ಮಹಾಭಾರತದ ಸಂದರ್ಭಗಳು ನಮ್ಮ ಸ್ಮೃತಿ ಪಟಲದಲ್ಲಿ ಅಚ್ಚಾಗಿ ಕುಳಿತುಬಿಟ್ಟಿವೆ. ಪಗಡೆ ಆಟ, ದ್ರೌಪದಿಯ ವಸ್ತ್ರಾಪಹರಣ, ಪಾಂಡವರ ಅಸಾಯಕತೆ, ಕರ್ಣ ಹಾಗೂ ಧುರ್ಯೊಧನರ ಮತ್ತು ಅರ್ಜುನ ಹಾಗೂ ಕೃಷ್ಣನ ಸ್ನೇಹ, ಯುದ್ದದ ಸಮಯ ಎಲ್ಲವೂ ಅಚ್ಚಳಿಯದೆ ಉಳಿದಿದೆ. ಕುರುಕ್ಷೇತ್ರ ಮಹಾಯುದ್ಧದ ಕಾಲದಲ್ಲಿ ಕರ್ಣ ಪಾಂಡವರ ಜೇಪ್ಠ ಎಂದು ತಿಳಿಯುವ ಸಂದರ್ಭ ಬರುತ್ತದೆ. ಆ ಸಂದರ್ಭದಲ್ಲಿ ಪಾಂಡವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನಾವು ಇಲ್ಲಿ ತಿಳಿಯೋಣ.
ಹುಟ್ಟಿನಿಂದಲೇ ನೋವು ಬೆನ್ನು ಹಿಡಿದಿತ್ತು. ಕುಂತಿಯ ಅಚಾತುರ್ಯದಿಂದ ಮದುವೆಗೂ ಮೊದಲೆ ಸೂರ್ಯ ದೇವನ ವರದಿಂದ ಜನಿಸಿದ ಕರ್ಣ. ರಾಜಕುಮಾರ ಆಗಬೇಕಿದ್ದವನು ಸೂತ ಪುತ್ರನಾಗಿದ್ದ. ನಂತರ ಅರ್ಜುನ ಪ್ರತಿಸ್ಪರ್ಧಿ ಆದ ಭೀಷ್ಮರ ನಿರ್ಬಂಧದಿಂದ. ತನ್ನ ಸಹೋದರರಿಗೆ ಶತ್ರುವಾದ ದುರ್ಯೋಧನನ ಸ್ನೇಹದಿಂದ. ರಾಜಕುಮಾರ ಅರ್ಜುನ ಸೂತ ಪುತ್ರನಾದ ಕರ್ಣನ ಪಾದ ತೊಳೆಯುವ ಪ್ರಸಂಗ ಬಂದಿತ್ತು ದುರ್ಯೋಧನನ ಕುತಂತ್ರದಿಂದ ಇದರಿಂದ ಕರ್ಣನ ಮೇಲೆ ಪಾಂಡವರಿಗೆ ಅಸಮಾಧಾನ ಇದ್ದಿತ್ತು. ಇರ ಜೊತೆ ಜೊತೆಯಲ್ಲಿ ದ್ರೌಪದಿ ಒಬ್ಬಳು ವೇಶ್ಯೆ ಎಂದು ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕರ್ಣ ಹೇಳಿದ ವಾಣಿ ಪಾಂಡವರನ್ನು ಇನ್ನಷ್ಟು ಕೆರಳಿಸಿತ್ತು. ಯುದ್ಧವನ್ನು ತಡೆಯಲು ಪ್ರಯತ್ನಿಸಿದ್ದಳು ಕುಂತಿ. ಕರ್ಣಾರ್ಜುನರಲ್ಲಿ ಯಾರೊಬ್ಬರು ಅಸುನಿಗಿದರೂ ನಾಶ ಖಂಡಿತ ಎಂದು ಕುಂತಿ ಅರಿತಿದ್ದಳು. ಆ ಸಮಯದಲ್ಲಿ ಕುಂತಿಯಿಂದ ತನ್ನ ಜನ್ಮ ರಹಸ್ಯದ ಅರಿವಾಯಿತು ಕರ್ಣನಿಗೆ. ಮಿತ್ರ ಧರ್ಮ ಹಾಗೂ ಸಂಕಲ್ಪದ ಕಾರಣ ಕುಂತಿಯನ್ನು ಪಾಂಡವರಿಗೆ ಸತ್ಯ ಹೇಳದಂತೆ ತಡೆದಿದ್ದ ಕರ್ಣ. ಇಂದ್ರ ಕರ್ಣನ ಸಾಮರ್ಥ್ಯ ಅರಿತು ಕರ್ಣನ ಕರ್ಣಕುಂಡಲ ದಾನವಾಗಿ ಪಡೆದಿದ್ದ.
ರಣರಂಗದಲ್ಲಿ ಅರ್ಜುನನ್ನು ಬಿಟ್ಟು ಬೇರೆ ಯಾರೆಡೆಗೂ ತನ್ನ ಬಲ ಪ್ರಯೋಗ ಮಾಡಲಿಲ್ಲ ಕರ್ಣ ಯಾಕೆಂದರೆ ಕುಂತಿಗೆ ಮಾತು ಕೊಟ್ಟಿದ್ದ. ರಥದ ಚಕ್ರ ಎತ್ತಿಕೊಳ್ಳುವ ಸಮಯದಲ್ಲಿ ಕೃಷ್ಣನ ಆದೇಶದಂತೆ ಅರ್ಜುನ ಕರ್ಣನ ಮೇಲೆ ಬಾಣದ ಪ್ರಯೋಗ ಮಾಡುತ್ತಾನೆ. ಕುತ್ತಿಗೆಯನ್ನು ಹೊಕ್ಕ ಬಾಣದಿಂದ ಕರ್ಣ ನೆಲಕ್ಕುರುಳಿದ್ದ. ಇದನ್ನು ತಿಳಿದ ಕೂಡಲೆ ರಾಜಮಾತೆ ಕುಂತಿ ರಣರಂಗ ಪ್ರವೇಶಿಸುತ್ತಾಳೆ. ಕರ್ಣನಿಗೆ ಮಡಿಲು ನೀಡುವ ಕುಂತಿಯ ದುಃಖ ಮುಗಿಲು ಮುಟ್ಟಿರುತ್ತದೆ. ಕರ್ಣ ತನ್ನ ಕೊನೆಯ ಕ್ಷಣದಲ್ಲಿ ತಾಯಿಯ ಮಡಿಲಿನಲ್ಲಿದ್ದ. ಇದನ್ನು ಕಂಡ ಪಾಂಡವರು ಆಶ್ಚರ್ಯಕರವಾಗಿ ನೋಡುತ್ತಿರುತ್ತಾರೆ. ಕರ್ಣನ ಬಳಿ ಬರುತ್ತಾರೆ. ಕರ್ಣ ತಮ್ಮ ಜೇಷ್ಠ, ಕುಂತಿಯ ತಪ್ಪಿನಿಂದ ಹುಟ್ಟಿದವನು ಎಂದು ತಿಳಿಯುತ್ತಲೆ ಪಾಂಡವರು ದುಃಖಿತರಾಗಿದ್ದರು. ಜೀವನವಿಡಿ ಪರಮ ಶತ್ರು ಎಂದುಕೊಂಡಿದ್ದ ಕರ್ಣ ತನ್ನ ಜೇಷ್ಠ ಎಂದು ತಿಳಿಯುತ್ತಲೆ ಅರ್ಜುನ ಕುಗ್ಗಿ ಹೋಗಿದ್ದ. ಪಿತಾಮಹ ಭೀಷ್ಮರ ಹತ್ಯೆ ಮಾಡಿದ ದುಃಖದಲ್ಲಿದ್ದ ಅರ್ಜುನ ಜೇಷ್ಠನ ಸಂಹಾರ ಮಾಡಿದ ದುಃಖವನ್ನು ತಡೆಯದಾಗುತ್ತಾನೆ.
ಜಗತ್ತಿನ ಶ್ರೇಷ್ಠ ಯೋಧನಾದ ತಮ್ಮ ಜೇಷ್ಠ ಕರ್ಣನಿಗೆ ಪಾಂಡವರು ನಮಿಸುತ್ತಾರೆ. ಆ ಕ್ಷಣ ಕರ್ಣ ತನ್ನ ಜೀವನವಿಡಿ ಅನುಭವಿಸಿದ ನೋವನ್ನೆಲ್ಲ ಮರೆತುಬಿಡುತ್ತಾನೆ. ತನ್ನ ಜನ್ಮ ರಹಸ್ಯ ಜಗಕ್ಕೆ ತಿಳಿದಿದ್ದಕ್ಕೆ ಸಂತೋಷ ಪಡುತಾನೆ. ಜಗತ್ತೆ ಪಾಪದ ಕೂಪವಾದಂತೆ ಅನಿಸುತ್ತದೆ ಧರ್ಮರಾಜನಿಗೆ. ಕುಂತಿಯು ಸತ್ಯ ಬಚ್ಚಿಟ್ಟಿರುವುದಕ್ಕೆ ಇಂತಹ ಅನಾಹುತ ಆಗಿರುವುದು, ಅಂದು ಅರ್ಜುನ ಸ್ವಯಂವರದಿಂದ ಗೆದ್ದ ದ್ರೌಪದಿಯು ಪಾಂಚಾಲಿಯಾಗುವಂತೆ ಆಗಿದ್ದು ನಿಮ್ಮಿಂದಲೆ, ಇಂದು ತಮ್ಮ ಕೈಯಾರೆ ಜೇಷ್ಠನನ್ನು ವಧಿಸುವ ಅಧರ್ಮದ ಕೆಲಸ ಆಗಿದ್ದು ನಿಮ್ಮಿಂದಲೆ ಎಂದು ಯುದಿಷ್ಠಿರ ಯಾವ ಹೆಂಗಸರು ಯಾವ ರಹಸ್ಯವನ್ನು ಬಚ್ಚಿಡದೆ ಇರುವಂತಾಗಲಿ ಏನೆ ರಹಸ್ಯ ಇದ್ದರೂ ಹೊರಬರಲಿ ಎಂದು ಶಪಿಸುತ್ತಾನೆ. ಯುದಿಷ್ಠಿರ ಯುದ್ಧದ ಬಗೆಗಿನ ತಾತ್ಸಾರ ಭಾವನೆಯನ್ನು ಮುಚ್ಚಿಟ್ಟುಕೊಂಡು ರಣರಂಗಕ್ಕೆ ಬಂದಿದ್ದ ಈಗ ಮತ್ತಷ್ಟು ಕುಸಿಯುತ್ತಾನೆ. ಸತ್ಯ ಮುಚ್ಚಿಡದಿದ್ದರೆ ಯುದ್ದವು ನಡೆಯುತ್ತಿರಲಿಲ್ಲ. ಜೇಷ್ಠನ ಶವದ ಮೇಲೆ ಸಿಂಹಾಸನವನ್ನು ಇರಿಸಿ ಕುಳಿತುಕೊಂಡು ಸಾಮ್ರಾಜ್ಯ ಆಳುವ ಅಧರ್ಮದ ಕಾರ್ಯ ಬೇಕಿರಲ್ಲಿಲ್ಲ ತನಗೆ ಎನ್ನುತ್ತಾನೆ.
ಇದನ್ನೆಲ್ಲ ನೋಡಿದ ಕರ್ಣ ಮಾತೆಯ ಬಳಿ ತಾನು ತೆಗೆದುಕೊಂಡ ವಚನವನ್ನು ತಿಳಿಸುತ್ತಾನೆ. ಜನ್ಮ ರಹಸ್ಯ ಯಾರಿಗೂ ತಿಳಿಯದಿರಲಿ ಇಲ್ಲವಾದರೆ ಅವರು ಯುದ್ಧ ಮಾಡುವುದಿಲ್ಲ ಎಂದು ವಚನ ತೆಗೆದುಕೊಂಡಿದ್ದೆ ಎನ್ನುತ್ತಾನೆ. ನಂತರ ತನ್ನ ಒಂದೆ ಒಂದು ಕೊನೆ ಆಸೆ ಈಡೇರಿಸುವಂತೆ ಕೇಳಿಕೊಳ್ಳುತ್ತಾನೆ. ಪಾಂಡವರು ಜೇಷ್ಠನನ್ನು ವಧಿಸಿದ ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಸೇವೆ ಮಾಡಲು ನಿರ್ಧರಿಸಿದರು. ಆಗ ಕರ್ಣ ಧರ್ಮ ನಿಷ್ಠೆ ಪಾಲಿಸುವ ನನ್ನ ಪ್ರತಿಜ್ಞೆ ಕೆಲವು ವೈರುದ್ಯ ಹಾಗೂ ಮಸಲತ್ತುಗಳಿಂದ ಪಾರಾಗಲು ಸಾಧ್ಯವಾಗಲಿಲ್ಲ. ಮಿತ್ರ ಧರ್ಮದ ಹೆಸರಿನಲ್ಲಿ ಅಧರ್ಮಗಳು ಘಟಿಸಿದವು. ಸೂರ್ಯ ದೇವ ಹಾಗೂ ಪವಿತ್ರ ಹೆಣ್ಣು ಕುಂತಿಯಿಂದ ಪಡೆದ ಈ ಪವಿತ್ರ ಜನ್ಮ ಸಮರದ ಪಾಪಗಳು ತಿಂದುಬಿಟ್ಟವು. ಪಾಪ ನಡೆಯದ ಕೈಯಿಂದ, ಅಧರ್ಮ ನಡೆದಿರದ ಜಾಗದಲ್ಲಿ ತನ್ನ ಅಂತ್ಯಕ್ರಿಯೆ ಆಗಬೇಕೆಂದು ಕೇಳಿಕೊಳ್ಳುತ್ತಾನೆ ಕರ್ಣ. ಪಾಂಡವರಿಗೆ ಕುರುಕ್ಷೇತ್ರದಲ್ಲಿ ಅಧರ್ಮ ನಡೆಯದ ಜಾಗವೆಲ್ಲಿ ಎಂದು ಗೊಂದಲ ಶುರುವಾಗುತ್ತದೆ. ಆಗ ಶ್ರೀ ಕೃಷ್ಣ ಅದಕ್ಕೊಂದು ಪರಿಹಾರವನ್ನು ಸೂಚಿಸುತ್ತಾನೆ. ನಂತರ ಅಂತ್ಯಕ್ರಿಯೆ ಮಿತ್ರ ಧುರ್ಯೊಧನ ಮಾಡಬೇಕೆ ಇಲ್ಲವೆ ಅನುಜನಾದ ಧರ್ಮರಾಜ ಮಾಡಬೇಕೆ ಎಂಬ ಗೊಂದಲ ಮೂಡಿದಾಗ ಯುದಿಷ್ಠಿರನೆ ಅಂತ್ಯಸಂಸ್ಕಾರ ಮಾಡುವುದು ಎಂದು ನಿರ್ಧಾರ ಮಾಡಲಾಗಿತ್ತದೆ. ಹೀಗೆ ಕರ್ಣನ ಅಂತ್ಯ ಸಂಸ್ಕಾರ ಆಗಿದ್ದು ಶ್ರೀಕೃಷ್ಣನ ಅಂಗೈಯಲ್ಲಿ. ಅಧರ್ಮ ನಡೆಯದ ಜಾಗದಲ್ಲಿ ಪಾಪ ಮಾಡದ ಧರ್ಮಜನಿಂದ ಕರ್ಣನ ಅಂತ್ಯಸಂಸ್ಕಾರ ನೇರವೇರಿ ಕರ್ಣ ಸ್ವರ್ಗಸ್ತನಾಗುತ್ತಾನೆ.
ಮಹಾಭಾರತದ ಎಲ್ಲಾ ಕಥೆಗಳು, ಉಪಕಥೆಗಳು ನಮ್ಮ ಜೀವಕ್ಕೊಂದು ದಾರಿದೀವ ಇದ್ದಂತೆ. ಈಗಿನ ಹಲವಾರು ಸಮಸ್ಯೆಗಳಿಗೆ ಮಹಾಭಾರತ ಮಹಾಕಾವ್ಯದಲ್ಲಿ ಉತ್ತರವಡಗಿದೆ. ಅದರ ನೀತಿಗಳನ್ನು ಅರಿತು, ಜೀವನವನ್ನು ಧರ್ಮದ ಹಾದಿಯಲ್ಲಿ ನಡೆಸೋಣ