ಖರ್ಜೂರದಿಂದಾಗುವ ಪ್ರಯೋಜನಗಳು ಹಾಗೂ ಒಣ ಖರ್ಜೂರ ಮತ್ತು ಹಸಿ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಒಣಖರ್ಜೂರ ಮತ್ತು ಹಸಿ ಖರ್ಜೂರ ಎರಡೂ ನೈಸರ್ಗಿಕವಾಗಿ ಶಕ್ತಿಯನ್ನು ಕೊಡುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಷಿಯಂ ಹೃದಯ ಸಂಬಂಧಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಇ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಮೆಗ್ನೀಷಿಯಂ ನಮ್ಮ ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನವಾಗಿ ಇಡುತ್ತದೆ ಅಲ್ಲದೇ ಖಿನ್ನತೆಯಂತಹ ರೋಗಗಳಿಂದ ಕಾಪಾಡುತ್ತದೆ. 100 ಗ್ರಾಂ ಒಣಖರ್ಜೂರದಲ್ಲಿ 280 ಗ್ರಾಂ ಕ್ಯಾಲೋರಿ ಇರುತ್ತದೆ. 100 ಗ್ರಾಂ ಹಸಿ ಖರ್ಜೂರದಲ್ಲಿ 145 ಗ್ರಾಂ ಕ್ಯಾಲೋರಿ ಇರುತ್ತದೆ. ಒಣಖರ್ಜೂರದಲ್ಲಿ ಹೆಚ್ಚು ಕ್ಯಾಲೊರಿ ಇರುತ್ತದೆ ಆದ್ದರಿಂದ ದೇಹದ ತೂಕ ಹೆಚ್ಚಾಗಬೇಕೆಂದರೆ ಒಣ ಖರ್ಜೂರವನ್ನು ಹಾಲಿನೊಂದಿಗೆ ತಿನ್ನುವುದರಿಂದ ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ.
ಹಸಿ ಖರ್ಜೂರದಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕಾದರೆ ಹಸಿ ಖರ್ಜೂರ ತಿನ್ನಬೇಕು, ಹಸಿ ಖರ್ಜೂರ ತಿನ್ನುವುದರಿಂದ ಹಸಿವು ಆಗುವುದಿಲ್ಲ ಇದರಿಂದ ಕಡಿಮೆ ತಿನ್ನುತ್ತಾರೆ, ಕೆಲವರಿಗೆ ತಿನ್ನುವ ಛಟ ಇರುತ್ತದೆ ಅಂತಹವರು ಫಾಸ್ಟ್ ಫುಡ್ ತಿನ್ನುವ ಬದಲು ಹಸಿ ಖರ್ಜೂರ ತಿನ್ನಬಹುದು. ಖರ್ಜೂರದಲ್ಲಿ ನಾರಿನ ಅಂಶವು ಹೆಚ್ಚಿದ್ದು ಜೀರ್ಣಕ್ರಿಯೆ ಶಕ್ತಿ ಹೆಚ್ಚಾಗುತ್ತದೆ.
ಹಸಿ ಖರ್ಜೂರಕ್ಕೆ ಹೋಲಿಸಿದರೆ ಒಣ ಖರ್ಜೂರದಲ್ಲಿ ಹೆಚ್ಚು ಫೈಬರ್ ಅಂಶವಿರುತ್ತದೆ. ದೇಹಕ್ಕೆ ಬೇಕಾದ ಫೈಬರ್ ಪ್ರಮಾಣ ಒಣ ಖರ್ಜೂರದಲ್ಲಿರುತ್ತದೆ. ಒಣ ಖರ್ಜೂರವನ್ನು ಜಾಸ್ತಿ ದಿನ ಸ್ಟೋರ್ ಮಾಡಬಹುದು, ಹಸಿ ಖರ್ಜೂರ ಹಸಿಯಾಗಿರುವುದರಿಂದ ಜಾಸ್ತಿ ದಿನ ಸ್ಟೋರ್ ಮಾಡಲು ಸಾಧ್ಯವಿಲ್ಲ. ಒಣ ಮತ್ತು ಹಸಿ ಖರ್ಜೂರ ಎರಡು ದೇಹಕ್ಕೆ ಒಳ್ಳೆಯದು ತೂಕ ಹೆಚ್ಚಿಸಿಕೊಳ್ಳುವುದಾದರೆ ಒಣ ಖರ್ಜೂರ, ತೂಕ ಇಳಿಸುವುದಾದರೆ ಹಸಿ ಖರ್ಜೂರ ಸೇವನೆಯನ್ನು ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.