ಮಕ್ಕಳಿಗಾಗಿ ಪತ್ನಿ ಮನೆಯ ಮುಂದೆ ಧರಣಿ ಕೂತ ಐ.ಪಿ.ಎಸ್ ಅಧಿಕಾರಿಯ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕಲಬುರ್ಗಿ ಆಂತರಿಕ ಭದ್ರತಾ ವಿಭಾಗದ (ಐಎಸ್.ಡಿ) ಎಸ್.ಪಿಯಾಗಿರುವ ಅರುಣ್ ರಂಗರಾಜನ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಿ.ವಿ.ಐ.ಪಿ ಭದ್ರತಾ ಡಿಸಿಪಿಯಾಗಿರುವ ಇಲಾಖೆಯ ಕರುಣಾಕರನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂದು ಮಗು ಹುಟ್ಟಿದ ನಂತರ ಇಬ್ಬರ ನಡುವೆ ಕೌಟುಂಬಿಕ ಭಿನ್ನಾಭಿಪ್ರಾಯ ಶುರುವಾಗಿ ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಪಡೆದುಕೊಂಡಿದ್ದರು. ಡೈವೋರ್ಸ್ ಆಗಿದ್ದರಿಂದ ಇಬ್ಬರೂ ದೂರವೇ ಉಳಿದಿದ್ದರು. ಇದಾದ ಬಳಿಕ ದಂಪತಿಗೆ ಇನ್ನೊಂದು ಹೆಣ್ಣು ಮಗು ಜನಿಸಿತ್ತು. ಭಾನುವಾರ ಕರ್ತವ್ಯಕ್ಕೆ ರಜೆ ಇದ್ದಿದ್ದರಿಂದ ಅವರು ಮಗಳನ್ನು ನೋಡಲು ಬೆಂಗಳೂರಿನ ವಸಂತ ನಗರದಲ್ಲಿರುವ ಪತ್ನಿಯ ಮನೆಗೆ ಹೋಗಿದ್ದರು. ಆದರೆ ಅವರನ್ನು ಒಳಗೆ ಸೇರಿಸದೆ ಬಾಗಿಲು ಹಾಕಿಕೊಳ್ಳಲಾಗಿತ್ತು ಅಲ್ಲದೇ ಪತ್ನಿ ಕರುಣಾಕರನ್ ಅವರು ಮಕ್ಕಳನ್ನು ನೋಡಲು ಅವಕಾಶ ನೀಡಿರಲಿಲ್ಲ.
ಇದರಿಂದ ಬೇಸತ್ತ ಅರುಣ್ ರಂಗರಾಜನ್ ಅವರು ಮಕ್ಕಳನ್ನು ನೋಡದೆ ಇಲ್ಲಿಂದ ಹೋಗಲ್ಲ ಎಂದು ವಸಂತನಗರದ ಪತ್ನಿಯ ಮನೆ ಮುಂದೆಯೇ ಆಹೋರಾತ್ರಿ ಧರಣಿ ನಡೆಸಿದರು. ಬೆಂಗಳೂರಿನ ನಾರ್ಥ್ ಈಸ್ಟ್ ಡಿಸಿಪಿ ಭೀಮಶಂಕರ್ ಗುಳೇದ್ ಹಾಗೂ ಇತರೆ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನ ಐ.ಪಿ.ಎಸ್ ಅಧಿಕಾರಿಗಳು ರಂಗರಾಜನ್ ರ ಮನವೊಲಿಸಲು ವಿಫಲರಾಗಿದ್ದರು.
ಕೊನೆಗೆ ತಡರಾತ್ರಿ 2:30ರ ವೇಳೆಗೆ ಪತ್ನಿ ಜೊತೆಗೆ ಬಂದ ಡಿ.ಸಿ.ಪಿ ಭೀಮಾಶಂಕರ್ ಗುಳೇದ್, ಸೋಮವಾರ ನಿನ್ನ ಮಕ್ಕಳನ್ನು ಭೇಟಿ ಮಾಡಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿ, ಎಸ್‍ಪಿ ರಂಗರಾಜನ್‍ರನ್ನ ತನ್ನ ಮನೆಗೆ ಕರೆದುಕೊಂಡು ಹೋದರು.