ಲೋ ಬಿಪಿ ಸಮಸ್ಯೆ ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ ಈ ಸಮಸ್ಯೆಗೆ ಮನೆಯಲ್ಲೆ ಮಾಡಬಹುದಾದ ಪರಿಹಾರವಿದೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಲೋ ಬಿಪಿ ಆದಾಗ ತಲೆಸುತ್ತು ಬರುವುದು, ಸುಸ್ತಾಗುವುದು ಇನ್ನಿತರ ಸಮಸ್ಯೆಗಳು ಕಂಡುಬರುತ್ತವೆ. ಲೋ ಬಿಪಿಗೆ ಕಾರಣ ರಕ್ತದ ಕೊರತೆ, ಅಶಕ್ತತೆ, ಹಿಮೋಗ್ಲೋಬಿನ್ ಅಂಶ ಕಡಿಮೆಯಾದಲ್ಲಿ, ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾದಲ್ಲಿ ಅಥವಾ ಯಾವುದಾದರೂ ಕಾಯಿಲೆಯಿಂದ ಲೋ ಬಿಪಿ ಆಗುವ ಸಾಧ್ಯತೆ ಹೆಚ್ಚು ಇದಕ್ಕೆ ಪರಿಹಾರವೆಂದರೆ ಜಾಸ್ತಿ ಉಪ್ಪು ಮತ್ತು ಉಪ್ಪಿನಕಾಯಿಯನ್ನು ತಿನ್ನಬೇಕು ಅದರೊಂದಿಗೆ ಹಾಲಿಗೆ ಸ್ವಲ್ಪ ತುಪ್ಪ ಹಾಕಿ ಸೇವನೆ ಮಾಡುತ್ತಾ ಬರಬೇಕು.
ಅಲ್ಲದೇ ಕ್ಯಾರೇಟ್ ಮತ್ತು ಬಿಟರೂಟ್ ರಸವನ್ನು ಅಥವಾ ಜ್ಯೂಸನ್ನು 10 ರಿಂದ 20 ml ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸುತ್ತಾ ಬರಬೇಕು ಇದರಿಂದ ಲೋ ಬಿಪಿ ಸಮಸ್ಯೆಯು ನಿವಾರಣೆಯಾಗುತ್ತದೆ. ಸ್ವಲ್ಪ ಒಣದ್ರಾಕ್ಷಿಯನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಅದೇ ನೀರಿನಲ್ಲಿ ಕಿವುಚಿ ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾ ಬರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗಿ ಲೋ ಬಿಪಿಯು ನಿವಾರಣೆಯಾಗುತ್ತದೆ. ಹೆಚ್ಚಿನ ಸಮಸ್ಯೆ ಕಂಡುಬಂದರೆ ವೈದ್ಯರ ಬಳಿ ಸಲಹೆ ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.