ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿರುವ ಆದೇಶದಲ್ಲಿ ಶಾಲೆಯನ್ನು ಪ್ರಾರಂಭಿಸಲು ಆದೇಶ ನೀಡಿದೆ. ಆದರೆ ಅದು ಆಯಾ ರಾಜ್ಯಗಳಿಗೆ ಅಧಿಕಾರವನ್ನು ಕೊಟ್ಟಿದೆ. ಆದರೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹರಡುವುದು ಹೆಚ್ಚುತ್ತಲೇ ಇದೆ. ಹೀಗಾಗಿ ತಕ್ಷಣ ಶಾಲೆ ಪ್ರಾರಂಭಿಸಲು ಹಿಂದೇಟು ಹಾಕುತ್ತಿದೆ.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಶಾಲೆಗಳನ್ನು ಪ್ರಾರಂಭಿಸುವುದು ಬೇಡ ಎಂದು ತಿಳಿಸಿದೆ. ಮಕ್ಕಳ ಹಕ್ಕು ರಕ್ಷಣಾ ಆಯೋಗವು ಶಾಲೆಗಳನ್ನು ಪ್ರಾರಂಭಿಸಲು ಅಗತ್ಯ ಮುನ್ನೇಚರಿಕಾ ಕ್ರಮಗಳನ್ನು ಅಳವಡಿಸಿ ಶಾಲೆ ತೆರೆಯಲು ಸಲಹೆ ನೀಡಿದೆ. ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಮಾನ್ಯ ಬಿ. ಎಸ್. ವೈ. ಯಡಿಯೂರಪ್ಪ ಅವರು ತುಮಕೂರು, ಮೈಸೂರು, ಧಾರವಾಡ, ಮಂಗಳೂರು ಈ ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದೆ.
ಸಾವಿನ ಸಂಖ್ಯೆ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾದರೆ, ಕೆಲವಡೆ ಕಡಿಮೆಯಾಗಿದೆ. ಕೊರೋನಾ ವೈರಸ್ ತಡೆಗಟ್ಟಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ನರೇಂದ್ರ ಮೋದಿ ಅವರು ಕೂಡ ಸಾವಿನ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ, ಕಡಿಮೆ ಮಾಡಲು ಸಲಹೆಗಳನ್ನು ನೀಡಿದ್ದಾರೆ. ಶಾಲೆಗಳನ್ನು ತೆರೆಯಲು ಯಾವುದೇ ಚರ್ಚೆ ಮಾಡಲಿಲ್ಲ. ತಂದೆ ತಾಯಿಗಳ ಒಪ್ಪಂದ ಬಹಳ ಮುಖ್ಯ, ಹಾಗಾಗಿ ಈಗೀನ ಪರಿಸ್ಥಿತಿಗಳನ್ನು ನೋಡಿ ಶಾಲೆಗಳನ್ನು ಪ್ರಾರಂಭಿಸುತ್ತಾರೆ.