ಜಿಮ್ ಈಗಿನ ಕಾಲದಲ್ಲಿ ಅತಿ ಹೆಚ್ಚು ಲಾಭದಾಯಕ ಕೆಲಸ ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ದೇಹ ಸದೃಢವಾಗಿ ಇಟ್ಟುಕೊಳ್ಳಲು ಜಿಮ್ ನ ಮೊರೆ ಹೋಗುತ್ತಾರೆ. ಒಂದು ಊರಿನಲ್ಲಿ ಎರಡರಿಂದ ಮೂರು ಜಿಮ್ ಗಳಂತು ಇದ್ದೆ ಇರುತ್ತದೆ. ಹುಡುಗರು, ಹುಡುಗಿಯರು ಇಬ್ಬರೂ ಹೋಗಬಹುದಾದಂತ ಜಿಮ್ ಬೇರೆ, ಹುಡುಗರಿಗೆ ಬೇರೆ ಜಿಮ್ ಹಾಗೂ ಹುಡುಗಿಯರಿಗೆ ಬೇರೆ ಜಿಮ್ ಹೀಗೆ ಮೂರು ತರಹದ ಜಿಮ್ ಗಳು ಇದೆ. ಇಲ್ಲೊಬ್ಬರು ನಟಿ ಜಿಮ್ ನಲ್ಲಿ ವರ್ಕೌಟ್ ಮಾಡಿದ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಈ ನಟಿ ಯಾರು? ಎನಿದು ಸುದ್ದಿ ಎಂದು ಈ ಮಾಹಿತಿಯ ಮೂಲಕ ತಿಳಿಯೋಣ.
ಜಿಮ್ ನಲ್ಲಿ ತನ್ನ ದೇಹವನ್ನು ದಂಡಿಸಿ, ಬೆವರಿನ ಹೊಳೆ ಹರಿಸುತ್ತಿದ್ದಾರೆ ನಟಿ ಸಮಂತಾ ಅಕ್ಕಿನೆನಿ. ಜಿಮ್ ನಲ್ಲಿ ವೇಟ್ ಲಿಪ್ಟಿಂಗ್ ಮೂಲಕ ತನ್ನ ದೇಹವನ್ನು ದಂಡಿಸುತ್ತಿದ್ದಾರೆ ಸಮಂತಾ. ಒಮ್ಮೆ ನಿಂತು ವೇಟ್ ಲಿಪ್ಟಿಂಗ್ ಮಾಡಿದರೆ ಒಮ್ಮೆ ಮಲಗಿ ವೇಟ್ ಲಿಪ್ಟಿಂಗ್ ಮಾಡುತ್ತಿದ್ದಾರೆ. ಜಿಮ್ ನ ಮಾರ್ಗದರ್ಶಕರ ಸಲಹೆಯ ಮೇರೆಗೆ, ಸಮಂತಾ ತನಗೆ ಹೊಂದುವ ರೀತಿಯ ವರ್ಕೌಟ್ ಗಳನ್ನು ಮಾಡುವ ಮೂಲಕ ತಮ್ಮ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ.
ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಯಾವುದೇ ರೀತಿಯ ವರ್ಕೌಟ್ ಗಳನ್ನು ಜಿಮ್ ಮಾರ್ಗದರ್ಶಕರ ಸಹಾಯವಿಲ್ಲದೆ, ಸಲಹೆ ಕೇಳದೆ ದೇಹ ದಂಡಿಸಲು ಮುಂದಾಗಬೇಡಿ. ನಿಮ್ಮ ದೇಹಕ್ಕೆ ಒಗ್ಗದೆ ಇದ್ದ ವರ್ಕೌಟ್ ಮಾಡಿದಲ್ಲಿ ಜೀವಕ್ಕೆ ಹಾನಿ ಉಂಟಾಗುವ ಸಂಭವ ಇರುತ್ತದೆ.