ಕೊಬ್ಬರಿಯನ್ನು ಇಷ್ಟ ಪಡದೆ ಇರುವವರು ಇಲ್ಲವೆನಿಸುತ್ತದೆ. ಕೊಬ್ಬರಿ ಎಂದ ಕೂಡಲೆ ಆಸೆ ಪಟ್ಟು ತಿನ್ನುತ್ತಾರೆ ಎಲ್ಲಾ. ಇಂತಹ ಕೊಬ್ಬರಿ ತಿನ್ನುವುದರಿಂದ ಎಷ್ಟು ಆರೋಗ್ಯ ಲಾಭಗಳಿವೆ ಗೊತ್ತೆ. ಒಂದು ಸಣ್ಣ ಕೊಬ್ಬರಿ ತುಂಡು ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳು ಈ ಕೆಳಗಿನ ಮಾಹಿತಿಯ ಮೂಲಕ ನಾವು ತಿಳಿಯೋಣ.
ನಿಶ್ಯಕ್ತಿ, ಮಂಡಿನೋವು, ಬೆನ್ನು ನೋವು, ರಕ್ತ ಹೀನತೆ, ಜ್ಞಾಪಕ ಶಕ್ತಿಯ ಕೊರತೆ, ಕೂದಲ ಸಮಸ್ಯೆ, ರೋಗ ನಿರೋಧಕ ಶಕ್ತಿಯ ಕೊರತೆ, ಇವೆಲ್ಲವೂ ಇತ್ತೀಚೆಗೆ ಅತಿ ಹೆಚ್ಚು ಬಾಧಿಸುವ ಸಮಸ್ಯೆಗಳಾಗಿದೆ. ಹಲವಾರು ರೀತಿಯ ಮಾತ್ರೆಗಳನ್ನು ಇವೆಲ್ಲದರ ಬಾಧೆಯ ನಿವಾರಣೆಗಾಗಿ ಸೇವಿಸುತ್ತೇವೆ. ಆದರೆ ಪರಿಹಾರ ಮಾತ್ರೆ ಸೇವಿಸುವ ಸಮಯದಲ್ಲಿ ಮಾತ್ರ ಇರುತ್ತದೆ. ಅದರ ನಂತರ ಪರಿಹಾರ ಶೂನ್ಯ. ಆಹಾರದಲ್ಲಿ ಬಳಸುವ ವಸ್ತುಗಳನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದರಿಂದ ಇದಕ್ಕೆ ಪರಿಹಾರ ಸಿಗುವುದು. ಇದಕ್ಕೆ ಒಂದು ಉದಾಹರಣೆ ಎಂದರೆ ಕೊಬ್ಬರಿ. ಕೊಬ್ಬರಿಯಲ್ಲಿರುವ ಪೋಷಕಾಂಶಗಳನ್ನು ಗಮನಿಸಿದರೆ ಇದಕ್ಕೆ ಸೂಪರ್ ಪುಡ್ ಎಂದರು ತಪ್ಪಾಗುವುದಿಲ್ಲ. ಕೊಬ್ಬರಿಯಲ್ಲಿ ನಾರಿನಾಂಶ, ಕೊಲೆಸ್ಟರಾಲ್, ಸಿಲೆನಿಯಂ, ಕೊಪ್ಪರ್ ಎಂಬ ಪೋಷಕಾಂಶಗಳು ಇವೆ. ಕೊಬ್ಬರಿಯನ್ನು ದಿನಕ್ಕೆ ಇಪ್ಪತ್ತರಿಂದ ಇಪ್ಪತೈದು ಗ್ರಾಂ ಗಳಷ್ಟು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಯಾವ ಸಮಯದಲ್ಲಾದರೂ ಸೇವಿಸಬಹುದು.
ದೇಹದ ಮೂಳೆಗಳಿಗೆ ಕೊಬ್ಬರಿ ಒಳ್ಳೆಯದು. ಮೂಳೆಗಳಿಗೆ ಬಲ ನೀಡುವುದಲ್ಲದೇ, ಮೂಳೆಗಳ ಟಿಶ್ಯೂ ಅಂದರೆ ಮೂಳೆಗಳ ಅಂಗಾಂಶಗಳಲ್ಲಿ ಕಡಿಮೆಯಾದ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ. ಒಂದು ವೇಳೆ ಮೂಳೆಗಳ ಅಂಗಾಂಶದಲ್ಲಿ ದೇಹದ ಯಾವ ಭಾಗದಲ್ಲಿಯೂ ಇದು ಸಮಸ್ಯೆ ಉತ್ಪತ್ತಿ ಮಾಡುತ್ತದೆ. ದೇಹಕ್ಕೆ ಬೇಕಾದ ಮಿನರಲ್ ಗಳು ಕೊಬ್ಬರಿ ಸೇವನೆಯಿಂದ ಬೇಗ ಸೇರಿಕೊಳ್ಳುತ್ತದೆ. ಆರ್ಥೋರೈಟಿಸ್ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಮೂಳೆಗಳಲ್ಲಿನ ಲ್ಯೂಬ್ರಿಕೆಂಟ್ ಕೊರತೆಯಿಂದ ಸಂದುಗಳಲ್ಲಿ ಕಟಕಟ ಸದ್ದು ಉಂಟಾಗುವ ಸಮಸ್ಯೆಗೆ ಕೊಬ್ಬರಿ ಸೇವನೆ ಒಳ್ಳೆಯದು. ಕೊಬ್ಬರಿಯಲ್ಲಿರುವ ಖನಿಜಾಂಶ ಹಾಗೂ ಎಣ್ಣೆ ಅಂಶ ಲ್ಯೂಬ್ರಿಕೆಂಟ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕೊಬ್ಬರಿಯಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿ, ಜ್ಞಾಪಕ ಶಕ್ತಿ ವೃದ್ದಿಸುತ್ತದೆ.
ಮೂಲವ್ಯಾಧಿ ಹಾಗೂ ಪೈಲ್ಸ್ ಗೆ ಕೊಬ್ಬರಿ ಒಂದು ಒಳ್ಳೆಯ ಔಷಧ. ಮಲಬದ್ಧತೆಯ ಸಮಸ್ಯೆಗೆ ಕೊಬ್ಬರಿಯಲ್ಲಿರುವ ನಾರಿನಾಂಶ ಉತ್ತಮ ಪರಿಹಾರ ನೀಡುತ್ತದೆ. ರಕ್ತ ಹೀನತೆಯಿಂದ ಉಂಟಾಗುವ ತಲೆಸುತ್ತು, ನಿಶ್ಯಕ್ತಿ ಇವುಗಳಿಗೆ ಕೊಬ್ಬರಿ ಉತ್ತಮ ಪರಿಹಾರ. ಕೊಬ್ಬರಿಯಲ್ಲಿರುವ ಕಬ್ಬಿಣದ ಅಂಶ ರಕ್ತ ಹೀನತೆಯ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಪ್ರತಿದಿನ ಇಪ್ಪತ್ತು ಗ್ರಾಂ ತುರಿದ ಕೊಬ್ಬರಿ ಹಾಗೂ ಇಪ್ಪತ್ತು ಗ್ರಾಂ ಕಲ್ಲು ಸಕ್ಕರೆ ಇವೆರಡನ್ನು ಸೇರಿಸಿ, ಸೂರ್ಯೋದಯಕ್ಕಿಂತ ಮೊದಲು ಚೆನ್ನಾಗಿ ಜಗಿದು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಹಾಗೂ ಹಳೆಯ ತಲೆನೋವಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಕೊಬ್ಬರಿಯಲ್ಲಿರುವ ಸಿಲೆನಿಯಂ ಹೈಪೋ ಥೈರಾಯ್ಡ್ ಅಥವಾ ಹೈಪರ್ ಥೈರಾಯ್ಡ್ ಎರಡು ಸಮಸ್ಯೆಗೂ ಪರಿಹಾರ ನೀಡುತ್ತದೆ. ಕೊಬ್ಬರಿಯಲ್ಲಿರುವ ಪೈಬರ್ ಹೃದಯದ ಆರೋಗ್ಯಕ್ಕೆ ತುಂಬ ಒಳ್ಳೆಯದು. ರೋಗ ನಿರೋಧಕ ಶಕ್ತಿಯ ಹೆಚ್ಚಳ ಒಣ ಕೊಬ್ಬರಿಯನ್ನು ಸೇವಿಸುವುದರಿಂದ ಸಿಗುತ್ತದೆ. ಕೊಬ್ಬರಿಯು ಪುರುಷ ಹಾಗೂ ಮಹಿಳೆಯರ ಬಂಜೆತನ ನಿವಾರಿಸುತ್ತದೆ. ನಿದ್ರಾಹೀನತೆಯ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಹಾಲಿಗೆ ಎರಡು ಚಮಚ ಒಣ ಕೊಬ್ಬರಿ ಬೆರೆಸಿ ತಿನ್ನುವುದು ಉತ್ತಮ ಪರಿಹಾರ. ಅಜೀರ್ಣ ಹಾಗೂ ಕೂಡಲು ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಮದುಮೇಹಿಗಳು ಕೊಬ್ಬರಿಯ ಸೇವನೆ ಮಾಡಬಹುದು. ಕೊಬ್ಬರಿಯು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಣ್ಣುಗಳಿಗೆ ಕೊಬ್ಬರಿ ಒಳ್ಳೆಯದು. ಯಾವುದೆ ರೀತಿಯ ಖಾಯಿಲೆಗಳು ಸುಲಭವಾಗಿ ದೇಹ ಸೇರಲು ಕೊಬ್ಬರಿಯಲ್ಲಿರುವ ಆಂಟಿಬಯೋಟಿಕ್ ಅಂಶ ಬಿಡುವುದಿಲ್ಲ.
ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ನೈಸರ್ಗಿಕ ಔಷಧೀಯ ಗುಣ ಇರುವ ವಸ್ತುಗಳಿವೆ. ಇವುಗಳ ಬಗೆಗೆ ನಮಗೆ ಅರಿವಿರುವುದಿಲ್ಲ ಅಷ್ಟೆ. ಕೊಬ್ಬರಿಯ ಸಣ್ಣ ತುಂಡನ್ನು ಪ್ರತಿದಿನ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳೊಣ.