ವೈಜನಾಥ ಬಿರಾದಾರ್ ಅವರ ಊರು, ನಟನೆ, ಅವರಿಗೆ ದೊರೆತ ಪ್ರಶಸ್ತಿಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬೀದರ್ ಜಿಲ್ಲೆಯ ಒಂದು ಸಣ್ಣ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಬಿರಾದಾರ್ ಅವರು ಮೂರನೇ ಕ್ಲಾಸ್ ಓದಿದ್ದಾರೆ, ಸಾಲ ಮಾಡಿ ಬೆಂಗಳೂರಿಗೆ ಬಂದು ಸಿನಿಮಾರಂಗಕ್ಕೆ ಪರಿಚಯವಾಗಿ ಸಿನಿಮಾಗಳಲ್ಲಿ ಕುಡುಕ, ಭಿಕ್ಷುಕ ಪಾತ್ರಗಳಲ್ಲಿ ಸಹಜ ನಟನೆಯನ್ನು ಮಾಡುವ ಕಲಾವಿದರು ಅವರು. ಬಿರಾದಾರ್ ಅವರು ಕನ್ನಡದಲ್ಲಿ ಇಲ್ಲಿಯವರೆಗೂ ಸುಮಾರು 350 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೂ, ಸಾಕಷ್ಟು ಹಣವನ್ನು ಗಳಿಸುತ್ತಿದ್ದರೂ ಇಂದಿಗೂ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ. ಇವರು ಓಮಲ್ಲಿಗೆ, ಏಕದಂತ, ಸೂರಪ್ಪ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ 2010 ರಲ್ಲಿ ತೆರೆಕಂಡ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿನ ನಟನೆಗೆ ಬಿರಾದಾರ್ ಅವರಿಗೆ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ನಡೆದ ಅಂತಾರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಬಂದಿದೆ, ಈ ವಿಷಯ ನಮ್ಮಲ್ಲಿ ಹೆಚ್ಚಾಗಿ ಬೆಳಕಿಗೆ ಬಂದಿಲ್ಲ ಆದರೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಅವರಿಗೆ ವಿಷಯ ತಿಳಿದ ಕೂಡಲೇ ಬಿರಾದಾರ್ ಅವರಿಗೆ ಕರೆ ಮಾಡಿ ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ಬಂದಿದ್ದು ನನಗೆ ಹೆಮ್ಮೆ ಎಂದು ಅಭಿನಂದಿಸಿದ್ದಾರೆ. ಅಲ್ಲದೇ ಬಿರಾದಾರ್ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದ ಬಿರಾದಾರ್ ಅವರ‌ ಸಾಧನೆ ಶ್ಲಾಘನೀಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!