ಕೂದಲು ಉದ್ದವಾಗುವ, ಶೈನ್ ಆಗುವ ಕೇರಳದ ಕೆಮಿಕಲ್ ರಹಿತ ಥಾಲಿಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಕೇರಳದಲ್ಲಿ ಥಾಲಿ ಬಹಳ ಫೇಮಸ್ ಆಗಿದೆ. ಇದೊಂದು ಶಾಂಪೂ ಆಗಿದ್ದು ಇದನ್ನು ಬಳಸುವುದರಿಂದ ಕೂದಲು ಉದ್ದವಾಗುತ್ತದೆ. ಇದನ್ನು ಚಿಕ್ಕಮಕ್ಕಳಿಗೂ ಬಳಸಬಹುದು ಯಾವುದೇ ಅಡ್ಡ ಪರಿಣಾಮವಿಲ್ಲ. 2 ಸ್ಪೂನ್ ಮೆಂತೆಯನ್ನು ನೆನೆಸಿಡಬೇಕು ರಾತ್ರಿ ನೆನೆಯಬೇಕು. ಮೆಂತೆ ಆಗದೆ ಇರುವವರು ಹಾಕದೇ ಇರಬಹುದು ಆದರೆ ಮೆಂತೆ ಹಾಕುವುದು ಒಳ್ಳೆಯದು. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ನೆನೆಸಿದ ನೀರನ್ನು ಹಾಕಿ ರುಬ್ಬಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಂತರ 10-15 ದಾಸವಾಳ ಹೂವು ಬೇರೆ ಬಣ್ಣದ ದಾಸವಾಳ ಹಾಕಬಹುದು ಕೆಂಪು ದಾಸವಾಳ ಹೂವು ಒಳ್ಳೆಯದು ಇದರೊಂದಿಗೆ ಸ್ವಲ್ಪ ತುಳಸಿ ಎಲೆ, ಕಹಿಬೇವಿನ ಸೊಪ್ಪು, ಕರಿ ಬೇವಿನ ಸೊಪ್ಪು ಇದು ಬಹಳ ಮುಖ್ಯವಾಗಿದೆ, ಭೃಂಗರಾಜ, ಒಂದೆಲಗ ಅಥವಾ ಬ್ರಾಹ್ಮಿ, ದಾಸವಾಳ ಸೊಪ್ಪು ಹೆಚ್ಚು ಬಳಸಿದಷ್ಟು ಉತ್ತಮ ಹಾಗೂ ಅಲೋವೆರಾ ಲೋಳೆ ಇವುಗಳಿಗೆ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡಾಗ ಪೇಸ್ಟ್ ಸಿಗುತ್ತದೆ.
ಈ ಪೇಸ್ಟನ್ನು ಬಟ್ಟೆಯ ಸಹಾಯದಿಂದ ಗಾಳಿಸಿಕೊಳ್ಳಬೇಕು. ನಂತರ ಇದಕ್ಕೆ ಮೆಂತೆ ಪೇಸ್ಟನ್ನು ಸೇರಿಸಿ ಮಿಕ್ಸ್ ಮಾಡಿದರೆ ಶುದ್ಧವಾದ ಥಾಲಿ ಅಥವಾ ಶಾಂಪೂ ಸಿದ್ಧವಾಗುತ್ತದೆ ಇದನ್ನು ತಲೆಗೆ ಹಚ್ಚಿ ಅರ್ಧ ತಾಸು ಬಿಟ್ಟು ಕೇವಲ ನೀರಿನಿಂದ ವಾಷ್ ಮಾಡಿಕೊಳ್ಳಬೇಕು ಇದರಿಂದ ಕೂದಲು ಉದ್ದವಾಗುವುದರ ಜೊತೆಗೆ ಶೈನ್ ಆಗುತ್ತದೆ ಮತ್ತು ಕಪ್ಪಾಗುತ್ತದೆ. ಜಾಸ್ತಿ ಎಣ್ಣೆ ಹಾಕಿದರೆ ಥಾಲಿಯಿಂದ ಎಣ್ಣೆ ಅಂಶ ಹೋಗುವುದಿಲ್ಲ ಆದ್ದರಿಂದ ಕಡಿಮೆ ಎಣ್ಣೆ ಹಾಕಿಕೊಳ್ಳಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.