ಮನುಷ್ಯನು ನಿದಿರೆಗೆ ಜಾರಿದಾಗ ಕೆಲವೊಂದು ಬಾರಿ ಸ್ವಪ್ನಗಳು ಬೀಳುತ್ತವೆ.. ಕೆಲವು ಸ್ವಪ್ನಗಳು ಅರ್ಥಪೂರ್ಣವಾಗಿದ್ದರೆ, ಕೆಲವು ಸ್ವಪ್ನಗಳು ಅರ್ಥವಾಗುವುದೇ ಇಲ್ಲ. ಇನ್ನೂ ಕೆಲವೂ ಸ್ವಪ್ನಗಳು ಬೆಚ್ಚಿ ಬೀಳುವಂತೆ ಮಾಡಿದರೆ, ಕೆಲವು ಸ್ವಪ್ನಗಳು ನೆಮ್ಮದಿ ನೀಡುತ್ತವೆ. ಆದರೆ ಶಾಸ್ತ್ರಗಳ ಪ್ರಕಾರ ಎಲ್ಲ ಸ್ವಪ್ನಗಳಿಗೂ ತನ್ನದೆ ಆದ ಸೂಚನೆ ನೀಡುತ್ತದೆ. ಅವುಗಳಿಗೆ ಅನುಗುಣವಾಗಿ ಫಲಗಳು ನಿರ್ಧರಿತವಾಗುತ್ತದೆ ಎಂಬ ನಂಬಿಕೆ ಇದೆ. ಯಾವ ಸ್ವಪ್ನಗಳು ಶುಭ ಸೂಚನೆ ತರುತ್ತವೆ ಎಂಬುದರ ಕುರಿತು ಮಾಹಿತಿ ಹೀಗಿದೆ. ಕನಸಿನಲ್ಲಿ ಗೋವುಗಳು ಬರುವುದು, ಎತ್ತುಗಳು ಬರುವುದು, ಆನೆಗಳು ಬರುವುದು, ಅಂಬಾರಿ, ಬೆಟ್ಟಗಳು ಬರುವುದು, ಪುಣ್ಯಕ್ಷೇತ್ರಗಳು, ದೇಗುಲಗಳು ಬರುವುದು, ಚಾಮರ, ಬಿಳಿಯ ವಸ್ತ್ರಗಳು ಕಾಣುವುದು, ಇದೆ ರೀತಿಯಲ್ಲಿ ಬಿಳಿಯ ಹಾಸಿಗೆ, ಉರಿಯುವ ದೀಪಗಳು, ಕುಂಕುಮ, ಅರಿಶಿನ, ವಿಭೂತಿ, ತುಳಸಿ ಬಿಲ್ವಪತ್ರೆಗಳು ಕಾಣಿಸಿಕೊಂಡಲ್ಲಿ, ಅದೇ ರೀತಿಯಲ್ಲಿ ವೃಕ್ಷಗಳು, ಸುಗಂಧಿತ ಪುಷ್ಪಗಳು, ಮಂಗಳ ದ್ರವ್ಯಗಳು, ಇವೆಲ್ಲವೂ ಸಾಮಾನ್ಯವಾಗಿ ಶುಭಫಲವನ್ನೆ ನೀಡುತ್ತದೆ‌.

ಕನಸಿನಲ್ಲಿ ಗುರುಗಳು, ಹಿರಿಯರು, ತಾಯಿ ತಂದೆ, ಇವುಗಳು ಕೂಡ ಶುಭಫಲಗಳನ್ನೆ ನೀಡುವಂತವುಗಳಾಗಿದೆ. ಹಾಗೆಯೇ ಕನಸಿನಲ್ಲಿ ಗುರುಗಳಾಗಲಿ ಇಲ್ಲವೇ ಹಿರಿಯರಾಗಲಿ ಏನಾದರೂ ಹೇಳಿದರೆ ಅದು ವಾಸ್ತವವಾಗಿ ನಡೆಯುತ್ತದೆ ಎಂದು ಹೇಳುತ್ತಾರೆ. ಬ್ರಾಹ್ಮಣರು ಕನಸಿನಲ್ಲಿ ಬರಬಾರದು ಎಂಬ ಪ್ರತೀತಿ ಇದೆ. ಆದರೆ ಬ್ರಾಹ್ಮಣರನ್ನು ನಾವೂ ಪೂಜ್ಯ ಭಾವನೆಯಿಂದ ನೋಡುವುದರಿಂದ ಅವರನ್ನು ಸ್ವಪ್ನದಲ್ಲಿ ಕಂಡರೆ ಶುಭವಾಗುತ್ತದೆ ಎಂಬ ಮಾತು ಇದೆ. ದೇವರ ಮೆರವಣಿಗೆಯ ದೃಶ್ಯ ಕಂಡರೆ ಇಲ್ಲವೇ ದೇವರನ್ನು ನೋಡುವುದು, ಗೋಪುರ ಕಾಣಿಸುವುದು, ಇವೆಲ್ಲವೂ ಶುಭ ಸೂಚನೆಯನ್ನು ನೀಡುತ್ತದೆ. ತಾಂಬೂಲ ಇರಬಹುದು, ಮಂಗಳ ಸೂಚಿಸುವ ವಸ್ತುಗಳು ಕಾಣಿಸಿದರೆ ಅವು ಶುಭವಾಗಿರುತ್ತದೆ. ಬಿಳಿಯ ಕುದುರೆಗಳನ್ನು ಕನಸಿನಲ್ಲಿ ಕಂಡರೆ ಧನ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಸ್ವಪ್ನಗಳು ಬಂದಾಗ ಹೆದರುವ ಅವಶ್ಯಕತೆ ಇರುವುದಿಲ್ಲ. ಇವೆಲ್ಲವೂ ಕನಸಿನಲ್ಲಿ ಬಂದರೆ ಒಳ್ಳೆಯದು ಆಗುತ್ತದೆ ಎಂಬುದು ಖಚಿತ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!