560 ಹುದ್ದೆಗಳು ಖಾಲಿ ಇರುವಂತಹ ಕ್ಲರ್ಕ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲಾ ಮಾಹಿತಿಗಳು ಬೇಕು ವಿದ್ಯಾರ್ಹತೆ ಏನು? ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೊದಲಿಗೆ ಈ ಕ್ಲರ್ಕ್ ಹುದ್ದೆಗೆ ನೀಡಲಾಗುವ ವೇತನವನ್ನು ನೋಡುವುದಾದರೆ ಪ್ರತೀ ತಿಂಗಳು 29,000 ದಿಂದ 39,992 ರೂಪಾಯಿಯವರೆಗೆ ವೇತನವನ್ನು ನೀಡಲಾಗುವುದು. ಇನ್ನು ಅರ್ಜಿ ಸಲ್ಲಿಸುವವರ ವಯೋಮಿತಿ ನೋಡುವುದಾದರೆ ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ 20 ರಿಂದ 28 ವರ್ಷ ವಯೋಮಿತಯ ಒಳಗಿನ ಅಭ್ಯರ್ಥಿಗಳು ಈ ಕ್ಲರ್ಕ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಒಬಿಸಿ 2 ಏ 2 ಬಿ 3 ಏ ಹಾಗೂ 4 ಬಿ ಅಭ್ಯರ್ಥಿಗಳಿಗೆ 3 ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳು ಇದ್ದರೆ ಹತ್ತು ವರ್ಷ ಯವೋಮಿತಿಯಲ್ಲಿ ವಿನಾಯತಿಯನ್ನು ನೀಡಲಾಗಿದೆ.
ಇನ್ನು ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಅರ್ಜಿ ಶುಲ್ಕ ಕೂಡಾ ಬೇರೆ ಬೇರೆ ರೀತಿಯಲ್ಲಿದ್ದು ಈ ರೀತಿಯಾಗಿವೆ. ಅರ್ಜಿ ಶುಲ್ಕವು ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 850 ರೂಪಾಯಿ ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಆದರೆ 175 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ತಿಳಿಸಲಾಗಿದೆ. ನೇಮಕಾತಿ ವಿಧಾನವು ಪ್ರಾಥಮಿಕ ಪರೀಕ್ಷೆ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಇನ್ನು ಇದಕ್ಕೆ ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು ಈ ರೀತಿಯಾಗಿರುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 02,09,2020 ರಿಂದ ಅರ್ಜಿ ಸಲ್ಲಿಸಲು ಆರಂಭ ಆಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23,09,2020 ಆಗಿರುತ್ತದೆ. ಹಾಗೆ ಅಪ್ಲಿಕೇಶನ್ ತಿದ್ದುಪಡಿ ಮಾಡಲು ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು, ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಈ ಎಲ್ಲದಕ್ಕೂ ಕೊನೆಯ ದಿನಾಂಕ 23,09,2020 ಆಗಿರುತ್ತದೆ.
ಇದಕ್ಕೆ ಬೇಕಾದ ವಿದ್ಯಾರ್ಹತೆ. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವ ವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ವಿದ್ಯಾರ್ಹತೆ ಅಥವಾ ಕೇಂದ್ರ ಸರ್ಕಾರದಿಂದ ಅಂಗೀಕೃತ ಆಗಿರುವ ಸಂಸ್ಥೆ ಅಥವಾ ಕಾಲೇಜುಗಳಲ್ಲಿ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಹಾಗೂ ಇವುಗಳ ಜೊತೆಗೆ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಮತ್ತು ಆಪರೇಟ್ ಮಾಡುವ ಬಗ್ಗೆ ಕೂಡಾ ತಿಳಿದಿರಬೇಕು.
ನೇಮಕಾತಿಯ ಇಲಾಖೆಯ ಹೆಸರು : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS ಹುದ್ದೆಯ ಹೆಸರು CRP ಕ್ಲರ್ಕ್ X ಭಾರತದ ಎಲ್ಲಾ ಕಡೆ ಉದ್ಯೋಗ ಇರುವ ಈ ಕ್ಲರ್ಕ್ ಹುದ್ದೆಗಳ ಒಟ್ಟು ಹುದ್ದೆಗಳ ಸಂಖ್ಯೆ 1558. ಇದು ಬ್ಯಾಂಕ್ ವಲಯಕ್ಕೆ ಸಂಬಂಧಿಸಿದ ಉದ್ಯೋಗ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗೆ ಭೇಟಿ ನೀಡಿ. https://www.ibps.in/