ಸಾಮಾನ್ಯವಾಗಿ ಶ್ರೀಮಂತ ಹುಡುಗರು ಬಡ ಹುಡುಗಿಯರನ್ನು, ಶ್ರೀಮಂತ ಹುಡುಗಿಯರು ಬಡ ಹುಡುಗರನ್ನು ಮದುವೆ ಆಗುವುದು ಸಿನಿಮಾಗಳಲ್ಲಿ ಕಾಣಬಹುದು ಹೊರತು ನಿಜ ಜೀವನದಲ್ಲಿ ಸಾಧ್ಯವಿಲ್ಲ. ಆದರೆ ಇಲ್ಲೊಂದು ಘಟನೆ ಕೇಳಿದರೆ ಆಶ್ಚರ್ಯವಾಗುತ್ತದೆ. ಅದೇನೆಂದರೆ ಇಂದೋರನ ಪತಾಂತೋಲಿಯಲ್ಲಿ ಶಾಯಿಸ್ತಾ ಎಂಬ ಬಡ ಹುಡುಗಿ ಗುಡಿಸಲಿನ ಮನೆಯಲ್ಲಿ ವಾಸವಾಗಿರುತ್ತಾಳೆ. ಎರಡು ಹೊತ್ತಿನ ಊಟಕ್ಕೂ ಕಷ್ಟವಿರುತ್ತದೆ ಅವಳ ತಾಯಿ ಶಾಯಿಸ್ತಾಳನ್ನು ಮನೆ ಕೆಲಸಕ್ಕೆ ಕಳುಹಿಸುತ್ತಾರೆ. ಆ ಮನೆಯ ಒಡತಿ ಶಾಯಿಸ್ತಾಳ ಗುಣ, ನಡತೆ, ಸಂಸ್ಕೃತಿಯನ್ನು ನೋಡಿ ನೂರಾರು ಕೋಟಿಯ ಒಡೆಯನಾದ ತನ್ನ ಏಕೈಕ ಮಗನಾದ ಆಸಿಫ್ ನಿಗೆ ಈಕೆಯೇ ಸರಿಯಾದ ಜೋಡಿ ಎಂದು ನಿರ್ಧರಿಸಿದಳು.
ಈ ವಿಷಯವನ್ನು ಶಾಯಿಸ್ತಾಳ ಮನೆಗೆ ತಿಳಿಸಿದಾಗ ಅವರು ಮೊದಲು ಭಯಗೊಳ್ಳುತ್ತಾರೆ ಏಕೆಂದರೆ ಶ್ರೀಮಂತರು ತಮ್ಮ ಮಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಅಥವಾ ತಮಾಷೆ ಮಾಡುತ್ತಿದ್ದಾರಾ ಎಂದು ಯೋಚಿಸುತ್ತಾರೆ ಆಗ ಆಸಿಫ್ ನ ತಾಯಿ ನಮಗೆ ಹಣ, ಆಸ್ತಿ ಮುಖ್ಯವಲ್ಲ ಗುಣ ನಡತೆ ಮುಖ್ಯ ಶಾಯಿಸ್ತಾ ನಮ್ಮ ಸೊಸೆಯಲ್ಲ ಮಗಳು ಎಂದಿಗೂ ಅವಳ ಕೈ ಬಿಡುವುದಿಲ್ಲ ಎಂದು ಧೈರ್ಯ ಹೇಳುತ್ತಾರೆ. ಇದರಿಂದ ಮದುವೆಗೆ ಖುಷಿಯಿಂದ ಒಪ್ಪಿಕೊಂಡರು. ಮದುಮಗ ಹುಡುಗಿಯ ಮನೆಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಊರಿನವರು ನೋಡಿ ಬೆಚ್ಚಿಬಿದ್ದರು. ಆಸಿಫ್ ಶಾಯಿಸ್ತಾಳನ್ನು ಮದುವೆಯಾಗಿ ಮನೆತುಂಬಿಸಿಕೊಂಡನು. ಯಾರ ಋಣ ಎಲ್ಲಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.