ಹಿಂದಿನ ಕಾಲದಲ್ಲಿ ಜ್ವರ, ಕೆಮ್ಮು, ನೆಗಡಿ ಆದರೆ ಮನೆಯಲ್ಲಿಯೆ ಒಂದು ಕಷಾಯ ಮಾಡಿ ಕುಡಿದು ಬಿಡುತ್ತಿದ್ದರು. ಜ್ವರ ಹಾಗೆಯೆ ವಾಸಿಯಾಗುತ್ತಿತ್ತು. ಆದರೆ ಕಳೆದ ಏಳೆಂಟು ತಿಂಗಳುಗಳಿಂದ ಪರಿಸ್ಥಿತಿ ಬದಲಾಯಿಸಿದೆ. ಯಾರು ಕೆಮ್ಮಂಗಿಲ್ಲ ಎಂಬ ಜೋಕ್ ಈಗ ನಿಜವಾಗಿ ಬದಲಾಗಿದೆ. ಕೆಮ್ಮಿದರೆ ಸಾಕು, ಆಸ್ಪತ್ರೆ, ಚೆಕಪ್ ಹೀಗೆ ಅನೇಕ ಬಗೆಯ ತಲೆನೋವು ಹೆಗಲೆರುವಂತೆ ಆಗಿದೆ. ಯಾವುದೇ ವೈರಸ್ ಗಳಿಗೂ ಪರಿಹಾರ ಎಂದರೆ ರೋಗ ನಿರೋಧಕ ಶಕ್ತಿ. ಹಾಗಾದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ ಹೇಗೆ ಎಂದು ಈ ಮಾಹಿತಿಯಿಂದ ತಿಳಿಯೋಣ.
ಕರೋನಾ ವೈರಸ್ ಬಂದಾಗಿನಿಂದ ಉಂಟಾದ ಭಯ ಎಂದರೆ ಮೈ ಬೆಚ್ಚಗಾಗಿದೆ ಎಂದೊಡನೆ ಎಲ್ಲಿ ಸ್ವಾಬ್ ಚೆಕಪ್ ಮಾಡಿ ಕ್ವಾರಂಟೈನ್ ಮಾಡುತ್ತಾರೊ ಎಂಬುದು. ಸಣ್ಣ ಪುಟ್ಟ ಡಾಕ್ಟರ್ ಬಳಿ ಜ್ವರ ಬಂದಾಗ ಹೋದರೆ ಅವರು ನೋಡುವುದಿಲ್ಲ. ಜ್ವರ, ಕೆಮ್ಮಿಗೆ ಮಾತ್ರೆಗಳು ದೊರೆಯುತ್ತಿಲ್ಲ. ಕರೋನಾ ವೈರಸ್ ಗೆ ಸದ್ಯದ ಮಟ್ಟಿಗೆ ಯಾವುದೆ ಚಿಕಿತ್ಸೆಯ ರೀತಿಗಳಲ್ಲೂ ಔಷಧವಿಲ್ಲ. ಆದರೆ ಡಾಕ್ಟರ್ ಗಳ ಪ್ರಕಾರ ರೋಗ ನಿರೋಧಕ ಶಕ್ತಿ ನಮ್ಮನ್ನು ಚೀನಿ ವೈರಸ್ ನಿಂದ ಕಾಪಾಡುವ ಸಾಧನ. ಯಾವುದೆ ರೀತಿಯ ವೈರಸಗ ಗಳು ಬಲವಾದ ರೋಗ ನಿರೋಧಕ ಶಕ್ತಿ ಇದ್ದಲ್ಲಿ ಬದುಕುವುದಿಲ್ಲ. ಹಾಗಾದರೆ ಅಲರ್ಜಿ, ಇನ್ಪೆಕ್ಷನ್, ಕೆಮ್ಮು, ಜ್ವರ, ನೆಗಡಿಯಿಂದ ಪಾರಾಗುವುದು ಹೇಗೆ? ಸುಲಭ ಹಿತ್ತಲ ಮದ್ದು ಎಂದರೆ ನೆಲನೆಲ್ಲಿ ಗಿಡ. ನೆಲದಲ್ಲಿ ನೆಲ್ಲಿಕಾಯಿ ಬಿಡುವುದರಿಂದ ಇದಕ್ಕೆ ನೆಲ ನೆಲ್ಲಿ ಎಂದು ಹೆಸರು. ಈ ನೆಲನೆಲ್ಲಿ ಯು4ಬಿಎಸಿ ಜಾತಿಗೆ ಸೇರುವುದು. ಈ ನೆಲನೆಲ್ಲಿ ಗಿಡಕ್ಕೆ ಅಮಾರಸ್, ಪ್ಯಾಂಥಸ್ ಎಂಬ ಹೆಸರು ಇದೆ. ಸಂಸ್ಕೃತ ಭಾಷೆಯಲ್ಲಿ ಭೂಮ್ಯಾಮ್ಲಕ್ಕಿ ಎಂದು ಕರೆಯುತ್ತಾರೆ. ಹೀಗೆ ಹೆಸರು ಬರಲು ಕಾರಣ ಎನೆಂದರೆ ನೆಲ ಎಂದರೆ ಭೂಮಿ ನೆಲ್ಲಿ ಎಂದರೆ ಆಮ್ಲ. ಭೂಮಿಯ ಮೇಲೆ ಬೆಳೆಯುವ ಆಮ್ಲ ಎಂದು ಅರ್ಥ. ಕೆಂಪು ಮತ್ತು ಹಸಿರು ಮಿಶ್ರಿತ ಬಣ್ಣದಲ್ಲಿ ಇರುವ ಇದರ ಕಾಂಡ ತುಂಬಾ ಮೃದು. ಸಾಲಾಗಿ ಹಚ್ಚಹಸುರಿನ ಎಲೆ ಜೋಡಿಸಿದೆ. ಪುಟಾಣಿ ಗಾತ್ರದ ಕಾಯಿಗಳು, ಹಳದಿ ಬಣ್ಣದ ಹೂವುಗಳನ್ನು ಹೊಂದಿದೆ ನೆಲನೆಲ್ಲಿ.
ನೆಲನೆಲ್ಲಿಯು ತಲೆಯಿಂದ ತುದಿಯವರೆಗೂ ಔಷಧೀಯ ಗುಣ ಹೊಂದಿದೆ. ಎಲೆ, ಬೇರು, ಹೂವು, ಕಾಂಡ, ಕಾಯಿಗಳು ಎಲ್ಲವೂ ಔಷಧಿಯಗಳೆ ಆಗಿದೆ. ಹಳ್ಳಿಯಲ್ಲಿ ತುಂಬಾ ಕಂಡುಬರುತ್ತದೆ. ಮೂರು ಅಡಿ ಎತ್ತರ ಬೆಳೆಯುತ್ತದೆ. ಮಳೆಗಾಲದಲ್ಲಿ ಬೆಳೆಯುವ ಇದು ಏಕವಾರ್ಷಿಕ ಸಸ್ಯ. ಐದಾರು ತಿಂಗಳು ಬದುಕುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಗ್ಲಾಸ್ ನೀರಿಗೆ ನೆಲನೆಲ್ಲಿ ಎಲೆ ಹಾಕಿ, ಕಾಲು ಗ್ಲಾಸ್ ಆಗುವವರೆಗೂ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ವೈರಸ್ ಗಳಿಗೆ ರಾಮಬಾಣ ನೆಲನೆಲ್ಲಿ. ನೆಲನೆಲ್ಲಿ ಗಿಡದ ಯಾವುದೇ ಭಾಗದ ಕಷಾಯ ಅತಿಸಾರ, ಬೇಧಿ ಹಾಗೂ ಅಜೀರ್ಣಗಳಿಗೆ ಒಳ್ಳೆಯದು. ಕಷಾಯದಲ್ಲಿ ರುಚಿ ಬಯಸುವವರು ತುಪ್ಪದಲ್ಲಿ ಚಿಟಿಕೆ ಇಂಗು ಹುರಿದು ಬಳಸಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ನೆಲನೆಲ್ಲಿ ರಸವನ್ನು ದಿನದ ನಾಲ್ಕು ಗಂಟೆಗಳಿಗೆ ಒಂದು ಸಲದಂತೆ ತೆಗೆದುಕೊಳ್ಳಬಹುದು. ಕಷಾಯ ಬೇಡ ಎನ್ನುವವರು ಹೀಗೆ ಮಾಡಬಹುದು. ಹಾಲು ಅಥವಾ ಮಜ್ಜಿಗೆಯಲ್ಲಿ ನೆಲನೆಲ್ಲಿ ರಸವನ್ನು ಸೇರಿಸಿ ಸೇವಿಸುವುದರಿಂದ ಕಾಮಾಲೆಯನ್ನು ಒಂದು ಹದಿನೈದು ದಿನದೊಳಗೆ ವಾಸಿ ಮಾಡುತ್ತದೆ. ಲಿವರ್ ಊತ ಹಾಗೂ ಕಾಮಾಲೆಗೆ ನೆಲನೆಲ್ಲಿ ಗಿಡದ ಬೇರು ಸಹಿತ ಕಾಲು ಚಮಚ ಜೀರಿಗೆಯೊಂದಿಗೆ ಅರೆದು ಜೇನು ಹಾಕಿ ಸೇವಿಸುವುದು ಒಳ್ಳೆಯದು.
ನೆಲನೆಲ್ಲಿ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಚರ್ಮ ರೋಗ ಇದ್ದಲ್ಲಿ ಈ ಲೇಪನ ಹಚ್ಚಿದರೆ ಕಡಿಮೆಯಾಗುತ್ತದೆ. ನೆಲನೆಲ್ಲಿ ಕಷಾಯ ಅಥವಾ ಚಟ್ನಿ ಸೇವಿಸುವುದರಿಂದ ತಿಂಗಳ ಸಮಯದಲ್ಲಿ ಅತಿಯಾದ ರಕ್ತಸ್ರಾವ ತಡೆಯುತ್ತದೆ ಹಾಗೂ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಪ್ರತಿ ದಿನ ನೆಲನೆಲ್ಲಿ ಕಷಾಯ ಸೇವಿಸಿದರೆ ದೇಹದೊಳಗೆ ಸೇರಿದ ಕಲ್ಮಶಗಳನ್ನು ಹೊರಗೆ ಹಾಕುತ್ತದೆ. ಒಂದು ಚಮಚ ಎಳ್ಳೆಣ್ಣೆಯೊಂದಿಗೆ ನೆಲನೆಲ್ಲಿ ರಸವನ್ನು ಸೇರಿಸಿ ಸೇವಿಸುವುದರಿಂದ ಕಿಡ್ನಿಯಲ್ಲಿನ ಕಲ್ಲಿಗಳು ಕರಗುತ್ತದೆ. ನೆಲನೆಲ್ಲಿಯಲ್ಲಿರುವ 0.5 ಶೇಕಡಾ ಇರುವ ಫಿಲಾಂಥಿನ್ ಎನ್ನುವ ಕಹಿಯಾದ ಔಷಧೀಯ ಅಂಶ ಇವೆಲ್ಲಾ ಖಾಯಿಲೆಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಕೆಲವು ಔಷಧಗಳಲ್ಲಿ ನೆಲನೆಲ್ಲಿ ಮುಖ್ಯವಾಗಿ ಇರುತ್ತದೆ. ನೆಲನೆಲ್ಲಿ ಗಿಡದ ಕಷಾಯ ಪಿತ್ತಕೋಶದ ಆರೋಗ್ಯಕ್ಕೆ ಉತ್ತಮ. ಹಸಿವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆಹಾರದಲ್ಲಿ ಬಳಸಿದರೂ ಸಾಕು ಔಷಧ ಅಂಶಗಳು ಸಿಗುತ್ತವೆ.
ನಮ್ಮ ಸುತ್ತಲು ಇರುವ ಕೆಲವು ಗಿಡ ಹಾಗೂ ವಸ್ತುಗಳಲ್ಲಿ ಇರುವ ಔಷಧೀಯ ಗುಣಗಳು ನಮಗೆ ತಿಳಿದಿರುವುದಿಲ್ಲ. ನೆಲನೆಲ್ಲಿ ಕಂಡರೆ ಅದರ ಬೀಜ ಬಳಸಿ ಮನೆಯ ಹಿತ್ತಲಲ್ಲಿ ಅಥವಾ ಟೆರೆಸ್ ಮೇಲೆ ಬೆಳೆಸಲು ಪ್ರಯತ್ನಿಸಿ. ಇದರಿಂದ ಆಸ್ಪತ್ರೆಗಳಿಗೆ ಅಲೆಯುವುದು ಕಡಿಮೆಯಾಗುತ್ತದೆ. ಉತ್ತಮ ಆರೋಗ್ಯಕರ ಜೀವನ ಮನೆ ಮದ್ದಿನಿಂದ ನಮ್ಮದಾಗುತ್ತದೆ.