ಜನುಮದ ಜೋಡಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಶಿಲ್ಪಾ ಅವರ ಸಿನಿ ಜೀವನ ಹಿಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಟಿ ಶಿಲ್ಪಾ ಅವರು ಮಲೆಯಾಳಂ ಮೂಲದವರಾಗಿದ್ದು ಕನ್ನಡತಿ ಎಂಬಂತೆ ನಮ್ಮ ಕನ್ನಡ ಸಂಸ್ಕೃತಿಗೆ ಹೊಂದಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರೊಂದಿಗೆ ನಟಿಸಿದ ಜನುಮದ ಜೋಡಿ ಚಿತ್ರವು ಶಿಲ್ಪಾ ಅವರ ಮೊದಲ ಚಿತ್ರವಾಗಿದ್ದು. ತಮ್ಮ ಮೊದಲ ಚಿತ್ರದಿಂದಲೇ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯರಾದರು. ನಂತರ ಹಳ್ಳಿ ಸೊಗಡಿರುವ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ನಟಿ ಶಿಲ್ಪಾ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದರೂ ಹೆಚ್ಚು ಫೇಮಸ್ ಆಗಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ. ಶಿಲ್ಪಾ ಅವರು ಮಲೆಯಾಳಂನ ನಿರ್ಮಾಪಕ, ನಿರ್ದೇಶಕರಾಗಿದ್ದ ರಂಜಿತ್ ಅವರನ್ನು ಮದುವೆಯಾದರು ಮದುವೆಯ ನಂತರ ಶಿಲ್ಪಾ ಅವರು ಸಿನೆಮಾಗಳಲ್ಲಿ ನಟಿಸಲಿಲ್ಲ.
ಕೆಲವು ವರ್ಷಗಳ ನಂತರ ಶಿಲ್ಪಾ ಅವರು ಮಲೆಯಾಳಂನ ಧಾರಾವಾಹಿಯೊಂದನ್ನು ನಿರ್ಮಾಣ ಮಾಡಿದರು. ನಟಿ ಶಿಲ್ಪಾ ಅವರಿಗೆ ಆವಂತಿಕ ಎಂಬ ಮುದ್ದಾದ ಮಗಳಿದ್ದಾಳೆ. ಅವಳು ಕೇರಳದ ತಿರುವನಂತಪುರದ ಪ್ರಸಿದ್ಧ ಕಾಲೇಜೊಂದರಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದು ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾಳೆ. ಕಾಮರ್ಸ್ ನಲ್ಲಿ 94% ಗಳಿಸುವ ಮೂಲಕ ಇಡೀ ಕಾಲೇಜ್ ಗೆ ಟಾಪರ್ ಆಗಿದ್ದಾರೆ. ಶಿಲ್ಪಾ ಅವರಂತೆ ಅವರ ಮಗಳು ಸಿನಿಮಾದಲ್ಲಿ ಆಸಕ್ತಿ ತೋರದೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಅವರ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.