ನಮ್ಮ ಶಿಕ್ಷಣ ಇಲಾಖೆಯು ಶಾಲಾ- ಕಾಲೇಜುಗಳ ಪ್ರಾರಂಭ ಮಾಡುವ ಕುರಿತು ಒಂದು ಮಹತ್ವದ ಆದೇಶ ಹೊರಡಿಸಿದೆ. ಕೋವಿಡ್-19 ಮುಚ್ಚಲಾಗಿರುವ ಶಾಲಾ ಕಾಲೇಜುಗಳನ್ನು ಈ ಸೆಪ್ಟೆಂಬರ್ ಕೊನೆಯವರೆಗೂ ಪ್ರಾರಂಭಿಸುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ತಿಳಿಸಿದೆ.
ಮೊದಲು ಕೋವಿಡ್ – 19 ಹರಡಿರುವ ಆತಂಕದ ನಡುವೆಯು ಶಾಲಾ ಕಾಲೇಜುಗಳನ್ನು ಸೆಪ್ಟೆಂಬರ್ 21 ರಿಂದ ಆರಂಭಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈಗ ದಿನದಿಂದ ದಿನಕ್ಕೆ ಕೋವಿಡ್ ಸೊಂಕಿನ ಹರಡುವಿಕೆಯ ಪ್ರಮಾಣ ಕ್ರಮೇಣ ಹೆಚ್ಚಳವನ್ನೆ ಕಾಣುತ್ತಿದ್ದು, ಈ ಕಾರಣದಿಂದ ಶಾಲಾ ಕಾಲೇಜುಗಳು ಸೆಪ್ಟೆಂಬರ್ ಅಂತ್ಯದ ವರೆಗೂ ಆರಂಭವಾಗುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹೇಳಿದ್ದಾರೆ.
ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳು ಪ್ರಾರಂಭವಾಗುವುದಾ ಎಂಬ ಪ್ರಶ್ನೆ ಕಾಡುತ್ತಿದ್ದು, ಎಲ್ಲಾ ಗೊಂದಲಗಳಿಗೂ ಇಲಾಖೆ ತೆರೆ ಎಳೆದಿದೆ. ಅಲ್ಲದೇ ಶಾಲಾ ಕಾಲೇಜುಗಳಿಗೆ ಭೇಟಿ ನೀಡದಂತೆ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ 21 ರಿಂದ ದೇಶದ ಎಲ್ಲೆಡೆಗಳಲ್ಲೂ ಒಂಬತ್ತರಿಂದ ಹನ್ನೇರಡನೆ ತರಗತಿಯವರೆಗೆ ಶಾಲಾ ಕಾಲೇಜು ಆರಂಭಿಸಲು ಹೊಸದಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಅದರಂತೆ ರಾಜ್ಯ ಶಿಕ್ಷಣ ಇಲಾಖೆಯು ಸಹ ರಾಜ್ಯ ಸರ್ಕಾರದ ಆದೇಶದಂತೆ 9,10,11 ಮತ್ತು 12 ನೇ ತರಗತಿ ಪ್ರಾರಂಭಿಸಲು ಮುಂದಾಗಿತ್ತು. ಈಗ ಇಲಾಖೆಯು ತನ್ನ ನಿರ್ಧಾರವನ್ನು ಹಿಂಪಡೆದಿದೆ. ಕರೋನಾ ಸೊಂಕು ಹಾಗೂ ಸೊಂಕಿತ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಬಳಿ ಬರದಂತೆ ವಿಧ್ಯಾರ್ಥಿಗಳಿಗೆ ಸೂಚಿಸಿದೆ.