ಈ ಲೇಖನದಲ್ಲಿ ನಾವು ಪೇಂಟ್ ಬಿಸ್ನೆಸ್ ಮಾಡುವುದು ಹೇಗೆ ಇದಕ್ಕೆ ನಾವು ಬಂಡವಾಳ ಹೂಡಿಕೆ ಎಷ್ಟು ಮಾಡಬೇಕು ಹಾಗೂ ಇದರಿಂದ ನಮಗೆ ಸಿಗುವ ಲಾಭ ಎಷ್ಟು ಅನ್ನೋದನ್ನು ವಿವರವಾಗಿ ತಿಳಿದುಕೊಳ್ಳೋಣ.
ಈ ಪೇಂಟ್ ಬಿಸ್ನೆಸನ್ನು ನಾವು ಎರಡು ರೀತಿಯಲ್ಲಿ ಮಾಡಬಹುದು ಮೊದಲಿಗೆ ಏಜೆನ್ಸಿಯ ಡೀಲರ್ಶಿಪ್ ತೆಗೆದುಕೊಂಡು ಈ ಮೂಲಕ ಪೇಂಟ್ ಬಿಸ್ನೆಸ್ ಅನ್ನು ಮಾಡಬಹುದು ಅಥವಾ ಇನ್ನೊಂದು ರೀತಿಯಲ್ಲಿ ಹೇಗೆ ಈ ಪೇಂಟ್ ಬಿಸ್ನೆಸ್ ಮಾಡುವುದು ಅಂತ ನೋಡುವುದಾದರೆ ಹೋಲ್ಸೇಲ್ ಅವರಿಂದ ಪ್ರಾಡಕ್ಟ್ ಅನ್ನು ಕೊಂಡುಕೊಂಡು ಅದನ್ನು ಸ್ಟಾಕ್ ಮಾಡಿಕೊಂಡು ಕೂಡಾ ಈ ಬಿಸ್ನೆಸ್ ಅನ್ನು ಆರಂಭಿಸಬಹುದು. ಹೋಲ್ ಸೆಲರ್ ಗಳಿಂದ ಪ್ರಾಡಕ್ಟ್ ಖರೀದಿಸಿಕೊಂಡರೆ ಎರಡರಿಂದ ಐದು ಪರ್ಸೆಂಟ್ ಫ್ರಾಫಿಟ್ ಮಾರ್ಜಿನ್ ಕಡಿಮೆ ಸಿಗುವುದು. ಹೋಲ್ ಸೆಲರ್ ಗಳು ಕೂಡಾ ಫ್ರಾಫಿಟ್ ಮಾರ್ಜಿನ್ ಕಡಿಮೆ ಇಟ್ಟುಕೊಂಡೇ ಮಾರಾಟ ಮಾಡುತ್ತಾರೆ. ಹಾಗಾಗಿ ನಿಮಗೂ ಕೂಡ ಪ್ರಾಫಿಟ್ ಮಾರ್ಜಿನ್ ಕಡಿಮೆಯಾಗಬಹುದೂ. ಹಾಗಾಗಿ ಏಜೆನ್ಸಿ ಅಥವಾ ಡೀಲರ್ ಶಿಪ್ ತೆಗೆದುಕೊಂಡು ಬಿಸ್ನೆಸ್ ಮಾಡುವುದು ಬಹಳ ಒಳ್ಳೆಯದು. ಇಲ್ಲಿ ನಾವು ಪೇಂಟ್ ಡೀಲರ್ ಶಿಪ್ ತೆಗೆದುಕೊಳ್ಳುವುದು ಹೇಗೆ? ಇನ್ವೆಸ್ಟ್ಮೆಂಟ್ ಎಷ್ಟು ಇರುವುದು ಎನ್ನುವುದನ್ನು ತಿಳಿದುಕೊಳ್ಳೋಣ.
ಮೊದಲಿಗೆ ಭಾರತದ ಪ್ರಮುಖ ಪ್ರಸಿದ್ಧ ಪೇಂಟ್ ಕಂಪನಿಗಳು ಯಾವುದು ಎನ್ನುವುದನ್ನು ನೋಡುವುದಾದರೆ, ಏಷಿಯನ್ ಪೇಂಟ್ಸ್, ಬರ್ಗರ್ ಪೇಂಟ್, ನೆರಾಲಾಕ್ ಹೀಗೆ ಇನ್ನಿತರ ಕಂಪನಿಗಳು ಇವೆ. ಇವುಗಳ ಜೊತೆಗೆ ಡೀಲರ್ ಶಿಪ್ ಮಾಡಿಕೊಂಡು ಉತ್ತಮ ಲಾಭ ಗಳಿಸಬಹುದು. ಈ ಎಲ್ಲಾ ಕಂಪನಿಗಳು ಈಗಾಗಲೇ ಬಹಳಷ್ಟು ಬೆಳೆದು ಎಲ್ಲರಿಗೂ ಇವುಗಳ ಕುರಿತು ತಿಳಿದೇ ಇರುವುದರಿಂದ ಬಹಳ ಬೇಗ ಜನರನ್ನು ತಲುಪಬಹುದು ಹಾಗೂ ಇದಕ್ಕೆ ಎಂದೇ ಬೇರೆ ಮಾರ್ಕೆಂಟಿಂಗ್ ಮಾಡುವ ಅವಶ್ಯಕತೆ ಇಲ್ಲ. ಜನರು ಬಹಳ ಬೇಗ ಇಂತಹ ಪೇಂಟ್ ಗಳನ್ನು ಕೊಂಡುಕೊಳ್ಳುತ್ತಾರೆ ಹಾಗೇ ಬಹಳ ಸುಲಭವಾಗಿ ಮಾರಾಟ ಕೂಡಾ ಆಗುವುದು.
ಇನ್ನು ಈ ಪೇಂಟ್ ಬಿಸ್ನೆಸ್ ಮಾಡಲು ನಾವು ಎಷ್ಟು ಇನ್ವೆಸ್ಟ್ಮೆಂಟ್ ಮಾಡಬಹುದು ಅಂತಾ ನೋಡುವುದಾದರೆ ಮೊದಲಿಗೆ ಒಂದು ಶಾಪ್ ಬೇಕಾಗಿರುತ್ತದೆ. ಈ ಶಾಪ್ ಅನ್ನು ಹೆಚ್ಚು ಜನರು ಓಡಾಡುವ ಪ್ರದೇಶದಲ್ಲಿ ಇಡುವುದು ಒಳ್ಳೆಯದು. ಪರ್ನಿಚರ್ ಜೋಡಿಸಿ ಶಾಪ್ ಸೆಟ್ ಮಾಡಿಕೊಳ್ಳಬೇಕು. ನಂತರ ಪೇಂಟ್ ಗಳನ್ನು ತಂದು ಸ್ಟಾಕ್ ಮಾಡಿಕೊಳ್ಳುವುದರ ಸಲುವಾಗಿ ಏಜೆನ್ಸಿಗೆ ಎರಡರಿಂದ ಮೂರು ಲಕ್ಷ ರೂಪಾಯಿ ಬೇಕಾಗುತ್ತದೆ. ಆಗ ಅವರು ನಿಮಗೆ ಹಲವಾರು ಸ್ಟಾಕ್ಗಳು ಹಾಗೂ ಅವುಗಳ ಜೊತೆಗೆ ಮಾರ್ಕೆಟಿಂಗ್ ಪಂಪ್ಲೆಟ್ಸ್ ಹಾಗೂ ಟೂಲ್ಸ್ ಗಳನ್ನು ಸಹ ನೀಡುತ್ತಾರೆ. ನಂತರ ಪೇಂಟ್ ಮಷೀನ್ ಬೇಕಾಗುತ್ತದೆ ಇದರ ಬೆಲೆ ಅರವತ್ತು ಸಾವಿರದಿಂದ ಆರಂಭವಾಗಿ ಒಂದುವರೆ ಲಕ್ಷದವರೆಗೂ ಇರುವುದು.
ಪೇಂಟ್ ಏಜೆನ್ಸಿ ತೆಗೆದುಕೊಳ್ಳಲು ಯಾವೆಲ್ಲ ಡಾಕ್ಯುಮೆಂಟ್ಗಳು ಬೇಕು ಅಂತ ನೋಡುವುದಾದರೆ , ಮೊದಲಿಗೆ ಶಾಪ್ ಅಥವಾ ಏಜೆನ್ಸಿಯ ರಿಜಿಸ್ಟ್ರೇಷನ್ ಮಾಡಿಸಿರಬೇಕು. ಎರಡನೆಯದಾಗಿ ಜಿಎಸ್ಟಿ ಮೂರನೆಯದಾಗಿ ನಿಮ್ಮ ಶಾಪ್ ಹೆಸರಿನಲ್ಲಿ ಯಾವುದೇ ಒಂದು ಬ್ಯಾಂಕ್ ನಲ್ಲಿ ಕರೆಂಟ್ ಅಕೌಂಟ್ ಓಪನ್ ಮಾಡಿರಬೇಕು. ಹಾಗೆ ನೀವು ಡೀಲರ್ಶಿಪ್ ಹೊಂದಿರುವ ಕಂಪನಿಗಳಿಗೆ ಐದು ಬ್ಲಾಂಕ್ ಚೆಕ್ ನೀಡಬೇಕಾಗಿರುತ್ತದೆ. ಪ್ರತಿ ಏಜೆನ್ಸಿಗೆ ಒಬ್ಬ ಮಾರ್ಕೆಟಿಂಗ್ ಹೆಡ್ ಇರುತ್ತಾರೆ ಅವರನ್ನು ಭೇಟಿಯಾದರೆ ಅಥವಾ ಕಾಂಟಾಕ್ಟ್ ಮಾಡಿದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅವರಿಗೆ ನೀವು ಎಲ್ಲಾ ಡಾಕ್ಯುಮೆಂಟ್ ಗಳನ್ನು ಸಲ್ಲಿಸಿದರೆ ಅವರು ಹತ್ತು ದಿನದ ಒಳಗಾಗಿ ನಿಮಗೆ ಏಜೆನ್ಸಿಯನ್ನು ನೀಡುತ್ತಾರೆ.
ಇನ್ನು ಈ ಬಿಸ್ನೆಸ್ಸ್ನ ಪ್ರಾಫಿಟ್ ಬಗ್ಗೆ ನೋಡುವುದಾದರೆ ಪ್ರತಿಯೊಂದು ಕಂಪನಿಗೂ ಕೂಡ ಬೇರೆ ರೀತಿಯ ಪ್ರಾಫಿಟ್ ಮಾರ್ಜಿನ್ ಗಳು ಇರುತ್ತವೆ. ಕೆಲವು ಪ್ರಾಡಕ್ಟ್ ಗಳಲ್ಲಿ ಎರಡು ಮೂರು ಅಥವಾ ಐದು ಪರ್ಸೆಂಟ್ ವರೆಗೂ ಹಾಗೂ ಇನ್ನು ಕೆಲವು ಪ್ರಾಡಕ್ಟ್ ಗಳಲ್ಲಿ ಹತ್ತರಿಂದ ಇಪ್ಪತ್ತು ಪರ್ಸೆಂಟ್ ವರೆಗೂ ಕೂಡಾ ಪ್ರಾಫಿಟ್ ಸಿಗುತ್ತದೆ. ಇವರಿಗಾಗಿ ನೋಡುವುದಾದರೆ ಎಂಟರಿಂದ ಇಪ್ಪತ್ತೈದು ಪರ್ಸೆಂಟ್ ವರೆಗೂ ಪ್ರಾಫಿಟ್ ಸಿಗುತ್ತದೆ. ಆದರೂ ನಿಮ್ಮ ಲಾಭ ನೀವು ತೆಗೆದುಕೊಳ್ಳುವ ಕಂಪನಿ ಹಾಗೂ ಪ್ರಾಡಕ್ಟ್ ಗಳ ಮೇಲೆ ಅವಲಂಬಿತವಾಗಿರುತ್ತವೆ.