ನಟನೆಯಿಂದ ಮನಗೆದ್ದ ಸುಧಾರಾಣಿ ಅವರು ತಮ್ಮ ಜೀವನದಲ್ಲಿ ಎಂತಹ ಕಷ್ಟ ಅನುಭವಿಸಿದ್ದಾರೆ ಹಾಗೂ ಅವರ ಸಿನಿ ಜರ್ನಿ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಸುಧಾರಾಣಿಯವರು 1970 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು ತಂದೆ ಗೋಪಾಲಕೃಷ್ಣ ಹಾಗೂ ತಾಯಿ ನಾಗಲಕ್ಷ್ಮೀ. ಪಾರ್ವತಮ್ಮ ರಾಜಕುಮಾರ್ ಅವರು ಸುಧಾರಾಣಿ ಅವರನ್ನು ಒಂದು ಪ್ರೋಗ್ರಾಮ್ ನಲ್ಲಿ ನೋಡಿ ಇಷ್ಟವಾಗುತ್ತಾರೆ. ಅದೇ ಸಮಯದಲ್ಲಿ ಶಿವರಾಜಕುಮಾರ್ ಅವರು ಆನಂದ್ ಸಿನಿಮಾಕ್ಕಾಗಿ ಹೀರೋಯಿನ್ ಹುಡುಕುತ್ತಿರುತ್ತಾರೆ. ಪಾರ್ವತಮ್ಮ ರಾಜಕುಮಾರ್ ಅವರು ಸುಧಾರಾಣಿಯವರನ್ನು ಆನಂದ್ ಸಿನಿಮಾದ ಹೀರೋಯಿನ್ ಎಂದು ನಿರ್ಧರಿಸುತ್ತಾರೆ. ಅಲ್ಲಿಂದ ಸುಧಾರಾಣಿ ಅವರ ಸಿನಿ ಜರ್ನಿ ಶುರುವಾಗುತ್ತದೆ. ಕೆಲವೇ ದಿನಗಳಲ್ಲಿ ಸುಧಾರಾಣಿ ಅವರು ಕನ್ನಡದ ಟಾಪ್ ನಟಿ ಆಗುತ್ತಾರೆ. ನಂತರ ಸುಧಾರಾಣಿ ಅವರು ಕುಟುಂಬದಲ್ಲಿ ನೋಡಿದ ಹುಡುಗನನ್ನು ಮದುವೆಯಾಗುತ್ತಾರೆ. ಹುಡುಗನ ಹೆಸರು ಡಾಕ್ಟರ್ ಸಂಜಯ್ ಇವರು ಅಮೆರಿಕಾದಲ್ಲಿ ಡಾಕ್ಟರ್ ಆಗಿರುತ್ತಾರೆ. ಮದುವೆ ನಂತರ ಸುಧಾರಾಣಿ ಅಮೆರಿಕಾಕ್ಕೆ ಹೋಗುತ್ತಾರೆ ಆದರೆ ಅಲ್ಲಿ ಅವರ ಗಂಡ ಸುಧಾರಾಣಿ ಅವರಿಗೆ ಬಹಳ ಟಾರ್ಚರ್ ಕೊಡುತ್ತಾನೆ. ಅವನು ಸುಧಾರಾಣಿ ಅವರಿಗೆ ಕೆಮಿಕಲ್ ಇಂಜೆಕ್ಷನ್ ಕೊಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದನು ಅಲ್ಲದೆ ಸುಧಾರಾಣಿ ಅವರ ಪಾಸ್ ಪೋರ್ಟ್ ಕಿತ್ತುಕೊಳ್ಳುತ್ತಾನೆ.

ಈ ವಿಷಯ ಕುಟುಂಬದವರಿಗೆ ಗೊತ್ತಾದಾಗ ಏನು ಮಾಡಬೇಕೆಂದು ತಿಳಿಯದೇ ರಾಜಕುಮಾರ್ ಹಾಗೂ ಅಂಬರೀಷ್ ಅವರ ಸಹಾಯ ಕೇಳುತ್ತಾರೆ. ಆಗ ರಾಜಕುಮಾರ್ ಮತ್ತು ಅಂಬರೀಷ್ ಅವರು ಅಮೆರಿಕದಲ್ಲಿರುವ ಕನ್ನಡಿಗರನ್ನ ಕಾಂಟಾಕ್ಟ್ ಮಾಡಿ ಸಹಾಯ ಕೇಳುತ್ತಾರೆ. ಅಲ್ಲಿರುವ ಕನ್ನಡಿಗರು ಡಾಕ್ಟರ್ ಸಂಜಯ್ ಅವರ ಮನೆಗೆ ನುಗ್ಗಿ ಸುಧಾರಾಣಿ ಅವರ ಪಾಸ್ ಪೋರ್ಟ್ ಕಿತ್ತುಕೊಂಡು ಸುಧಾರಾಣಿ ಅವರಿಗೆ ಕೊಟ್ಟು ಬೆಂಗಳೂರಿಗೆ ಕಳುಹಿಸುತ್ತಾರೆ. ವಾಪಸ್ ಬಂದ ಕೂಡಲೇ ಸುಧಾರಾಣಿ ಅವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಆಗ ಸಹಾಯಕ್ಕೆ ಬಂದಿದ್ದು ಅವರ ಸಂಬಂಧಿ ಗೋವರ್ಧನ್ ನಂತರ ಸುಧಾರಾಣಿ ಅವರನ್ನೆ ಮದುವೆಯಾಗುತ್ತಾರೆ. ಅವರಿಗೆ ಒಬ್ಬಳು ಮಗಳಿದ್ದಾಳೆ ಅವಳ ಹೆಸರು ನಿಧಿ. ಸುಧಾರಾಣಿ ಅವರು ನಮಗೆ ಯಾರಾದರೂ ನೋವು ಮಾಡಿದರೆ ನಾವು ಅವರಿಂದ ದೂರ ಇರಬೇಕು ಎಂದು ಹೇಳುತ್ತಾರೆ. ಜೀವನದಲ್ಲಿ ಕಷ್ಟ ಯಾರಿಗೂ ತಪ್ಪಿದ್ದಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!