ರಾಗಿಯ ಪ್ರಯೋಜನಗಳು ಹಲವಾರು ಹಾಗಾದರೆ ರಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ ರಾಗಿಯ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ, ರಾಗಿ ರೊಟ್ಟಿ, ರಾಗಿ ಉಂಡೆ ಹೀಗೆ ರಾಗಿಯಿಂದ ಹಲವು ರೆಸಿಪಿ ಮಾಡಬಹುದು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಆಹಾರವು ದೇಹಕ್ಕೆ ತಂಪು ಹಾಗೂ ಆರೋಗ್ಯಕರ. ರಾಗಿ ಧಾನ್ಯಗಳಲ್ಲಿ ಶ್ರೇಷ್ಟ ಧಾನ್ಯ. ಪ್ರೊಟೀನ್ ಶ್ರೀಮಂತವಾಗಿರುವ ರಾಗಿ ದೇಹದ ತೂಕ ಇಳಿಸುವವರಿಗೆ ವರದಾನವೇ ಸರಿ. ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಿ ರಾಗಿ ಮುದ್ದೆ ತಿಂದು ದಿನ ಶುರುಮಾಡುವುದು ಬಹುತೇಕ ಮಂದಿಗೆ ಅಭ್ಯಾಸವಾಗಿಬಿಟ್ಟಿದೆ. ರಾಗಿಯಲ್ಲಿರುವ ಅಮೀನೊ ಆಸಿಡ್, ಟ್ರೈಪ್ಟೊಫನ್ ಹಸಿವನ್ನು ಕಡಿಮೆಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರಾಗಿಯಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಮೂಳೆಗಳನ್ನು ಬಲಪಡಿಸುತ್ತದೆ. ಡಯಾಬಿಟಿಸ್ ನ ಮೆಲಿಟೋಸ್ ಮತ್ತು ಜೀರ್ಣವ್ಯೂಹದ ಅಸ್ವಸ್ಥತೆಯ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆಮಾಡುತ್ತದೆ. ಅಲ್ಲದೇ ಜಿರ್ಣವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ. ಇದರಲ್ಲಿ ಐರನ್ ಅಂಶ ಇರುತ್ತದೆ ಹಾಗೂ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ. ರಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶ ಮಲಬದ್ಧತೆಗೆ ಸಹಾಯವಾಗಿದೆ. ಹೈಪೊಥೈರಾಯಿಡ್ ನಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ. ತಾಯಂದರಿಗೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಹಾಗೂ ಹಾಲಿನ ಉತ್ಪಾದನೆಗೆ ರಾಗಿ ಸಹಕಾರಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ರಾಗಿ ಸೇವಿಸಿ ಅರೋಗ್ಯವಾಗಿರಿ.