ಸಾಮಾಜಿಕ ಜಾಲತಾಣಗಳ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಬದುಕಿನಲ್ಲಿ ಈಗ ಮತ್ತೆ ಕತ್ತಲು ಮೂಡಿದೆ. ಇದರ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ ನೋಡಿ.

ಮುಂಬೈ ರೈಲ್ವೇ ಪ್ಲಾಟ್‍ ಫಾರಂನಲ್ಲಿ ಕುಳಿತು ‘ಏಕ್ ಪ್ಯಾರ್ ಕಾ ನಗ್ಮಾ’ ಎಂದು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಗಾಯಕಿ ರಾನು ಮೊಂಡಲ್ ಅತ್ಯಂತ ಕಡಿಮೆ ಸಮಯದಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದ್ದ ವಿಷಯ ನಮಗೆಲ್ಲ ತಿಳಿದೆ ಇದೆ. ಅಷ್ಟು ಕಡಿಮೆ ಸಮಯದಲ್ಲಿ ಖ್ಯಾತಿ ಹೊಂದಿದ್ದ ರಾನು ಬದುಕಲ್ಲಿ ಈಗ ಮತ್ತೆ ಕತ್ತಲು ಆವರಿಸಿದೆ. ಸೋಶಿಯಲ್ ಮೀಡಿಯಾದ ಮಿಂಚಿನ ಚಮತ್ಕಾರದಿಂದ ಬಾಲಿವುಡ್ ಸಿನಿಮಾದ ಹಾಡಿಗೆ ರಾನು ಮೊಂಡಲ್ ಧ್ವನಿಯಾಗಿದ್ದನ್ನು ಕಂಡು ದೇಶದ ಜನತೆ ನಿಬ್ಬೆರಗಾಗಿದ್ದಂತು ಸುಳ್ಳಲ್ಲ. ಪ್ಲಾಟ್‍ಫಾರಂನಲ್ಲಿ ಹಾಡು ಹೇಳುತ್ತಾ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಬದುಕನ್ನು ಒಂದು ಹಾಡು ಮುಗಿಲೆತ್ತರಕ್ಕೆ ಕರೆದೊಯ್ದು ಜೀವನವೇ ಬದಲಾಗಿತ್ತು. ಗಾಯಕಿಯ ಧ್ವನಿಗೆ ಫಿದಾ ಆಗಿದ್ದ ಸಂಗೀತ ನಿರ್ದೇಶಕ ಹಿಮೇಶ್ ರೆಶ್ಮಿಯಾ ರಾನೂ ಗೆ ಹಾಡಲು ಅವಕಾಶ ನೀಡಿದ್ದರು. ಅದರಂತೆಯೇ ರಾನು ಮೊಂಡಲ್ ಹಾಡಿದ್ದ ಮೊದಲ ಹಾಡು ‘ತೇರಿ ಮೇರಿ ಕಹಾನಿ’ ಸೂಪರ್ ಹಿಟ್ ಕೂಡಾ ಆಗಿದ್ದು ಮಾತ್ರವಲ್ಲದೆ ಎಲ್ಲರ ರಿಂಗ್ ಟೋನ್ ಗಳಾಗಿ ರಾನು ಮೊಂಡಲ್ ಹಾಡು ಸಾಕಷ್ಟು ಜನಪ್ರಿಯತೆ ಗಳಿಸಿ ಚಿರಪರಿಚಿತ ಆಗಿತ್ತು.

ಅನಂತರ ರಾನು ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋ ಒಂದಕ್ಕೆ ಅತಿಥಿಯಾಗಿ ಸಹ ಭಾಗವಾಗಿಸಿದ್ದರು. ಹೀಗೆ ಬಾಲಿವುಡ್ ಸಭೆ ಸಮಾರಂಭಗಳಲ್ಲಿಯೂ ರಾನು ಮೊಂಡಲ್ ಕಾಣಿಸಿಕೊಳ್ಳಲು ಆರಂಭಿಸಿ, ಹಲವು ರಾಜ್ಯಗಳಲ್ಲಿ ಕೂಡಾ ರಾನು ಸಂಗೀತ ಕಾರ್ಯಕ್ರಮ ನೀಡಿದ್ದರು. ಇಷ್ಟೆಲ್ಲ ಹೆಸರುವಾಸಿ ಆದ ಬಳಿಕ ಇದೀಗ ರಾನು ಮೊಂಡಲ್ ಬದುಕಲ್ಲಿ ಮತ್ತೆ ಅಂಧಕಾರದ ಛಾಯೆ ಮೂಡಿದೆ. ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ರಾನು ಮೊಂಡಲ್ ಕಾರ್ಯಕ್ರಮಗಳಿಲ್ಲದೇ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಆಗಿದೆ. ಮುಂಬೈನ ಸಂಬಂಧಿಯೊಬ್ಬರ ಮನೆಯಲ್ಲಿ ಉಳಿದಿರುವ ರಾನು ಮೊಂಡಲ್ ಲಾಕ್‍ಡೌನ್ ಮುಂಚೆ ತಾನು ಎಷ್ಟು ಹಣ ಗಳಿಸಿದ್ದರೋ ಗಳಿಸಿದ ಅಷ್ಟೇ ಹಣದಲ್ಲಿಯೇ ಕಷ್ಟಕರ ಜೀವನ ನಡೆಸುವ ಹಾಗೇ ಆಗಿದೆ. ಉದ್ಯೋಗಕ್ಕಾಗಿ ಮುಂಬೈಗೆ ಬಂದು ನೆಲೆಸಿದರೂ ಸಹ ರಾನು ಕೈ ಮಾತ್ರ ಖಾಲಿಯಾಗಿದೆ. ಈ ಹಿಂದೆ ರಾನು ಕಾನ್ಪುರದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ರಾನು ಹಾಕಿದ್ದ ಅತೀ ಎನ್ನಿಸುವ ಮೇಕಪ್ ಫೋಟೋಗಳು ಟ್ರೋಲ್ ಆಗಿದ್ದವು. ಟ್ರೋಲ್ ಬಳಿಕ ರಾನು ಮೊಂಡಲ್ ಗೆ ಮೇಕಪ್ ಮಾಡಿದ್ದ ಮೇಕ್‍ಓವರ್ ಆರ್ಟಿಸ್ಟ್ ಅಸಲಿ ಫೋಟೋಗಳನ್ನು ರಿವೀಲ್ ಮಾಡುವ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. 2019 ರಲ್ಲಿ ಮೈಸೂರು ದಸರಾಗೆ ಸಹ ರಾನು ಮೊಂಡಲ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ರಾನು ಮೊಂಡಲ್ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದಾಗಿತ್ತು. ಇದಕ್ಕಾಗಿ ರಾನು ಮೊಂಡಲ್ ಮೈಸೂರು ಜನತೆಯಲ್ಲಿ ಕ್ಷಮೆ ಕೇಳಿದ್ದರು.

ಜೀವನ ಎನ್ನುವುದು ಹಾಗೇ ಅಲ್ಲವೇ ಕಾಲ ಚಕ್ರ ಎಂದಿಗೂ ತಿರುಗುತ್ತಲೇ ಇರುತ್ತದೆ. ಮೇಲೆ ಹೋದವ ಒಂದಲ್ಲ ಒಂದು ದಿನ ಮತ್ತೆ ಕೆಳಕ್ಕೆ ಬರಲೇಬೇಕು. ಇಲ್ಲಿ ನಾವು ರಾನು ಮೊಂಡಲ್ ತಾನು ಸೆಲೆಬ್ರೆಟಿ ಆದಮೇಲೆ ತನ್ನ ಅಭಿಮಾನಿಗಳ ಜೊತೆ ನಡೆದುಕೊಂಡ ದುರಹಂಕಾರದ ವರ್ತನೆಯನ್ನು ಸಹ ಮರೆಯುವ ಹಾಗಿಲ್ಲ. ಎಷ್ಟು ಬೇಗ ಖ್ಯಾತಿ ಹೊಂದಿ ಮೇಲೆ ಹೋಗುತ್ತೇವೆ ಅಷ್ಟೇ ಬೇಗ ನಮ್ಮ ಅಹಂಕಾರ, ಅಹಂ ಇವು ನಮ್ಮನ್ನು ಕೆಳಗಿಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ನಾವು ಎಷ್ಟೇ ಬೆಳೆದು ಎತ್ತರಕ್ಕೆ ಏರಿದರೂ ಸಹ ನೆಲದ ಮೇಲೆಯೇ ಇರಬೇಕು ಹೊರತು ಅಹಂಕಾರವನ್ನು ಮೈಗೂಡಿಸಿಕೊಳ್ಳಬಾರದು.

Leave a Reply

Your email address will not be published. Required fields are marked *