ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಮಾಡಿಸಲು ತಹಶಿಲ್ದಾರರ ಆಫೀಸ್ ಗೆ ಅಲೆದು ಅಲೆದು ಸಾಕಾಗುತ್ತದೆ. ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಮಾಡಿಸುವುದು ಅಷ್ಟು ಸುಲಭವಲ್ಲ. ಈಗ ಈ ಅಲೆದಾಟವನ್ಬು ತಪ್ಪಿಸಲು ನಾಡಕಚೇರಿ ಎಂಬ ವೆಬ್ ಸೈಟ್ ನಲ್ಲಿ ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳಿಗೆ ಅರ್ಜಿ ಹಾಕಬಹುದು. ಅದೆ ಹೇಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿ ಇಲ್ಲಿದೆ. ಗೂಗಲ್ ಅಥವಾ ಯಾವುದೆ ವೆಬ್ ಬ್ರೌಸರ್ ಓಪನ್ ಮಾಡಿಕೊಂಡು ಅಲ್ಲಿರುವ ಸರ್ಚ್ ಬಾಕ್ಸ್ ನಲ್ಲಿ ನಾಡ ಕಛೇರಿಯ ವೆಬ್ ಸೈಟ್ ಓಪನ್ ಮಾಡಬೇಕು. ಆ ವೆಬ್ ಸೈಟ್ ಹೀಗಿದೆ nadakacheri.Karnataka govt.in ನಂತರ ಸರ್ಚ್ ಕೊಡಬೇಕು. ಈಗ ಓಪನ್ ಆಗಿರುವ ಬಾಕ್ಸ್ ನಲ್ಲಿ ಮೊದಲಿಗೆ ಫೋನ್ ನಂಬರ್ ಹಾಕಿ ಅಲ್ಲಿಯೆ ಇದ್ದ ಗೆಟ್ ಓಟಿಪಿ ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು. ನಂತರ ಅಲ್ಲಿ ನಮೂದಿಸಿದ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ಹಾಕಿ ಲಾಗ್ ಇನ್ ಕೊಡಬೇಕು.
ಈಗ ಓಪನ್ ಆಗುವ ಪೇಜ್ ನಾಡ ಕಛೇರಿಯ ಆಫೀಶಿಯಲ್ ಪೇಜ್ ಅದರಲ್ಲಿ ನ್ಯೂ ರಿಕ್ವೆಸ್ಟ್ ಎಂದು ಬರೆದಿರುತ್ತದೆ. ಅದನ್ನು ಆಯ್ದುಕೊಂಡಾಗ ಅಲ್ಲಿ ಒಂದಷ್ಟು ಆಪ್ಶನ್ಸ್ ಬರುತ್ತದೆ. ಅದರಲ್ಲಿ ಕಾಸ್ಟ್ ಸರ್ಟಿಫಿಕೇಟ್ ಎಂದು ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತೆರೆದ ಪೇಜ್ ನಲ್ಲಿ ರೇಷನ್ ಕಾರ್ಡ್ ಹಾಗೂ ಆಧಾರ ಕಾರ್ಡ್ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಓಪನ್ ಆದ ಪೇಜ್ ನಲ್ಲಿ ಆಧಾರ ಸಂಖ್ಯೆ ನಮೂದಿಸಿ , ಜಿಲ್ಲೆಯ ಹೆಸರು ಆಯ್ಕೆ ಮಾಡಬೇಕು, ಹಾಗೆಯೆ ತಾಲ್ಲೂಕು ಯಾವುದು ಎಂದಯ ಆಯ್ದುಕೊಳ್ಳಬೇಕು. ಹಾಗೇಯೆ ಪ್ರದೇಶ ರೂರಲ್ ಅಥವಾ ಅರ್ಬನ್ ಯಾವುದೆಂದು ಆಯ್ದುಕೊಳ್ಳಬೇಕು. ವಾರ್ಡ್ ನಂಬರ್ ಅನ್ನು ಸರಿಯಾಗಿ ನಮೂದಿಸಬೇಕು. ಭಾಷೆ ಕನ್ನಡ ಬೇಕೋ ಇಲ್ಲ ಇಂಗ್ಲಿಷ್ ಬೇಕೋ ಆಯ್ಕೆ ಮಾಡಿಕೊಳ್ಳಬೇಕು. ಯಾರು ಅರ್ಜಿಯನ್ನು ಹಾಕುತ್ತಿದ್ದಾರೆ ಅವರ ಹೆಸರನ್ನು ಆಧಾರ ಕಾರ್ಡ್ ನಲ್ಲಿ ಹೇಗೆ ಇದೆಯೋ ಹಾಗೆ ಇಲ್ಲಿ ನಮೂದಿಸಬೇಕು. ಅರ್ಜಿದಾರರ ತಂದೆಯ ಹೆಸರನ್ನು ನಮೂದಿಸಬೇಕು. ಇಷ್ಟಾದ ಮೇಲೆ ಜಾತಿ ಯಾವ ವರ್ಗದಲ್ಲಿ ಬರುತ್ತದೆ ಎಂದು ಹಾಕಬೇಕು. ನಂತರ ಕೆಳಗೆಬಂದು ಪ್ರಿಂಟ್ ಕನ್ಸೆಂಟ್ ಎಂದು ಕಾಣಿಸುತ್ತದೆ ಅದರ ಮೇಲೆ ಅಯ್ಕೆ ಮಾಡಿದಾಗ ಒಂದು ಪ್ರಿಂಟ್ ಪೇಜ್ ಕಾಣಿಸುತ್ತದೆ. ಅದನ್ನು ಗ್ರಾಹಕರಿಗೆ ತೆಗೆದು ಕೊಡಬಹುದು.
ನಂತರ ಅಲ್ಲಿರುವ ಸರ್ಚ್ ಬಟನ್ ಆಯ್ದುಕೊಂಡಾಗ ಮೇಲೆ couldn’t find any signed certificate ಎಂದು ಬರುತ್ತದೆ. ಈ ರೀತಿ ಬಂದಾಗ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಲು ಸಾಧ್ಯ. ಓಕೆ ಒತ್ತಿದ ಮೇಲೆ ಹೊಸದೊಂದು ಪಾರ್ಮೆಟ್ ಓಪನ್ ಆಗುತ್ತದೆ. ಇಲ್ಲಿ ಮೊದಲನೆಯದಾಗಿ ಕುಮಾರಿಯೋ ಕುಮಾರನೋ ಎಂದು ನಮೂದಿಸಬೇಕು. ನಂತರ ತಂದೆ ಹಾಗೂ ತಾಯಿಯ ಹೆಸರು ನಮೂದಿಸಬೇಕು. ನಂತರ ಪರ್ಪೊಸ್ ಅನ್ನು others ಎಂದು ಆಯ್ಕೆ ಮಾಡಿಕೊಳ್ಳಬೇಕು. ಫೋನ್ ನಂಬರ್ ಎಲ್ಲವೂ ತನ್ನಿಂದ ತಾನೇ ಬರುತ್ತದೆ. ನಂತರ ನಮ್ಮ ತಾಲೂಕಿನ ಪಿನ್ ಕೋಡ್ ಹಾಕಬೇಕು. ಪರ್ಪೋಸ್ ಕೇಳಿದಾಗ ಯಾವುದಕ್ಕೆ ಪ್ರಮಾಣ ಪತ್ರ ಬೇಕಿರುವುದು ಎಜುಕೇಶನ್, ಎಂಪ್ಲಾಯ್ಮೆಂಟ್ ಯಾವುದು ಎಂದು ಆಯ್ದುಕೊಳ್ಳಬೇಕು. ನಂತರ ಜಾತಿ ಯಾವುದು ಎಂದು ನಮೂದಿಸಿದ ನಂತರ ಯಾವ ಇಲಾಖೆ ಎಂದು ನಮೂದಿಸಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ರೆವಿನ್ಯೂ ಇಲಾಖೆಯಲ್ಲಿ ಬರುತ್ತದೆ. ದೇಟ್ ಆಫ್ ಬರ್ತ್, ವರ್ಷದ ಆದಾಯ ಎಷ್ಟು ಎಂದು ಹಾಕಬೇಕು. ನಂತರ ಕೆಲವೊಂದು ಡಾಕ್ಯುಮೆಂಟ್ ಅಟ್ಯಾಚ್ ಮಾಡಬೇಕು ಅಲ್ಲಿ choose file ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಮ್ಮ ಕಂಪ್ಯೂಟರ್ ನಲ್ಲಿ ಸೇವ್ ಇರುವ ಡಾಕ್ಯುಮೆಂಟ್ ಫಾರ್ಮ್ಯಾಟ್ ಅನ್ನು ಆಯ್ದುಕೊಳ್ಳಬೇಕು. ಪೈಲ್ ಗಳು ಪಿಡಿಎಪ್ ರೂಪದಲ್ಲಿ ಇರಬೇಕು. ವಿಳಾಸ ಖಾತರಿಗೆ ವೋಟರ್ ಐಡಿ, ಶಾಲಾ ಪ್ರಮಾಣ ಪತ್ರಕ್ಕೆ ಟಿಸಿ, ಐಡಿ ಖಾತರಿಗೆ ಆಧಾರ ಕಾರ್ಡ್ ಹಾಕಿ ಅಪ್ಲೋಡ್ ಎಂಬ ಆಯ್ಕೆ ಆಯ್ದುಕೊಂಡಾಗ ಅಲ್ಲಿ ಅಪ್ಲೋಡೆಡ್ ಎಂದು ಬರಬೇಕು. ನಂತರ ಸೇವ್ ಅನ್ನು ಕ್ಲಿಕ್ ಮಾಡಬೇಕು. ಕೆಳಗೆ ಫೈಲ್ ಅಪ್ಲೋಡ್ ಅಂತ ಕಾಣಿಸಿದರೆ ಹಾಕಿದ ಫೈಲ್ ಗಳು ಸರಿಯಾಗಿ ಸೇವ್ ಆಗಿದೆ ಎಂದು ಅರ್ಥ. ಕೆಳಗೆ ಒಂದು ಕಾಪ್ಚರ್ ಸಂಖ್ಯೆ ಬಂದಿರುತ್ತದೆ ಅಲ್ಲಿ ಸಂಖ್ಯೆ ಹೇಗಿದೆಯೋ ಹಾಗೆಯೆ ನಮೂದಿಸಬೇಕು.
ನಂತರ ಸೇವ್ ಒತ್ತಿ. ನಂತರ ಅಲ್ಲಿ ಕಾಣಿಸುವ ಐಡಿ ನಂಬರ್ ಅನ್ನು ಬೇರೆ ಎಲ್ಲಾದರೂ ಬರೆದಿಟ್ಟುಕೊಳ್ಳಬೇಕು. ನಂತರದಲ್ಲಿ ಇ-ಸೈನ್ ಮಾಡಬೇಕು. ಅದನ್ನು ಅಯ್ದುಕೊಂಡಾಗ ಒಂದು ಫಾರ್ಮೆಟ್ ಬರುತ್ತದೆ ಅದನ್ನು ತುಂಬುವ ರೀತಿ ಹೀಗಿದೆ. ಅಲ್ಲಿ ಆಧಾರ್ ಕಾರ್ಡ್ ಇ-ಅಥೆಂಟಿಕೇಶನ್ ಎಂದು ಇರುತ್ತದೆ ಅಲ್ಲಿ ಆಧಾರ್ ನಂಬರ್ ಬರೆದು ಗೆಟ್ ಓಟಿಪಿ ಆಯ್ದುಕೊಳ್ಳಬೇಕು. ಆಗ ಓಟಿಪಿ ಬರುತ್ತದೆ ನಂತರ ಸಬ್ಮಿಟ್ ಅಯ್ದುಕೊಳ್ಳಬೇಕು. ನಂತರ ಡೌನ್ಲೋಡ್ ದಿ ಇ-ಅಥೆಂಟಿಕೇಶನ್ ಅಪ್ಲಿಕೇಶನ್ ಎಂದು ಬರುತ್ತದೆ. ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಪೇ ಎಂಬ ಆಯ್ಕೆ ಬಂದಾಗ ವಾಲೆಟ್ ಹಾಗೂ ನೆಟ್ ಬ್ಯಾಂಕ್ ಎರಡು ಇರುತ್ತದೆ ಯಾವುದಾದರೂ ಒಂದು ಆಯ್ದುಕೊಳ್ಳಬೇಕು. ಯಾವುದರಿಂದಲೂ ಪೇಯ್ಮೆಂಟ್ ಮಾಡಬಹುದು. ಟ್ರಾನ್ಸಾಕ್ಸನ್ ಸಕ್ಸಸ್ ಎಂದು ಬರುತ್ತದೆ. ನಂತರ ಅಲ್ಲಿ ಪ್ರಿಂಟ್ ಎಂದು ಬರುತ್ತದೆ ಅದನ್ನು ಪ್ರಿಂಟ್ ತೆಗೆದು ಗ್ರಾಹಕರಿಗೆ ಕೊಡಬಹುದು.