ಅಶ್ವಗಂಧ ಸಸ್ಯವು ಹಿರಿಯರಿಂದ ಹಿರೆ ಮದ್ಧು ಎಂದು ಕರೆಯಲ್ಪಡುವ ಒಂದು ಔಷದಿಯ ಸಸ್ಯವಾಗಿದೆ, ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿನವರ ಪುಷ್ಟಿ ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನರದೌರ್ಬಲ್ಯದ ಸಮಸ್ಯೆಯನ್ನು ಹೋಗಲಾಡಿಸಲು ಅಲ್ಲದೇ ಸಂತಾನೋತ್ಪತ್ತಿಗೆ ಔಷದಿಯಾಗಿಯೂ ಕೂಡಾ ಬಳಕೆಯಲ್ಲಿರುವಂತಹದ್ದು. ಮೊದಲು ಈ ಅಶ್ವ ಗಂಧದ ಗಿಡವು ಸಾಮಾನ್ಯವಾಗಿ ಪೊದೆಗಳ ರೂಪದಲ್ಲಿ ಬೆಳೆಯುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಈ ಅಶ್ವಗಂಧದ ಬೆಳೆಯನ್ನೇ ಬೆಳೆಯಲಾಗುತ್ತಿದೆ. ಹಲವಾರು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಈ ಅಶ್ವ ಗಂಧದ ಬೇರನ್ನು ಬಳಸಿಕೊಂಡು ಚೂರ್ಣವನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ
ಮೊದಲಿಗೆ ಅಶ್ವ ಗಂಧದ ಗಿಡವನ್ನು ಬೇರಿನ ಸಮೇತವಾಗಿ ಕಿತ್ತುಕೊಳ್ಳಬೇಕು ನಂತರ ಆ ಗಿಡದ ಮೇಲ್ಭಾಗವನ್ನು ಅಂದರೆ ಕವಲುಗಳನ್ನು ಮುರಿದುಹಾಕಬೇಕು ನಂತರ ಉಳಿದ ಅಶ್ವಗಂಧದ ಬೇರನ್ನು ನೀರಿನಿಂದ ಸ್ವಚ್ಚಗೊಳಿಸಬೇಕು, ಹೀಗೆ ಸ್ವಚ್ಚ ಮಾಡಿಕೊಂಡ ಅದರ ಬೇರುಗಳನ್ನು ಒಂದರಿಂದ ಒಂದೂವರೆ ಇಂಚುಗಳಂತೆ ಚಿಕ್ಕ ಚಿಕ್ಕ ತುಂಡುಗಳಾಗಿ ಅದನ್ನು ಕತ್ತರಿಸಿಕೊಳ್ಳಬೇಕು ನಂತರ ಆ ಕತ್ತರಿಸಿಕೊಂಡ ಬೇರುಗಳ ತುಂಡುಗಳನ್ನು ನಾಟಿ ಹಸುವಿನ ಹಾಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಹೀಗೆ ಹಸುವಿನ ಹಾಲಿನಲ್ಲಿ ಬೇರುಗಳನ್ನು ಬೇಯಿಸುವುದರಿಂದಲೇ ಅವುಗಳು ಶುದ್ಧವಾಗಲು ಸಾಧ್ಯವಾದೀತು ಹಾಗಾಗಿ ಅಶ್ವ ಗಂಧದ ಬೇರುಗಳನ್ನು ಏರಡರಿಂದ ಮೂರು ಬಾರಿಯಾದರೂ ಸಹ ನಾಟಿ ಹಸುವಿನ ಹಾಲಿನಲ್ಲಿ ಬೇಯಿಸಲೇಬೇಕು, ಬೇಯಿಸಿದ ಹಾಲನ್ನು ಯಾವುದೇ ಪ್ರಾಣಿ ಪಕ್ಷಿಗಳಿಗೆ ಸಿಗದಂತೆ ಚೆಲ್ಲಬೇಕು ಆನಂತರ ಬೇಯಿಸಿದ ಬೇರಿನ ತುಂಡುಗಳನ್ನು ನೆರಳಿನಲ್ಲಿ ಸಂಪೂರ್ಣವಾಗಿ ಒಣಗುವಂತೆ ನೋಡಿಕೊಳ್ಳಬೇಕು. ನಂತರ ಅವುಗಳು ಸಂಪೂರ್ಣವಾಗಿ ಒಣಗಿದ ನಂತರ ಅವುಗಳನ್ನು ತೆಗೆದು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ನಂತರ ಪುಡಿ ಮಾಡಿಕೊಂಡ ಅಶ್ವ ಗಂಧದ ಬೇರುಗಳ ಪುಡಿಯನ್ನು ಬಟ್ಟೆಯ ಮೂಲಕ ಸೋಸಿಕೊಳ್ಳಬೇಕು ಆ ನಂತರದಲ್ಲಿ ಬರುವುದೇ ಶುದ್ಧ ಅಶ್ವಗಂಧದ ಚೂರ್ಣವಾಗಿರುತ್ತದೆ.
ಈ ರೀತಿ ಮಾಡಿಕೊಂಡ ಚೂರ್ಣವನ್ನು ಪ್ರತಿನಿತ್ಯ ಊಟಕ್ಕೆ ಅರ್ಧ ಗಂಟೆಯ ಮೊದಲು ಹಾಲಿನೊಂದಿಗೆ ಬೆರೆಸಿ ಅದಕ್ಕೆ ಕೆಂಪು ಕಲ್ಲುಸಕ್ಕರೆಯನ್ನು ಸೇರಿಸಿ ನಿಯಮಿತವಾಗಿ ಕುಡಿಯುತ್ತಾ ಬರುವುದು ಮಾನವನ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳಿತು. ಒಂದು ವೇಳೆ ಈ ಅಶ್ವಗಂಧ ಚೂರ್ಣವನ್ನು ನಿಮಗೆ ತಯಾರಿಸಿಕೊಳ್ಳಲು ಆಗದೆ ಇದ್ರೆ ನಿಮ್ಮ ಹತ್ತಿರದ ಆಯುರ್ವೇದಿಕ್ ಹಾಗೂ ಗ್ರಂಧಿಗೆ ಅಂಗಡಿಗಳಲ್ಲಿ ಈ ಅಶ್ವಗಂಧದ ಚೂರ್ಣ ರೆಡಿಯಾಗಿ ಸಿಗುವದು.