ಮನೆಯಲ್ಲಿ ಕಸ ಗುಡಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ದಾರಿದ್ರ್ಯ ಕಾಡುವುದು
ಸಾಮಾನ್ಯವಾಗಿ ನಾವು ನೀವು ಕಸ ಗುಡಿಸಲು ಉಪಯೋಗಿಸುವ ಪೊರಕೆಯು ತಾಯಿ ಮಹಾಲಕ್ಷ್ಮಿಯ ಸ್ವರೂಪವೆಂದು ನಮ್ಮ ಪುರಾಣಗಳು ಸ್ಪಷ್ಟಪಡಿಸುತ್ತವೆ, ಅಲ್ಲದೇ ನಮ್ಮ ಹಿರಿಯರು ಕೂಡ ಅದೇ ನಂಬಿಕೆಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ಯಾಕಂದ್ರೆ ಇದು ನಿಜವಾದ ಮಾತು ಕೂಡಾ ಹೌದು ಯಾರ ಮನೆಯು ಸ್ವಚ್ಚವಾಗಿರುತ್ತದೆಯೋ ಅಲ್ಲಿ ಮಹಾಲಕ್ಷ್ಮಿಯು ಶಾಶ್ವತವಾಗಿ ನೆಲೆಸಿರುತ್ತಾಳೆಂಬ ನಂಬಿಕೆಯು ನಮ್ಮಲ್ಲಿ ಹಾಸುಹೊಕ್ಕಾಗಿದೆ, ಯಾವ ಮನೆಯು ಸ್ವಚತೆಯಿಂದ ಕೂಡಿರುವುದಿಲ್ಲವೋ ಯಾವ ಮನೆಯಲ್ಲಿ ಕಸ ಕಡ್ಡಿ ಎಲ್ಲೆಂದರಲ್ಲಿ ಬಿಸಾಡಿರುತ್ತದೆಯೋ ಆ ಮನೆಯಲ್ಲಿ ಜಗಳಗಳು ಗಲಬೆಗಳು ಕಿರಿಕಿರಿ ಮಾನಸಿಕ ಹಿಂಸೆಗಳು ಸದಾಕಾಲ ತಾಂಡವವಾಡುತ್ತಿರುತ್ತವೆ.
ಇನ್ನು ಮೊದಲನೆಯದಾಗಿ ನಾವು ಕಸ ಗುಡಿಸಲು ಬಳಸುವಂತಹ ಪೊರಕೆಯನ್ನು ಅಡುಗೆ ಮನೆಯಲ್ಲಿ ಇರಿಸುವುದು ಸೂಕ್ತವಲ್ಲ, ಇದು ವೈಜ್ಞಾನಿಕಾವಾಗಿಯೂ ಮತ್ತು ಅಧ್ಯಾತ್ಮಿಕವಾಗಿಯೂ ಒಂದು ದೊಡ್ಡ ತಪ್ಪು. ಯಾಕಂದ್ರೆ ನಾವು ಕಸ ಗುಡಿಸಲು ಬಳಸುವ ಪೊರಕೆಯನ್ನು ಅಡುಗೆ ಮನೆಯಲ್ಲಿ ಇರಿಸುವುದರಿಂದ ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಇನ್ನು ರಾತ್ರಿಯ ವೇಳೆಯಲ್ಲಿ ಅಂದರೆ ನೀವು ಮಲಗುವ ವೇಳೆಯಲ್ಲಿ ಈ ಪೊರಕೆಯನ್ನು ಬಾಗಿಲ ಬಳಿಯಲ್ಲಿ ಇರಿಸಿ ಮಲಗುವುದರಿಂದ ನಿಮ್ಮ ಮನೆಯ ಒಳಗೆ ಯಾವುದೇ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುವುದಿಲ್ಲ, ಆದರೆ ಬೆಳಿಗ್ಗೆ ಎದ್ದ ತಕ್ಷಣ ಬಾಗಿಲ ಬಳಿ ಇರಿಸಿರುವ ಈ ಪೊರಕೆಯನ್ನು ಯಾರಿಗೂ ಕಾಣದಂತೆ ಪಕ್ಕಕ್ಕೆ ತೆಗೆದು ಇಡಬೇಕಾಗುವುದನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಲ್ಲದೇ ಮನೆಗೆ ಬಂದ ಅತಿಥಿಗಳಿಗೆ ಮತ್ತು ಮನೆಯ ಸದಸ್ಯರ ದೃಷ್ಟಿ ಬೀಳದಂತಹ ಜಾಗಗಳಲ್ಲಿ ನೀವು ಪೊರಕೆಯನ್ನು ಇರಿಸಬೇಕಾಗುತ್ತದೆ, ಇನ್ನೂ ಅನುಕೂಲವಿದ್ದಲ್ಲಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ನೀವು ಈ ಪೊರಕೆಯನ್ನು ಇಟ್ಟಿದ್ದೇ ಆದಲ್ಲಿ ಅದು ಮನೆಗೆ ತುಂಬಾ ಒಳಿತನ್ನು ಉಂಟುಮಾಡುತ್ತದೆ.
ನೀವು ಮನೆಯಲ್ಲಿ ಕಸ ಗುಡಿಸಲು ಬಳಸುವ ಪೊರಕೆಯು ಹಳೆಯದಾಗಿದ್ದಲ್ಲಿ ನೀವು ಅದನ್ನು ಬದಲಿಸಬೇಕೆಂದಿದ್ದಲ್ಲಿ ಯಾವುದೇ ಕಾರಣಕ್ಕೂ ನೀವು ಅದನ್ನು ಮಂಗಳವಾರ ಮತ್ತು ಶುಕ್ರವಾರಗಳಲ್ಲಿ ಬದಲಾವಣೆ ಮಾಡುವುದು ಮನೆಗೆ ಶ್ರೇಯಸ್ಕರವಲ್ಲ, ನೀವು ಆ ಪೊರಕೆಯನ್ನು ಬದಲಿಸಲೇಬೇಕಾದಲ್ಲಿ ಶನಿವಾರ ಬದಲಾಯಿಸುವುದು ಬಹಳ ಒಳಿತು ಮತ್ತು ಸೂಕ್ತವಾದದ್ದು ಮತ್ತು ಯಾವುದೇ ಕಾರಣಕ್ಕೂ ಕೂಡ ಸೂರ್ಯ ಮುಳುಗಿದ ನಂತರ ಅಂದರೆ ರಾತ್ರಿ ವೇಳೆಯಲ್ಲಿ ಮನೆಯ ಕಸವನ್ನು ಗುಡಿಸುವುದು ಒಳಿತಲ್ಲ. ಹೀಗೆ ಮಾಡುವುದು ಮನೆಯಲ್ಲಿರುವ ಲಕ್ಷ್ಮಿಯನ್ನು ತಾವೇ ಮನೆಯಿಂದ ಹೊರಗೆ ಕಳಿಸಿದಂತೆ ಯಾವುದೇ ಕಾರಣಕ್ಕೂ ನೀವು ಈ ತಪ್ಪುಗಳನ್ನು ಮರೆತೂ ಕೂಡಾ ಮಾಡಬಾರದು.
ಯಾವುದೇ ಕಾರಣಕ್ಕೂ ಪೊರಕೆಯನ್ನು ಕಾಲಿನಿಂದ ತುಳಿಯುವುದು ಎಸೆಯುವುದು ಮತ್ತು ಪೊರಕೆಯಿಂದ ಇನ್ನೊಬ್ಬರಿಗೆ ಹೊಡೆಯುವುದನ್ನು ಮಾಡಬೇಡಿ ಹೀಗೆ ಮಾಡಿದ್ದೇ ಆದಲ್ಲಿ ನೀವು ತಾಯಿ ಮಹಾಲಕ್ಷ್ಮಿಯನ್ನು ಅವಮಾನಿಸಿದಂತೆಯೇ ಸರಿ, ಅಲ್ಲದೇ ಇದರಿಂದ ಮನೆಗೆ ದಾರಿದ್ಯ ತಗಲುವ ಸಂಭವವಿರುತ್ತದೆ. ಇನ್ನೂ ತುಂಬಾ ಹಳೆಯದಾದ ಪೊರಕೆಯನ್ನು ಬಳಸುವುದು ಸೂಕ್ತವಲ್ಲ ಮತ್ತು ಮನೆಯ ಯಾವುದೇ ಸದಸ್ಯರು ಯಾವುದೋ ಕಾರಣಕ್ಕೆ ಮನೆಯಿಂದ ಹೊರಗೆ ಹೋದ ನಂತರ ಮನೆಯಲ್ಲಿ ಕಸವನ್ನು ಗುಡಿಸಬಾರದು ಯಾಕಂದ್ರೆ ಅವರು ತಾವು ಹೋಗಿರುವ ಕೆಲಸದಲ್ಲಿ ಅಡ್ಡಿಯನ್ನು ಎದುರಿಸಬೇಕಾಗುತ್ತದೆ.
ನೀವು ಹೊಸ ಮನೆಗೆ ಪ್ರವೇಶ ಮಾಡುತ್ತಿದ್ದಲ್ಲಿ ಹಳೆಯ ಮನೆಯಲ್ಲಿರುವ ಪೊರಕೆಯನ್ನು ಯಾವುದೇ ಕಾರಣಕ್ಕೂ ಹೊಸ ಮನೆಗೆ ಕೊಂಡೊಯ್ಯುವುದು ಸೂಕ್ತವಲ್ಲ, ಯಾಕಂದ್ರೆ ನೀವು ಹಳೆಯ ಮನೆಯಲ್ಲಿರುವ ದಾರಿದ್ಯವನ್ನು ಹೊಸ ಮನೆಗೂ ನೀವೇ ತೆಗೆದುಕೊಂಡು ಹೋದಂತೆಯೇ ಸರಿ ಹಾಗಾಗಿ ಹೊಸ ಮನೆಗೆ ಹೋಗುವುದಿದ್ದಲಿ ಹೊಸ ಪೊರಕೆಯನ್ನು ಕೊಂಡು ಉಪಯೋಗಿಸುವುದು ಬಹಳ ಸೂಕ್ತ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಪೊರಕೆಯನ್ನು ನಿಲ್ಲಿಸಿ ಇರಿಸಬಾರದು.