ನಟಿ ಮೇಘನಾ ರಾಜ್ ಅವರ ಮನೆಗೆ ಸಧ್ಯದಲ್ಲೇ ಹೊಸ ಅತಿಥಿಯ ಆಗಮನ ಆಗಲಿರುವುದು ಎಲ್ಲರಿಗೂ ತಿಳಿದೇ ಇದೆ ಹಾಗೂ ಎಲ್ಲರೂ ಆ ಅತಿಥಿಯ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಪ್ರೀತಿಸಿದ ಪತಿಯ ಅಗಲಿಕೆಯ ನಂತರ ಬಹುಶಃ ಆ ನೋವನ್ನು ಮರೆಸಲು ಎಂದೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಅವರ ಪ್ರೀತಿಯ ಪ್ರತೀಕವಾಗಿ ದೇವರು ಒಂದು ಪುಟ್ಟ ಕಂದನನ್ನು ಮೇಘನಾ ರಾಜ್ ಅವರ ಮಡಿಲಿಗೆ ನೀಡಿದ್ದಿರಬಹುದು. ಇನ್ನು ಮೊನ್ನೆ ಮೊನ್ನೆ ಅಷ್ಟೇ ನಟಿ ಮೇಘನಾ ರಾಜ್ ಅವರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಗಿದ್ದು , ಚಿರು ಅವರ ತಮ್ಮ ಧ್ರುವ ಸರ್ಜಾ ಅವರು ಪ್ರೀತಿಯಿಂದ ತಾಯಿ ಸಮಾನವಾದ ಅತ್ತಿಗೆ ಮೇಘನಾ ರಾಜ್ ಅವರಿಗೆ ಒಂದು ಉಡುಗೊರೆಯನ್ನು ನೀಡಿದ್ದಾರೆ. ಧ್ರುವ ಸರ್ಜಾ ಅವರು ಮೇಘನಾ ಅವರಿಗೆ ನೀಡಿದ ಉಡುಗೊರೆ ಎನು ಅನ್ನೋದನ್ನ ನೋಡೋಣ.
ಕರೋನ ಕಾರಣದಿಂದ ನಟಿ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರವನ್ನು ಹೆಚ್ಚಾಗಿ ಯಾವ ಜನರಿಗೂ ಹೇಳದೆಯೇ ಶಾಸ್ತ್ರೋಕ್ತವಾಗಿ ಕಡಿಮೆ ಜನಸಂಖ್ಯೆಯಲ್ಲಿ ಮಾಡಲಾಗಿತ್ತು. ಚಿರು ಅವರು ಇಲ್ಲದ ಸಮಯದಲ್ಲಿ ಅವರ ಬದಲಿಗೆ ಅವರ ಪ್ರತಿರೂಪವಾಗಿ ಚಿರಂಜೀವಿ ಸರ್ಜಾ ಅವರ ಕಟ್ಟೌಟ್ ನಿರ್ಮಿಸಿ ಮೇಘನಾ ರಾಜ್ ಅವರು ಕುಳಿತಿರುವ ಕುರ್ಚಿಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಆ ಕಟೌಟ್ ನೋಡಿದರೆ ಒಂದು ಕ್ಷಣಕ್ಕೆ ನಿಜಕ್ಕೂ ಚಿರು ಅವರೇ ಅಲ್ಲಿ ನಿಂತಿರುವಂತೆ ಭಾಸವಾಗುವುದು ಅಂತೂ ಸತ್ಯ. ಮೇಘನಾ ಅವರ ತಂದೆ ತಾಯಿ ಸುಂದರ್ ರಾಜ್ ಹಾಗೂ ಪ್ರಮೀಳಾ ಅವರು ತಮ್ಮ ಮಗಳ ಸೀಮಂತ ಶಾಸ್ತ್ರವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ.
ಮೇಘನಾ ಅವರ ಸೀಮಂತ ಶಾಸ್ತ್ರದಲ್ಲಿ ಚಿರು ಅವರ ತಮ್ಮ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಮತ್ತು ಧ್ರುವ ಸರ್ಜಾ ಕುಟುಂಬದ ಸದಸ್ಯರು ಸಹ ಭಾಗಿಯಾಗಿದ್ದರು. ಹಾಗೆ ಸುಂದರ್ ರಾಜ್ ಅವರ ಕುಟುಂಬಸ್ಥರು ಮತ್ತು ಆಪ್ತರು ಸಹ ಭಾಗಿಯಾಗಿದ್ದರು. ಇನ್ನು ಅಣ್ಣಾ ಎಂದರೆ ತನ್ನ ಜೀವ ಎನ್ನುವ ಧ್ರುವ ಸರ್ಜಾ ಅವರು ತನ್ನ ಅಣ್ಣನ ಮಗುವಿಗಾಗಿ ಪ್ರೀತಿಯಿಂದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಿರು ಫೋಟೋ ಎದುರು ನಿಂತು ದುಃಖ ಪಟ್ಟ ಧ್ರುವ ಸರ್ಜಾ ಕೂಡಾ ಆಶ್ಟಷ್ಟೇ ಆಗಿ ತಮ್ಮ ದುಃಖವನ್ನು ಮರೆಯುತ್ತಿದ್ದಾರೆ. ಮೇಘನಾ ಅವರಿಗೆ ತನ್ನ ಪತಿ ಚಿರು ಇಲ್ಲ ಎನ್ನುವ ಬೇಸರ ಒಂದು ಇದ್ದೇ ಇರುತ್ತದೆ ಆದರೂ ಸಹ ಬರಲಿರುವ ಪುಟ್ಟ ಕಂದ ಮೇಘನಾ ರಾಜ್ ಅವರ ನೋವನ್ನೆಲ್ಲ ಮರೆಸಿ ಅವರ ಜೀವನದಲ್ಲಿ ನೆಮ್ಮದಿ , ಸಂತೋಷ ತರಲಿ ಎಂದು ಆಶಿಸೋಣ.