ದೇಹಕ್ಕೆ ಎನರ್ಜಿ ಪಡೆಯಲು ಸಾಕಷ್ಟು ಆಹಾರ ಪದ್ಧತಿಗಳಿವೆ ಅವುಗಳಲ್ಲಿ ಈ ಮೊಳಕೆಕಾಳುಗಳು ಸಹ ಒಂದಾಗಿದೆ, ಅಡುಗೆಯಲ್ಲಿ ಅಥವಾ ಹಸಿ ಮೊಳಕೆಕಾಳುಗಳನ್ನು ಪ್ರತಿದಿನ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಮೊಳಕೆಕಾಳು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವಂತದ್ದು ಹಾಗಾಗಿ ಇದನ್ನು ಪ್ರತಿದಿನ ಬೆಳಗ್ಗೆ ಸೇವನೆ ಮಾಡಿದರೆ ಅತಿ ಉಪಯುಕ್ತ. ಯಾವೆಲ್ಲ ಹಸಿ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮ ಅನ್ನೋದನ್ನ ನೋಡುವುದಾದರೆ ಬಟಾಣಿ ಹುರುಳಿಕಾಳು ಹೆಸರುಕಾಳು ಹೀಗೆ ನಾನಾ ದ್ವಿದಳಗಳ ಮೊಳಕೆಯನ್ನು ಕಟ್ಟಿ ಪ್ರತಿದಿನ ಬೆಳಗ್ಗೆ ಟಿಫನ್ ಗೂ ಮುನ್ನ ಸೇವನೆ ಮಾಡಿದರೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ಇನ್ನು ಈ ಮೊಳಕೆಕಾಳುಗಳಿಂದ ಸಿಗುವ ಆರೋಗ್ಯಕಾರಿ ಲಾಭಗಳೇನು ಅನ್ನೋದನ್ನ ನೋಡುವುದಾದರೆ ಪ್ರತಿದಿನ ಕಾಡುವಂತ ಅಜೀರ್ಣತೆ ನಿವಾರಣೆಯಾಗುವುದು ಹಾಗೂ ಇದರಲ್ಲಿರುವಂತ ಫೈಬರ್ ಅಂಶ ಮಲಬಬದ್ದತೆ ಇರೋರಿಗೆ ಸಹಕಾರಿ ಹಾಗೆಯೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದಲ್ಲಿ ರಕ್ತಕಣಗಳು ಹೆಚ್ಚಳವಾಗುದು, ಅಷ್ಟೇ ಅಲ್ದೆ ದೇಹವನ್ನು ಗಟ್ಟಿಮುಟ್ಟಾಗಿರುವಂತೆ ಬಲವನ್ನು ಹೆಚ್ಚಿಸುವುದು. ದೇಹದ ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದೆ.
ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ಜೊತೆಗೆ ದೇಹದಲ್ಲಿ ರಕ್ತ ಸಂಚಲವನ್ನು ಹೆಚ್ಚಿಸುವುದು ಆದ್ದರಿಂದ ಕ್ರೀಡೆಯಲ್ಲಿ ಭಾಗವಹಿಸುವವರು ಕ್ರೀಡಾಪಟುಗಳು ಪ್ರತಿದಿನ ಮೊಳಕೆಕಾಳುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಉತ್ತಮ ಎನರ್ಜಿ ದೊರೆಯುವುದು. ಹೋಟಲ್ ಬೇಕರಿಗಳಲ್ಲಿ ಸಿಗುವಂತ ನಾನಾ ಜಂಕ್ ಫುಡ್ ಸೇವನೆ ಮಾಡಿ ಅನಾರೋಗ್ಯಕ್ಕೆ ಹಿಡಗುವ ಬದಲು ನೈಸರ್ಗಿಕವಾಗಿ ಪೋಷಕಾಂಶಗಳನ್ನು ಹೇರಳವಾಗಿ ಹೊಂದಿರುವಂತ ಈ ಮೊಳಕೆಕಾಳುಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.