eating curd rice night time ಮೊಸರು ಎಂದ ಕೂಡಲೆ ಬೇಕು ಎನ್ನುವವರು ಇದ್ದಾರೆ. ಮೂಗು ಮುರಿಯುವವರು ಇದ್ದಾರೆ. ಆದರೆ ಯಾವುದೇ ಸಮಾರಂಭದಲ್ಲೆ ಆಗಲಿ ಮೊಸರನ್ನ ಇಲ್ಲದೆ ಹೋದರೆ ಊಟ ಸಂಪೂರ್ಣ ಆಗುವುದಿಲ್ಲ ಇಲ್ಲ. ಇಂಥ ಮೊಸರನ್ನದ ಉಪಯುಕ್ತತೆ ಕೆಲವರಿಗೆ ಗೊತ್ತಾದರೆ ಮೊಸರನ್ನ ಬಿಡಲು ಸಾಧ್ಯವಿಲ್ಲ. ಹಾಗಾದರೆ ಮೊಸರನ್ನು ಅಥವಾ ಮೊಸರಿನ ಉಪಯುಕ್ತತೆ ಏನು ಎಂದು ತಿಳಿಯೋಣ.
ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೀರಿಗೆಯ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ತಿಂದರೆ ತೂಕ ಕಡಿಮೆ ಬೇಗ ಆಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಹಾಗೂ ಗ್ಯಾಸ್, ಅಸಿಡಿಟಿ ಸಮಸ್ಯೆಗೆ ಮೊಸರಿನಲ್ಲಿ ಕಪ್ಪು ಉಪ್ಪು ಬೆರೆಸಿ ತಿನ್ನುವುದು ಒಳ್ಳೆಯದು. ಮೊಸರಿನಲ್ಲಿ ಸಕ್ಕರೆ ಸೇರಿಸಿ ತಿಂದರೆ ಮೂತ್ರ ಸಮಸ್ಯೆ ನಿವಾರಣೆಯ ಜೊತೆ ದೇಹವನ್ನು ಬೇಗ ತಂಪುಗೊಳಿಸುತ್ತದೆ. ದಂತ ಸಮಸ್ಯೆಗಳಾದ ಹಲ್ಲಿನ ನೋವು, ಬಾವು ಎಲ್ಲವೂ ಒಂದು ಕಪ್ ಮೊಸರಿನೊಂದಿಗೆ ಅಜ್ವಾನ ಸೇರಿಸಿ ತಿನ್ನುವುದರಿಂದ ಕಡಿಮೆ ಆಗುತ್ತದೆ. ಕಾಳು ಮೆಣಸಿನ ಪುಡಿಯನ್ನು ಒಂದು ಕಪ್ ಮೊಸರಿನಲ್ಲಿ ಸೇರಿಸಿ ತಿಂದರೆ ಮಲಬದ್ಧತೆ ಜೊತೆಗೆ ಆಹಾರ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಓಟ್ಸ್ ಅನ್ನು ಮೊಸರಿನಲ್ಲಿ ಸೇರಿಸಿ ತಿಂದರೆ ಪ್ರೋಟೀನ್ ಹಾಗೂ ಪ್ರೋಬಯೊಟಿಕ್ಸ್ ದೇಹಕ್ಕೆ ಸಿಗುತ್ತದೆ. ಹೆಚ್ಚಿನ ಉಪಯೋಗ ಮಸಿಲ್ ಪೌಷ್ಟಿಕತೆಗೆ ಸಿಗುತ್ತದೆ. ಮೊಸರಿನಲ್ಲಿ ಹಣ್ಣು ಬೆರೆಸಿ ತಿನ್ಬುವುದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಜೊತೆಗೆ ತುಂಬಾ ರುಚಿಯು ಹೌದು.
ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಮೊಸರಿನಲ್ಲಿ ಸ್ವಲ್ಪ ಅಲ್ಲಾ ಹಾಗೂ ಸ್ವಲ್ಪ ಅರಿಶಿನ ಬೆರೆಸಿ ಕೊಡುವುದರಿಂದ ಕಾಲಿಕ್ ಆಸಿಡ್ ದೇಹದಲ್ಲಿ ಸೇರಿ ಉಪಯೋಗಕರ ಆಗುತ್ತದೆ. ಶರೀರಕ್ಕೆ ಬೇಕಾಗುವಷ್ಟು ವಿಟಮಿನ್ ಸಿ ಪಡೆಯಲು ಮೂಸಂಬಿ ಹಣ್ಣಿನ ರಸವನ್ನು ಮೊಸರಿನಲ್ಲಿ ಸೇರಿಸಿ ತಿನ್ನಬಹುದು. ಯವ್ವನ ಸದಾ ಒಂದೆ ತೆರೆನಾಗಿರಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಆದ ಅಲ್ಸರ್ ಮೊಸರಿನಲ್ಲಿ ಜೇನು ತುಪ್ಪವನ್ನು ಸೇರಿಸಿ ತಿನ್ನುವುದರಿಂದ ಕಡಿಮೆ ಆಗುತ್ತದೆ. ಇದರ ಜೊತೆಗೆ ಆಂಟಿಬಯೋಟಿಕ್ ಗುಣ ಕೂಡ ಇರುವುದರಿಂದ ಇನ್ಪೆಕ್ಷನ್ ಗಳಿಂದ ರಕ್ಷಣೆ ಮಾಡುತ್ತದೆ. ಭಾರತದಲ್ಲಿ ಮೂರೂ ಹೊತ್ತು ಮೊಸರನ್ನು ಸೇವಿಸುತ್ರಾರೆ ಯಾಕೆಂದರೆ ಆರೋಗ್ಯ ಶಾಸ್ತ್ರದಲ್ಲಿ ಮೊಸರು ದೇಹವನ್ನು ತಂಪಾಗಿಸುತ್ತದೆ ಎಂಬ ಮಾತಿದೆ. ಎಲ್ಲರನ್ನೂ ಕಾಡುವ ಪ್ರಶ್ನೆ ಎಂದರೆ ಮೊಸರನ್ನು ರಾತ್ರಿಯ ವೇಳೆ ಸೇವಿಸುವುದು ಉತ್ತಮವೇ ಎಂಬುದಾಗಿದೆ. ಇದಕ್ಕೆ ಉತ್ತರ ಕಫ, ನೆಗಡಿ, ಕೆಮ್ಮು ಇರುವವರು ಹಾಗೆಯೆ ಮಕ್ಕಳು ರಾತ್ರಿ ಮೊಸರು ಸೇವಿಸದಿರುವುದು ಉತ್ತಮ. ಮಧ್ಯಾನ್ಹ ಒಂದೆ ಹೊತ್ತು ಸೇವಿಸಿ. ಉಳಿದವರು ರಾತ್ರಿ ಸೇವಿಸಬಹುದು. ಮೊಸರನ್ನು ಸೌಂದರ್ಯ ವರ್ಧಕವಾಗಿಯೂ ಬಲಸಲಾಗುತ್ತದೆ. ಕೂದಲಿಗೂ ಮೊಸರನ್ನು ಉಪಯೋಗಿಸಿದರೆ ಕೂದಲು ಸೊಂಪಾಗಿ, ದೃಢವಾಗುತ್ತದೆ.
ಇವುಗಳು ಮೊಸರಿನ ಉಪಯೋಗಳಾಗಿವೆ. ಯಾವುದೇ ಆಹಾರ ಔಷಧಿಯಾಗಿದ್ದರೂ ಸಹ ಮಿತವಾದ ಸೇವನೆ ಒಳ್ಳೆಯದು. ಹೆಚ್ಚಾದರೆ ಅಮೃತವೂ ವಿಷ ಎಂಬ ಪರಿಸ್ಥಿತಿ ಆಗುವುದು ಬೇಡ ಅಲ್ಲವಾ. ಹಾಗಾಗಿ ಯಾವ ಯಾವ ಸಮಸ್ಯೆಗೆ ಮೊಸರು ಪರಿಹಾರ, ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬುದನ್ನು ಅರಿತುಕೊಂಡು ಸೇವುಸುವುದು ಒಳಿತು.