ಈಗಿನ ಆಧುನಿಕ ಯುಗದಲ್ಲಿ ಗ್ಯಾಸ್, ಗೀಸರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕಡಿಮೆ ಖರ್ಚು. ವಿದ್ಯುತ್ ಗ್ಯಾಸ್ ಗೀಸರ್ ಬಳಕೆ ಮಾಡುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ ಮತ್ತು ಸ್ನಾನ ಮಾಡುವಾಗ ವಿದ್ಯುತು ಇಲ್ಲ ಅಂದರೆ ಮತ್ತೆ ವಿದ್ಯುತ್ ಬರುವವರೆಗೂ ಹಾಗೂ, ವಿದ್ಯುತ್ ಬಂದು ನೀರು ಕಾಯುವವರೆಗೂ ಕಾಯಬೇಕಾಗುತ್ತದೆ. ಆದರೆ ಈ ಗ್ಯಾಸ್ ಗೀಸರ್ ಬಳಕೆ ಮಾಡುವುದರಿಂದ ಇದ್ಯಾವುದೂ ಇರುವುದಿಲ್ಲ ಕೊಳಾಯಿ ತಿರುಗಿಸಿದರೆ ಸಾಕು ಬಿಸಿ ನೀರು ಬರುತ್ತದೇ ಹಾಗೇ ಕಡಿಮೆ ಖರ್ಚು ಕೂಡಾ. ಒಂದು ಮನೆಯಲ್ಲಿ ಒಂದು ಗ್ಯಾಸ್ ಸಿಲೆಂಡರ್ ನಿಂದ ನಾಲ್ಕು ಜನ ನೀರು ಕಾಯಿಸಿಕೊಂಡು ಸ್ನಾನ ಮಾಡಬಹುದು. ಒಂದು ಗ್ಯಾಸ್ ಸಿಲೆಂಡರ್ ಕಡಿಮೆಯೆಂದರೂ ಎರಡರಿಂದ ಮೂರು ತಿಂಗಳು ಬರಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಗ್ಯಾಸ್ ಗೀಸರ್ ಕಡೆ ಒಲವು ತೋರುತ್ತಿದ್ದಾರೆ. ಆದರೆ ಇದನ್ನು ಸರಿಯಾಗಿ ಬಳಕೆ ಮಾಡದೇ ಇದ್ದರೆ ಆಗುವ ಪರಿಣಾಮ ಏನು ಎನ್ನುವುದಕ್ಕೇ ನಾವು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಘಟನೆಯೆ ಸಾಕ್ಷಿ. ತಾಯಿ ಮಗಳು ಇಬ್ಬರೂ ಗ್ಯಾಸ್ ಸಿಲಿಂಡರ್ ಸರಿಯಾಗಿ ಬಳಕೆ ಮಾಡದೆ ಪ್ರಾಣ ಕಳೆದುಕೊಂಡಿದ್ದರು. ಆದರೆ ಗಮನ ಕೊಟ್ಟು ಇದನ್ನು ಸರಿಯಾಗಿ ಬಳಕೆ ಮಾಡುವುದರಿಂದ ಮಧ್ಯಮವರ್ಗದವರಿಗೆ ಇದು ಬಹಳ ಪ್ರಯೋಜನಕಾರಿ ಎನ್ನಬಹುದು. ಆದರೆ ಎಚ್ಚರ ತಪ್ಪಿದರೆ ಮಾತ್ರ ನಮ್ಮ ಪ್ರಾಣಕ್ಕೆ ಅಪಾಯ.
ಗ್ಯಾಸ್ ಗೀಸರ್ ನಿಂದ ನಾವು ಯಾವ ರೀತಿ ಅಪಾಯ ಉಂಟಾಗುತ್ತದೆ ಅಂತ ನೋಡುವುದಾದರೆ ಇಲ್ಲಿ ನೀರು ಬಿಸಿಯಾಗಲು ಗ್ಯಾಸ್ ಗೀಸರ್ ಗೆ ಬಳಕೆ ಆಗುವುದು LPG. ಇದು ಆಮ್ಲಜನಕ ಹೆಚ್ಚು ಇರುವ ಕಡೆಗೆ ಉರಿದು ನಂತರ ಕಾರ್ಬನ್ ಡೈ ಆಕ್ಸೈಡ್ ಆಗುತ್ತದೆ. ಆದರೆ ಆಮ್ಲಜನಕದ ಕೊರತೆ ಉಂಟಾದರೆ ಮಾತ್ರ ಪೂರ್ತಿಯಾಗಿ ಉರಿಯದೆ ಕಾರ್ಬನ್ ಮೋನಾಕ್ಸೈಡ್ ಆಗಿ ವಿಷಕಾರಿ ಅನಿಲ ಉಂಟಾಗುತ್ತದೆ ಇದನ್ನು ಸೇವಿಸುವುದರಿಂದ ಸಾವು ಕಟ್ಟಿಟ್ಟ ಬುತ್ತಿ. ಬಾತ್ರೂಮ್ ಗಳಲ್ಲಿ ಸರಿಯಾಗಿ ಗಾಳಿ ಆಡುವ ವ್ಯವಸ್ಥೆ ಇಲ್ಲ ಎಂದರೆ ಇದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚು. ನಾವಿಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯವಾದ ವಿಷಯ ಎಂದರೆ ಈ ವಿಷ ಅನಿಲಕ್ಕೆ ಯಾವುದೇ ರೀತಿಯ ಬಣ್ಣ, ವಾಸನೆ ಇರುವುದಿಲ್ಲ ಹಾಗಾಗಿ ಈ ವಿಷ ಅನಿಲ ಹೊರಹೊಮ್ಮುವುದು ನಮಗೆ ತಿಳಿಯುವುದಿಲ್ಲ. ಇದನ್ನು ನಾವು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಕೂಡಾ ನಮಗೆ ಅಪಾಯವೇ. ತಲೆಸುತ್ತು, ಆಯಾಸ, ಫಿಡ್ಸ್ ಬರುವುದು ಈ ರೀತಿಯ ಸಮಸ್ಯೆಗಳು ಆರಂಭ ಆಗುತ್ತವೆ. ಇನ್ನು ಗರ್ಭಿಣಿಯರಿಗೆ ಅಂತೂ ಈ ವಿಷ ಸೇವನೆ ಆದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಲೇ ಬೇಕು.
ಇನ್ನು ನಾವು ಮುಖ್ಯವಾಗಿ ಗಮನಿಸಲೇಬೇಕಾದ ಅಥವಾ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳನ್ನು ಎಂದರೆ, ಬಾತ್ರುಮಿನಲ್ಲಿ ಸಾಕಶ್ಟು ಗಾಳಿ ಆಡುವ ಕಿಟಕಿಗಳು ಇರಲೇಬೇಕು. ಗೀಸರ್ ಆನ್ ಮಾಡಿದ ತಕ್ಷಣ ಕಿಟಕಿಗಳನ್ನು ತೆಗೆದಿಡಲೇ ಬೇಕು ಯಾವುದೇ ಕಾರಣಕ್ಕೂ ಕೂಡಾ ಕಿಟಕಿಗಳನ್ನು ಮುಚ್ಚಿಡಬಾರದು. ಇನ್ನು ಬಾತ್ರೂಮ್ ನಲ್ಲಿ ಕಿಟಕಿಗಳು ಇಲ್ಲದೆ ಇರುವ ಸಂದರ್ಭದಲ್ಲಿ ಮೊದಲೇ ಬಿಸಿ ನೀರನ್ನು ಶೇಖರಿಸಿ ಇಟ್ಟುಕೊಂಡು ನಂತರ ಗೀಸರ್ ಆಫ್ ಮಾಡಿ ಸ್ನಾನ ಮಾಡಬಹುದು. ಇನ್ನು ಮಕ್ಕಳಿಗೆ ಸ್ನಾನ ಮಾಡಿಸುವಾಗ ಕೂಡಾ ಮೊದಲೇ ಮಕ್ಕಳನ್ನು ಸ್ನಾನಕ್ಕೆ ಬಿಡಬಾರದು. ಮೊದಲು ಗೀಸರ್ ಆನ್ ಮಾಡಿ ಬಿಸಿ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ನಂತರ ಮಕ್ಕಳಿಗೆ ಸ್ನಾನಕ್ಕೆ ಬಿಡಬೇಕು. ಇನ್ನು ಗ್ಯಾಸ್ ಗೆ ಆಮ್ಲಜನಕದ ಕೊರತೆ ಉಂಟಾದರೆ ಅದು ಅರ್ಧದಷ್ಟು ಮಾತ್ರವೇ ಉರಿಯುತ್ತದೆ. ಗ್ಯಾಸ್ ಗೀಸರ್ ನಿಂದ ಹೊರ ಬರುವ ಕಾರ್ಬನ್ ಮೊನಾಕ್ಸೈಡ್ ಇದು ಮೊದಲು ನೆಲದಿಂದ ಶೇಖರಣೆ ಆಗುತ್ತಾ ಹೋಗುತ್ತದೆ ಹಾಗಾಗಿ ಕುಳಿತು ಸ್ನಾನ ಮಾಡುವವರಿಗೆ ಇದು ಬಹಳ ಬೇಗ ಅಪಾಯಕಾರಿ ಎನ್ನಬಹುದು. ಗ್ಯಾಸ್ ಗೀಸರ್ ಬಳಕೆ ಮಾಡುವ ರೀತಿ ಸರಿಯಾಗಿ ಇದ್ದರೆ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಒಂದುವೇಳೆ ಇದರ ಬಳಕೆಯನ್ನು ಸರಿಯಾಗಿ ತಿಳಿಯದೆ ಇದ್ದರೆ ಅಪಾಯ ಮಾತ್ರ ತಪ್ಪಿದ್ದಲ್ಲ.