ಟಿ.ಆರ್ .ಪಿಯನ್ನು ಎಲ್ಲರೂ ಕೇಳಿದ್ದೇವೆ. ಪ್ರತಿಯೊಂದು ಕಾರ್ಯಕ್ರಮಗಳು ಮತ್ತು ಆಪ್ ಗಳು ಹೆಚ್ಚಾಗಿ ಟಿ ಆರ್ ಪಿ ಯನ್ನು ತೋರಿಸುತ್ತದೆ.ನಾವು ಇಲ್ಲಿ ಟಿ ಆರ್ ಪಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರತಿ ಚಾನಲ್ ಗಳು ಹೆಚ್ಚಾಗಿ ಟಿ ಆರ್ ಪಿಯ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರುತ್ತವೆ.ಹೆಚ್ಚು ಟಿ.ಆರ್.ಪಿಗಳು ಬಂದರೆ ಆ ಚಾನಲ್ ನ ಜಾಹೀರಾತುವಿನಿಂದ ಹೆಚ್ಚು ಹಣ ಬರುತ್ತದೆ ಎಂದು ಅರ್ಥ.ಅಂದರೆ ಹೆಚ್ಚು ಟಿ.ಆರ್ .ಪಿಇದ್ದರೆ ಹೆಚ್ಚು ಹಣ ಬರುತ್ತದೆ ಎಂದು ಅರ್ಥ.ಆದ್ದರಿಂದ ಪ್ರತೀ ಚಾನಲ್ ಗಳು ಈ ಟಿ.ಆರ್. ಪಿ ಗೋಸ್ಕರವೇ ವಿಭಿನ್ನ ವಿಭಿನ್ನ ರೀತಿಯಲ್ಲಿ ಜಾಹೀರಾತುಗಳನ್ನು ಹಾಕುತ್ತಾರೆ.
ಟಿ.ಆರ್. ಪಿ ಎಂದರೆ ಟೆಲಿವಿಷನ್ ರೇಟಿಂಗ್ ಸಿಸ್ಟಮ್.ಇದು ಯಾವ ಚಾನಲ್ ಗೆ ಮತ್ತು ಯಾವ ಕಾರ್ಯಕ್ರಮಕ್ಕೆ ಹೆಚ್ಚು ಜನಪ್ರಿಯತೆ ಇದೆ ಎನ್ನುವುದನ್ನು ತಿಳಿಸುತ್ತದೆ.ಈ ಟಿ ಆರ್ ಪಿ ಆಧಾರದ ಮೇಲೆ ಜಾಹೀರಾತಿನ ಕಂಪನಿಗಳು ಯಾವ ಕಾರ್ಯಕ್ರಮಕ್ಕೆ ಜಾಹೀರಾತು ಕೊಡಬೇಕು ಅನ್ನುವುದನ್ನು ನಿರ್ಧರಿಸುತ್ತವೆ. ಈ ರೀತಿಯಲ್ಲಿ ಯಾವ ಚಾನಲ್ ಗೆ ಹೆಚ್ಚು ಟಿ ಆರ್ ಪಿ ಇರುತ್ತದೆಯೋ ಜಾಹೀರಾತುಗಳ ಕಂಪನಿಗಳು ಅವರಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ಉದಾಹರಣೆಗೆ ರೇಟಿಂಗ್ ಇರುವ ಚಾನಲ್ ಒಂದು ಜಾಹೀರಾತುವನ್ನು 10ಸೆಕೆಂಡ್ ಗಳ ಕಾಲ ಶೋ ಮಾಡಬೇಕಾದರೆ 200 ರಿಂದ 5ಲಕ್ಷದವರೆಗೆ ಚಾರ್ಜ್ ಮಾಡುತ್ತದೆ.
ಇದು ಅವರ ಟಿ.ಆರ್ .ಪಿ ಮತ್ತು ಜನಪ್ರಿಯತೆ ಆಧಾರದ ಮೇಲೆ ಇರುತ್ತದೆ.ಟಿ.ಆರ್ .ಪಿಯನ್ನು BARC ಎನ್ನುವ ಒಂದು ಇಂಡಿಯಾದ ಸಂಸ್ಥೆ ಲೆಕ್ಕಾಚಾರ ಮಾಡುತ್ತದೆ.ಈ ಸಂಸ್ಥೆ ರೇಟಿಂಗ್ ಕೊಡಲು ಎರಡು ವಿಧಾನಗಳಲ್ಲಿ ಕೆಲಸ ಮಾಡುತ್ತದೆ.ಒಂದು ಮನೆಯಲ್ಲಿ ಟಿವಿ ನೋಡುವವರ ಬಗ್ಗೆ ತಿಳಿಯಲು ದೊಡ್ಡ ಪ್ರಮಾಣದಲ್ಲಿ ಸರ್ವೇ ಮಾಡುತ್ತಾರೆ.ಅದಕ್ಕಾಗಿ ಟಿವಿಗೆ ಒಂದು ಮೀಟರ್ ಅಳವಡಿಸುತ್ತಾರೆ.ಈ ಮೀಟರ್ ಅವರು ಯಾವ ಚಾನಲ್ ನೋಡುತ್ತಿದ್ದಾರೆ ಎನ್ನುವ ಡಾಟಾವನ್ನು ಶೇಖರಿಸುತ್ತದೆ.
ಎರಡನೆಯ ವಿಧಾನದಲ್ಲಿ ಜನರು ಯಾವುದನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳಲು ಬಾರ್, ರೆಸ್ಟೋರೆಂಟ್ ಗಳಲ್ಲಿ ಯಾವ ಕಾರ್ಯಕ್ರಮವನ್ನು ನೋಡುತ್ತಿದ್ದಾರೆ ಎನ್ನುವ ಡಾಟಾವನ್ನು ಶೇಖರಣೆ ಮಾಡುತ್ತದೆ.ಈಗ ನಮ್ಮ ದೇಶದಲ್ಲಿ 44000 ಮನೆಗಳಿಂದ ಟಿವಿ ಕಾರ್ಯಕ್ರಮಗಳ ಡಾಟಾವನ್ನು ಶೇಖರಣೆ ಮಾಡುತ್ತಿದ್ದಾರೆ.2021ರ ಹೊತ್ತಿಗೆ ಈ ಸಂಖ್ಯೆಯನ್ನು 55000ಕ್ಕೆ ಏರಿಸಬೇಕು ಎಂದು ನಿರ್ಧರಿಸಲಾಗಿದೆ.ಈ ರೀತಿ ಟಿ.ಆರ್.ಪಿಗಳ ಆಧಾರದ ಮೇಲೆ ಜಾಹೀರಾತು ಕಂಪನಿಗಳು ನಿರ್ಧರಿಸುತ್ತದೆ.
ಟಿ.ಆರ್ .ಪಿ ಆಧಾರದ ಮೇಲೆ ಬಹುಮಾನ ಸಹ ಇರುತ್ತದೆ.ನಮ್ಮ ಸರ್ಕಾರದ ಲೆಕ್ಕಾಚಾರದ ಪ್ರಕಾರ ನಮ್ಮ ದೇಶದಲ್ಲಿ ಒಟ್ಟು 19.5 ಕೋಟಿ ಟಿವಿಗಳು ಇವೆ.ಒಂದು ಸರ್ವೇ ಪ್ರಕಾರ 2016ರಲ್ಲಿ ಜಾಹೀರಾತುಗಳ ಮುಖಾಂತರ ಭಾರತದ ಟಿವಿ ಚಾನಲ್ ಗಳಿಗೆ ಸುಮಾರು 20,000ಕೋಟಿ ಆದಾಯ ಬಂದಿದೆ.
ಕ್ರಿಕೆಟ್ ಮ್ಯಾಚ್ ನ ಆಸಕ್ತಿ ನಮ್ಮ ದೇಶದಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದು ಎಲ್ಲರಿಗೂ ತಿಳಿದಿದೆ.ಇದರಿಂದ ಟಿ.ಆರ್ .ಪಿ ರೇಟ್ ಗಳೆಲ್ಲಾ ಐಪಿಎಲ್ ಮ್ಯಾಚ್ ಬರುವ ಟಿವಿ ಚಾನಲ್ ಗಳಿಗೆ ಇದೆ.ಇದು ಪ್ರತಿವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯುತ್ತದೆ.ಆದರೆ ಕೊರೊನ ಕಾರಣದಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತಿದೆ. BCCI ಗೆ ಅತಿ ಹೆಚ್ಚು ಹಣ ಬರುವ ಒಂದೇ ಒಂದು ಮಾರ್ಗ ಎಂದರೆ ಅದು ಐಪಿಎಲ್ ಮಾತ್ರ.ಇಂಟರ್ನ್ಯಾಷನಲ್ ಕ್ರಿಕೆಟ್ ಗಿಂತ ಹೆಚ್ಚು ಸಂಭಾವನೆ ಐಪಿಎಲ್ ನಿಂದ ದೊರೆಯುತ್ತದೆ.
2008ರಲ್ಲಿ ಸೋನಿ ಪಿಚ್ಚರ್ಸ್ ನೆಟ್ವರ್ಕ್ಸ್ಎನ್ನುವ ಸಂಸ್ಥೆ ಐಪಿಎಲ್ ಮ್ಯಾಚ್ ನ್ನು ಟಿವಿಯಲ್ಲಿ ಪ್ರಸಾರ ಮಾಡಲು 8200ಕೋಟಿ ಕೊಟ್ಟಿದೆ.2018ರಲ್ಲಿ ಸ್ಟಾರ್ ಇಂಡಿಯಾ ಎನ್ನುವ ಕಂಪನಿ 5 ವರ್ಷಗಳ ಕಾಲ ಐಪಿಎಲ್ ಮ್ಯಾಚ್ ನ್ನು ಟಿವಿಯಲ್ಲಿ ಪ್ರಸಾರ ಮಾಡಲು ಮತ್ತು ಇಂಟರ್ನೆಟ್ ನಲ್ಲಿ ಪ್ರಸಾರ ಮಾಡಲು 16347ಕೋಟಿಯಷ್ಟು ಕೊಟ್ಟು ಬಿಸಿಸಿಐ ನಿಂದ ಅಧಿಕಾರ ಪಡೆದುಕೊಳ್ಳುತ್ತದೆ.ಈ ಹಣ ಬಿಸಿಸಿಐಗೆ ಸೇರುತ್ತದೆ.