ತಬೇಕು. ನಂತರ ರೇಷನ್ ಕಾರ್ಡ್ ನ ಸ್ಥಿತಿ ಹೇಗಿದೆ, ಯಾರು ಯಾರು ಸದಸ್ಯರು ಇದ್ದಾರೆ ಎಂಬ ಎಲ್ಲಾ ಮಾಹಿತಿ ಕಾಣಿಸುತ್ತದೆ. ಬಲಗಡೆ ಕೆಳಗೆ ರೇಷನ್ ಕಾರ್ಡ್ ವಿವರ ಅಥವಾ ವಿವ್ ರೇಷನ್ ಕಾರ್ಡ್ ಎಂದು ಬರೆದಿರುತ್ತದೆ ಅದನ್ನು ಒತ್ತಬೇಕು. ನಂತರ ರೇಷನ್ ಕಾರ್ಡ್ ಕಾಪಿ ಕಾಣಿಸುತ್ತದೆ. ಆದರೆ ಅದರ ಮೇಲೆ ಸ್ಪೆಸಿಮನ್ ಕಾಪಿ ಎಂದು ಕಾಣಿಸುತ್ತಿರುತ್ತದೆ. ಇದನ್ನು ತೆಗೆಯುವ ವಿಧಾನ ಹೇಗೆಂದರೆ ಮೌಸ್ ನ ಬಲಗಡೆಯ ಬಟನ್ ಒತ್ತಿದಾಗ ಸಣ್ಣದಾದ ಒಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಇನ್ಸ್‌ಪೆಕ್ಟ್ ಎಂದು ಕಾಣಿಸುತ್ತದೆ. ಇಲ್ಲವೆ ಕೀ ಬೊರ್ಡ್ ನಲ್ಲಿ ಕಂಟ್ರೋಲ್‌+ಶಿಪ್ಟ್+ ಐ ಅಷ್ಟನ್ನು ಏಕಕಾಲದಲ್ಲಿ ಒತ್ತಬೇಕು. ಆಗಲೂ ಈ ಇನ್ಸ್‌ಪೆಕ್ಟ್ ಎಂಬ ಆಯ್ಕೆ ತೆರೆಯುತ್ತದೆ. ನಂತರದಲ್ಲಿ ಕೀ ಬೊರ್ಡ್ ನಲ್ಲಿ ಕಂಟ್ರೋಲ್+ ಎಫ್ ಒತ್ತಬೇಕು. ಆಗ ಅಲ್ಲಿ ಒಂದು ಸರ್ಚ್ ಬಾರ್ ಕಾಣಿಸಿಕೊಳ್ಳುತ್ತದೆ. ಸರ್ಚ್ ಬಾರ್ ನಲ್ಲಿ ಸ್ಪೇಸಿಮನ್ ಎಂದು ಬರೆಯಬೇಕು. ನಂತರ ಅಲ್ಲಿ ಸ್ಪೇಸಿಮನ್ ಎಂದು ಬರೆದಿರುವ ಚಿತ್ರ ಕಾಣಸಿಗುತ್ತದೆ ಸ್ಪೇಸಿಮನ್ ಎಂದು ಬರೆದಿರುವಲ್ಲಿ ರೈಟ್ ಬಟನ್ ಒತ್ತಿದರೆ ಡಿಲಿಟ್ ಎಲಿಮೆಂಟ್ ಎಂಬ ಆಯ್ಕೆ ತೋರಿಸುತ್ತದೆ. ಅದನ್ನು ಒತ್ತಬೇಕು. ಹೀಗೆ ಮಾಡಿದಾಗ ರೇಷನ್ ಕಾರ್ಡ್ ಮೇಲೆ ಬರೆದಿರುವ ಸ್ಪೇಸಿಮನ್ ಎಂಬ ಬರಹವು ತೆಗೆಯಲ್ಪಡುತ್ತದೆ. ನಂತರ ರೇಷನ್ ಕಾರ್ಡ್ ಪ್ರಿಂಟ್ ತೆಗೆಯಬಹುದು.

ಮೇಲೆ ತಿಳಿಸಿದ ವಿಧಾನದಲ್ಲಿ ವಾಟರ್ ಮಾರ್ಕ್ ಇಲ್ಲದೆಯೆ ಹೇಗೆ ರೇಷನ್ ಕಾರ್ಡ್ ಪ್ರಿಂಟ್ ತೆಗೆಯುವುದು ಎಂಬುದನ್ನು ವಿವರಿಸಲಾಗಿದೆ. ಇದೇ ರೀತಿಯಲ್ಲಿ ತುಂಬಾ ಸುಲಭವಾಗಿ ರೇಷನ್ ಕಾರ್ಡ್ ಪ್ರಿಂಟ್ ತೆಗೆದುಕೊಳ್ಳಲು ಸಾಧ್ಯ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!