ಇತಿಹಾಸಗಳ ಕಥೆಗಳೂ ನಮ್ಮ ಓದಿನಲ್ಲಿ ಒಂದು ಪಠ್ಯ. ಇತಿಹಾಸದ ಪುಟ ಸೇರಿದ ಕೆಲವು ಕಥೆಗಳನ್ನು, ಘಟನೆಗಳನ್ನು ನಮ್ಮ ಓದಿಗಾಗಿ ಪಠ್ಯದಲ್ಲಿ ಪಾಠವಾಗಿ ಸೇರಿಸಿದ್ದಾರೆ. ಎಲ್ಲಾ ಪೀಳಿಗೆಯ ಮಕ್ಕಳಿಗೂ ನಮ್ಮ ಪೂರ್ವಜರ ಹೋರಾಟ, ಸಂಘರ್ಷಗಳು ಸ್ಪೂರ್ತಿಯಾಗಲಿ ಎಂದು. ಆದರೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಕೊಡಲಾದ ಇತಿಹಾಸದ ಕಥೆಗಳು ಎಷ್ಟು ನಿಜವಾದದ್ದು? ಎಷ್ಟು ವಿಷಯಗಳು ಸಮಗ್ರವಾದವು ಎಂಬ ಪ್ರಶ್ನೆಗಳನ್ನು ಎದುರು ಇಟ್ಟುಕೊಂಡು ಧರ್ಮೆಂದ್ರ ಕುಮಾರ್ ಅರೇನಹಳ್ಳಿ, ಖ್ಯಾತ ಇತಿಹಾಸ ತಜ್ಞರು. ಇವರು ಮತ್ತು ಅಲ್ಮಾ ಮೀಡಿಯಾ ಸ್ಕೂಲ್ ನ ವಿಧ್ಯಾರ್ಥಿಗಳು ಒಂದು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಇದರ ಬಗೆಗಿನ ಮಾಹಿತಿ ನಾವೂ ತಿಳಿಯೋಣ.

ಕರ್ನಾಟಕ ಭಾಗದವರು ಹೆಮ್ಮೆ ಪಡಬೇಕಾದ ವಿಷಯ ಯಾವುದೆಂದರೆ ಹಳೆಯ ಮೈಸೂರು ಸಂಸ್ಥಾನದಷ್ಟು ತಾಕತ್ತು ಹಾಗೂ ಒಗ್ಗಟ್ಟಿನಿಂದ ಪ್ರತಿರೋಧ ಒಡ್ಡಿ ಬ್ರಿಟಿಷರನ್ನು ಎದುರಿಸಿದವರು ಯಾರು ಇಲ್ಲ. ಬ್ರಟಿಷರು ಇವರ ಸಹವಾಸ ಸಾಕು ಎನ್ನುವಷ್ಟು ಪ್ರತಿರೋಧವನ್ನು ಮೂವತ್ತಾರು ವರ್ಷ ಒಡ್ಡಿದ್ದರು. ಬ್ರಿಟಿಷರು ತಮ್ಮೆಲ್ಲಾ ಆಸ್ತಿಯನ್ನು ನಾಲ್ಕನೆಯ ಆಂಗ್ಲೊ ಮೈಸೂರು ಯುದ್ಧಕ್ಕಾಗಿ ಬಳಸಿದ್ದರು. ಬ್ರಿಟಿಷರ ಪಾಲಿಗೆ ಈ ಯುದ್ಧ ಮಾಡು ಇಲ್ಲವೇ ಮಡಿ ಹೋರಾಟವಾಗಿತ್ತು. ಒಂದು ವೇಳೆ ಬ್ರಿಟಿಷರು ಸೋತಿದ್ದರೆ ಇಂಗ್ಲೆಂಡ್ ಮುಳುಗಿ ಹೋಗುತ್ತಿತ್ತು. ಯಾಕೆಂದರೆ ಲಂಡನ್ ನಿಂದಲೂ ಸಾಲ ಪಡೆದಿದ್ದರು. ಆದರೆ ಮೇ 4 ರಂದು ಶ್ರೀರಂಗಪಟ್ಟಣವನ್ನು ಅವರೆ ಗೆದ್ದು, ಸಪ್ಟೆಂಬರ್ ನಲ್ಲಿ ಗೆದ್ದ ಸಂತೋಷದ ಕೂಟದಲ್ಲಿ ಇಂದೂ ಭಾರತ ನಮ್ಮದಾಯಿತು ಎನ್ನುತ್ತಾರೆ. ಉಳಿದ ಉತ್ತರ ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಗೆದ್ದು ಬಂದ ಅವರಿಗೆ ಶ್ರೀರಂಗಪಟ್ಟಣ ಅಂದರೆ ಮೈಸೂರು ಸಂಸ್ಥಾನ ಗೆಲ್ಲುವುದು ಕಷ್ಟವಿತ್ತು. ಇಡೀ ವಿಶ್ವದ ಕಣ್ಣು ಈ ಯುದ್ಧದ ಗತಿಯ ಮೇಲೆಯೆ ಇತ್ತು. ಯಾಕೆಂದರೆ ಎರಡು ಲಕ್ಷ ಸೈನಿಕರನ್ನು ಮೈಸೂರು ಸಂಸ್ಥಾನದ 40 ಸಾವಿರ ಸೈನಿಕರ ಎದುರು ನಿಲ್ಲಿಸಿದ್ದರು. ವೀರ ವನಿತೆ ಎಂದ ಕೂಡಲೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನಲ್ಲ, ಝಾನ್ಸಿ ರಾಣಿ ಲಕ್ಷ್ಮೀಬಾಯಿ. ಅವಳು ಬೆಂಬಲವಿಲ್ಲದೆ ಹೋರಾಡುವ ಸಮಯದಲ್ಲಿ ಮೈಸೂರಿನ ಮೂರನೆ ಕೃಷ್ಣರಾಜ ಒಡೆಯರ್ ತನ್ನ ನಂಬಿಗಸ್ಥ ಭಾಮೈದನ ಹತ್ತಿರ ಮೂರು ಸಾವಿರ ಚಿನ್ನದ ವರಹ ಕಳುಹಿಸುತ್ತಾರೆ. ಅವಳ ಹೋರಾಟಕ್ಕೂ ಬೆಂಬಲವಾಗಿ ನಿಂತವರು ಕನ್ನಡಿಗರು. ಧರ್ಮೇಂದ್ರ ಅವರ ಅಜ್ಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ವೈದ್ಯರು. ಇದರಿಂದಾಗಿ ಮಹಾರಾಜರ ಕಡೆಯಿಂದ ಒಂದು ಮನೆಯನ್ನು ಧರ್ಮೇಂದ್ರ ಅವರ ತಾತನಿಗೆ ನೀಡಲಾಗಿತ್ತು. ಹಾಗಾಗಿ ಅರಮನೆ ಮತ್ತು ಮನೆ ಎರಡು ಒಂದೆ ಭಾವನೆ ಕೊಡುತ್ತದೆ. ಅಲ್ಲಿಯೆ ಆಡಿ ಬೆಳೆದವರು ನಮ್ಮ ಕಾಲದಲ್ಲಿ. ಅರಮನೆಯಲ್ಲಿ ಕಾರ್ಯಕ್ರಮ ಆದರೆ ಸುತ್ತಲಿರುವ ಎಲ್ಲ ಮನೆಗಳಿಗೂ ಹಬ್ಬವೆ ಅರಮನೆಯ ತಿಂಡಿಗಳೆಲ್ಲವೂ ನಮ್ಮಗಳ ಮನೆಗೂ ಬರುತ್ತಿತ್ತು. ಮೂರು ಪ್ರಮುಖ ಜಾಗಗಳಿವೆ ಇತಿಹಾಸ ಓದಲು ಅವುಗಳು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್ ಇತಿಹಾಸ ಪುಸ್ತಕಗಳನ್ನು ಅಲ್ಲೆ ಕುಳಿತು ಓದಬಹುದು. ಎಥಿಕ್ ಸೊಸೈಟಿ, ನೃಪತುಂಗ ರಸ್ತೆ ಲೈಬ್ರರಿ. ಕರ್ನಾಟಕ ಸ್ಟೇಟ್ ಆರ್ಕೆನ್ಸ್ , ವಿಧಾನ ಸೌಧ ಗ್ರೌಂಡ್ ಫ್ಲೋರ್ ನಲ್ಲಿ ಇದೆ. ಇದರ ಒಳಗೆ ಹೋಗಲು ಅನುಮತಿ ಬೇಕು. ಆದರೆ ಇತಿಹಾಸದ ಮೂಲ ಪ್ರತಿಗಳು ಇಲ್ಲಿ ಸಿಗುತ್ತವೆ ಎನ್ನುತ್ತಾರೆ.

ಮೈಸೂರಿನ ಮೇಲಿನ ನಂಟು ಇತಿಹಾಸದ ಮೇಲಿನ ಕೂತುಹಲಕ್ಕೆ ಕಾರಣವಾಯಿತು. ಎಲ್ಲಾ ಕಡೆಗಳಲ್ಲಿ ಅರಮನೆ ಒಂದು ಕಡೆ ಊರು ಒಂದು ಕಡೆ ಇದ್ದರೆ ಮೈಸೂರಿನಲ್ಲಿ ಮಾತ್ರ ಇಡಿ ಊರೆ ಅರಮನೆ. ಜನರ ಮಧ್ಯೆ ಅರಮನೆಯವರು ಇರುತ್ತಿದ್ದರು. ಆಗಿನ ಕಾಲದಲ್ಲಿ ಅರಮನೆಯೊಳಗೆ ಜನಸಾಮಾನ್ಯರ ಪ್ರವೇಶಕ್ಕೆ ಇವತ್ತಿನಂತೆ ಅನುಮತಿ ಬೇಕಾಗಿರಲಿಲ್ಲ. ಮೈಸೂರಿನ ಮೂವತ್ತು ಅರಮನೆಗಳಲ್ಲಿಯೂ ಓಡಾಟವಿತ್ತು. ಧರ್ಮೇಂದ್ರ ಅವರ ಮರೆತು ಹೋದ ಮೈಸೂರಿನ ಪುಟಗಳು ಎಂಬ ಪುಸ್ತಕದಲ್ಲಿ ಕೆಲವು ಮೈಸೂರಿನ ವಿಚಾರಗಳನ್ನು ಬರೆದಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ದುರ್ಗದ ವಿಚಾರ ಬಂದರೆ ಆರು ನೂರು ವರ್ಷಗಳ ಇತಿಹಾಸದಲ್ಲಿ ಐದು ನೂರು ವರ್ಷಗಳ ಇತಿಹಾಸದ ಬಗ್ಗೆ ಕೆಲವರಿಗೆ ತಿಳಿದಿದಲ್ಲ. ಚಿತ್ರದುರ್ಗದ ಹೋರಾಟ ಅಂದ ಕೂಡಲೆ ಓಬವ್ವ, ಮದಕರಿ ನಾಯಕ ನೆನಪಾಗುತ್ತಾರೆ. ಇವರದು ಕೇವಲ ಇಪ್ಪತ್ತು ವರ್ಷಗಳ ಇತಿಹಾಸ ದಾಖಲಾಗಿದೆ ಅಷ್ಟೆ. ಉಳಿದವುಗಳನ್ನು ಕಡೆಗಣಿಸಿದ್ದೆವೆ. ಏಳುಸುತ್ತಿನ ಕೋಟೆಯಂತಹ ಕೋಟೆ ಮತ್ತೆಲ್ಲೂ ಕಾಣ ಸಿಗುವುದು ಅಸಾಧ್ಯ. ಹೈದರಾಲಿ ಪ್ರೆಂಚ್ ರ ಜೊತೆ ದುರ್ಗದ ಮೇಲೆ ಯುದ್ಧಕ್ಕೆ ಹೋದಾಗ ಸತತ ವಾರದ ವರೆಗೂ ಪಿರಂಗಿ ಹಾರಿಸಿದರೂ ದುರ್ಗದ ಕೋಟೆಯ ಒಂದು ಕಲ್ಲನ್ನು ಕದಲಿಸಲು ಸಾಧ್ಯವಾಗಲಿಲ್ಲ. ಅಂತಹ ಕೋಟೆ ದುರ್ಗದ ಕೋಟೆ. ಹೈದರಾಲಿ ಬೇಸತ್ತು ತನ್ನ ವಕೀಲನೊಬ್ಬನನ್ನು ಮಾತು ಕಥೆಗೆ ಕಳುಹಿಸುತ್ತಾನೆ. ಅವನು ಬಂದವನು ಹೇಳುತ್ತಾನೆ ಇನ್ನೂ ಹನ್ನೆರಡು ವರ್ಷಗಳಿಗೆ ಸಾಕಾಗುವಷ್ಟು ನೀರು ಧಾನ್ಯ ಎಲ್ಲ ಇದೆ, ಹನ್ನೆರಡು ವರ್ಷಗಳ ಕಾಲ ನೀನು ಏನೆ ಮಾಡಿದರೂ ಗೆಲ್ಲಲೂ ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಹೈದರಾಲಿ ಒಡೆದು ಆಳುವ ರೀತಿಯ ಅನುಸರಿಸುವುದರಿಂದ ಯುದ್ಧ ಗೆಲ್ಲುತ್ತಾನೆ. ಭಾರತದ ಒಳಜಗಳೆ ಎಲ್ಲಾ ಯುದ್ಧಗಳ ಸೋಲಿಗೆ ಕಾರಣ ಇಲ್ಲವಾದರೆ ಅತ್ಯಂತ ಪ್ರಬಲ ನಾಯಕರು ನಮ್ಮವರು. ಅತ್ಯಂತ ಅದ್ಭುತವಾದ ಪರಾಕ್ರಮಶಾಲಿಗಳು ದುರ್ಗದ ಮದಕರಿ ನಾಯಕರು. ಮಯೂರ ನಿರ್ಮಿತ ಕೆರೆಯೆ ಪ್ರಪ್ರಥಮ ಮಾನವ ನಿರ್ಮಿತ ಕೆರೆ ಇದು ಇರುವುದು ಚಂದ್ರವಳ್ಳಿಯ ಚಿತ್ರದುರ್ಗದಲ್ಲಿ. ಇತಿಹಾಸವನ್ನು ಬರೆಯುವಾಗ ಗೆದ್ದ ಸಿಂಹದ ದೃಷ್ಟಿಯಿಂದ ಬರೆಯುತ್ತಾರೆ. ಆದರೆ ಸತ್ತ ಸಿಂಹದ ಕಣ್ಣಲಿನ ಇತಿಹಾಸ ಬೇರೆಯೆ ಇರುತ್ತದೆ ಎನ್ನುತ್ತಾರೆ‌.

ಇದು ಹೇಗೆ ಇರುತ್ತದೆ ಎಂದರೆ ಕುರುಡರ ಗುಂಪು ಆನೆಯನ್ನು ವರ್ಣಿಸಿದ ಹಾಗೆ ಇರುತ್ತದೆ. ಅವರವರ ವಾದ ಬೇರೆ ಇರುತ್ತದೆ. ಇತಿಹಾಸ ಎನ್ನುವುದು ಹಳೆಯದರ ಅಧ್ಯಯನದ ಜೊತೆ ಜೊತೆಗೆ ಹೊಸದರ ಅಧ್ಯಯನವೂ ಇರಬೇಕು. ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿ ಹೊಂದಿರಬೇಕು. ಹುಡುಕಿದಂತೆ ದಿನ ದಿನವೂ ಹೊಸದಾಗಿ ಹೊರಬರುತ್ತದೆ ಇತಿಹಾಸ. ಸರಕಾರದಲ್ಲಿ ಟೂರಿಸಮ್ ಗೆ ಅಂತ ಒಂದು ಇಲಾಖೆ ಇದೆ. ಅದರ ವತಿಯಿಂದ ಐತಿಹಾಸಿಕ ಸ್ಥಳಗಳ ವಿವರಣೆ ಮಾಡಿ ಜನರಿಗೆ ಐತಿಹಾಸಿಕ ಸ್ಥಳಗಳ ಪರಿಚಯ ಮಾಡಿದರೆ ಅದರಷ್ಟು ಉತ್ತಮ ಬೇರೆ ಏನೂ ಇರುವುದಿಲ್ಲ. ನಮ್ಮಿಂದ ತೆಗೆದುಕೊಂಡು ಹೋದ ವಸ್ತುಗಳನ್ನು ಇಂಗ್ಲೆಂಡ್ ಹಿಂದಿರುಗಿಸಿದರೆ ಇಂಗ್ಲೆಂಡ್ ನ ಮ್ಯೂಸಿಯಂ ಖಾಲಿಯಾಗಿ ಬಿಡುತ್ತದೆ. ಅಷ್ಟು ಭಾರತದ ಸಂಪತ್ತುಗಳ ಸಂಗ್ರಹವಿದೆ ಇಂಗ್ಲೆಂಡ್ ನಲ್ಲಿ. ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಎಂದು ಒಡೆಯಲು ಕಾರಣ ಬ್ರಿಟಿಷರು. ಅವರು ಮೂರಾಗಿ ಒಡೆದಿದ್ದನ್ನು ಮತ್ತೆ ಹೈದರಾಲಿ ಒಟ್ಟುಗೂಡಿಸಿದಾಗ ಏಕೀಕರಣ ಆಗಿದ್ದು. ಇನ್ನೂ ಇತಿಹಾಸಗಳನ್ನು ತಿರುಚಿ ಬರೆದಿದ್ದಾರೆ ಉತ್ತರದವರೆ ಹೆಚ್ಚು ಹೋರಾಟ ಮಾಡಿದ್ದಾರೆ ಎಂದೆಲ್ಲ ಬರೆದಿದ್ದು ಹಿಂದಿನಿಂದಲೂ ಇತ್ತು. ರಾಮಾಯಣ, ಮಹಾಭಾರತ ದಂತಹ ಯುದ್ಧ ನಡೆದ ಹಿರಿಮೆಯೂ ಸೇರಿ ಅವರು ಹೆಮ್ಮೆ ಪಟ್ಟರು. ಮೊದಲು ಮೊಘಲರು ಯುದ್ಧ ಮಾಡಿದ್ದು ಉತ್ತರಭಾರತದವರ ಮೇಲೆ ಹಾಗಾಗಿ ಅವರ ಹೆಮ್ಮೆಗೆ ಹಾಗೆ ಬರೆಯಲಾಗಿದೆ. ಆದರೆ ಮತ್ತೊಂದು ವಿಷಯ ಏನೆಂದರೆ ಹದಿಮೂರನೇ ಶತಮಾನದ ಹಿಂದೆ ಎಲ್ಲಿಯೂ ರಾಮ, ಕೃಷ್ಣ, ಹಾಗೂ ಆಂಜನೇಯನ ದೇವಸ್ಥಾನ ಇದ್ದ ಸುಳಿವು ಇಲ್ಲ. ಯಾವ ಅರಸರ ಹೆಸರು ರಾಮ, ಕೃಷ್ಣ ಹೆಸರಿನಿಂದ ಕೂಡಿರಲಿಲ್ಲ. ಹದಿಮೂರನೆಯ ಶತಮಾನದ ನಂತರ ಈ ಹೆಸರುಗಳ ಬಳಕೆ ಪ್ರಾರಂಭವಾಯಿತು. ಇಮ್ಮಡಿ ಪುಲಕೇಶಿ, ಮಯೂರ ವರ್ಮ, ವಿಕ್ರಮಾದಿತ್ಯ, ರಾಷ್ಟ್ರಕೂಟರು, ನೃಪತುಂಗ, ಬಿಟ್ಟಿದೇವ, ವಿಷ್ಣುವರ್ಧನ, ಬಸವಣ್ಣ ಬಂದರೂ ಯಾರ ಹೆಸರೂ ರಾಮ ಕೃಷ್ಣ ಹೆಸರಿನಿಂದ ಇರಲಿಲ್ಲ. ಕುಮಾರ ರಾಮಾ ಎಂಬ ಹೆಸರು ಮೊಟ್ಟ ಮೊದಲು ಹದಿಮೂರನೆಯ ಶತಮಾನದಲ್ಲಿ ಬಂದಿದ್ದು. ಅದರ ನಂತರದ ಅರಸರು ರಾಮ, ಕೃಷ್ಣನ ಹೆಸರಿನ ಬಳಕೆ ಮಾಡಿದ್ದರು. ಇದು ತೋರಿಸುವುದು ಏನೆಂದರೆ ಮೊದಲು ಈಶ್ವರನ ಹೊರತಾಗಿ ರಾಮ, ಕೃಷ್ಣ ದೇವರ ಇರುವಿಕೆ ಇರಲಿಲ್ಲ. ವೈಷ್ಣವ ಸಂಪ್ರದಾಯ ಬಂದನಂತರ ಬಂದ ದೇವರುಗಳು ರಾಮ ಹಾಗೂ ಕೃಷ್ಣ. ನಮ್ಮಲ್ಲಿ ಗ್ರಾಮ ದೇವರೆ ಮುಖ್ಯ ಈಗಲೂ. ಬೇರೆ ಕಡೆಯಿಂದ ಹರಿದು ಬಂದ ಸಂಪ್ರದಾಯವಿದು ಎನ್ನುತ್ತಾರೆ ಧರ್ಮೇಂದ್ರ.

ಇವುಗಳು ಕೆಲವು ಮರೆಯಾದ, ಕೆಲವು ಇತಿಹಾಸದ ಪುಟಗಳಲ್ಲಿ ಉಳಿದು ಹೋದ ಕಥೆಗಳು. ಇನ್ನು ಇಂತಹ ಎಷ್ಟೋ ಕಥೆಗಳಿವೆ ಅವುಗಳನ್ನು ದಿನ ನಿತ್ಯವೂ ಅಭ್ಯಯಿಸಿದರೆ ಮಾತ್ರ ಹೊಸದಾದ ತಿರುವುಗಳ ಅನಾವರಣ ಆಗುತ್ತದೆ. ಇತಿಹಾಸ ತಜ್ಞರಾದ ಧರ್ಮೇಂದ್ರ ಕುಮಾರ್ ಅವರು ಕೆಲವು ಪುಸ್ತಕಗಳಲ್ಲಿ ಇದರ ಉಲ್ಲೇಖ ಮಾಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!