ಇತ್ತೀಚಿನ ದಿನಗಳಲ್ಲಿ ಕರೋನಾ ವೈರಸ್ ನ ಕಾರಣದಿಂದ ಹೊರಗೆ ಹೊಗಲು ಸಾಧ್ಯವಿಲ್ಲದ ಕಾರಣ ಮನೆಯಲ್ಲಿಯೆ ಹೊಸಬಗೆಯ ತಿಂಡಿಗಳನ್ನು ಮಾಡಿ ತಿನ್ನುವ ಕಾರ್ಯಕ್ರಮ ಶುರುವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗೋಬಿ, ಪಾನಿ ಪೂರಿ, ಪಿಜ್ಜಾಗಳು ಮುಂಚೂಣಿಯಲ್ಲಿವೆ. ಯಿಸ್ಟ್, ಚಿಸ್ ಬಳಸದೆ, ಓವನ್ ಇಲ್ಲದೆ ಪಿಜ್ಜಾ ಮಾಡುವ ವಿಧಾನ ಇಲ್ಲಿದೆ.
ಮೊದಲು ಮೈದಾ ಹಿಟ್ಟು 1/2 ಕಪ್ಪನ್ನು ಹಾಕಿಕೊಳ್ಳಬೇಕು. ಮತ್ತೊಮ್ಮೆ 2 ಟೀ ಸ್ಪೂನ್ ಮೈದಾ ಹಿಟ್ಟನ್ನು ಹಾಕಿಕೊಳ್ಳಬೇಕು. 1/2 ಟೀ ಸ್ಪೂನ್ ಉಪ್ಪು ಹಾಕಿಕೊಳ್ಳಬೇಕು. ಸಕ್ಕರೆ 1/2 ಟೀ ಸ್ಪೂನ್ ಹಾಕಿಕೊಳ್ಳಬೇಕು. 1/4 ಟೀ ಸ್ಪೂನ್ ಬೇಕಿಂಗ್ ಸೋಡಾ, 1 ಟೀ ಸ್ಪೂನ್ ಬೆಣ್ಣೆ ಅಥವಾ ತುಪ್ಪ, 1/4 ಕಪ್ಪು ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಮತ್ತೆ ನೀರು ಹಾಕುವ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ಮೊಸರು ಹಾಕಿರುವುದರಿಂದ ಚೆನ್ನಾಗಿ ಮೆದುವಾಗಿ ಬರುತ್ತದೆ. ಹೀಗೆ ಕಲಸಿದ ಹಿಟ್ಟನ್ನು 20 ನಿಮಿಷ ಮುಚ್ಚಳ ಮುಚ್ಚಿ ಇಡಬೇಕು.
ಪಿಜ್ಜಾದ ಸಾಸ್ ರೆಡಿಮಾಡಿಕೊಳ್ಳವುದು ಹೇಗೆ ನೋಡುವ. ಒಂದು ಪ್ಯಾನ್ ನಲ್ಲಿ ಐದು ಎಸಳು ಬೆಳ್ಳುಳ್ಳಿ, ಒಂದು ಅರ್ಧ ಇಂಚು ಸಣ್ಣದಾಗಿ ಹೆಚ್ಚಿಕೊಂಡಿರುವ ಶುಂಠಿ, ಮಧ್ಯಮ ಗಾತ್ರದ ಈರುಳ್ಳಿ ಕಟ್ ಪಿಸ್, ಒಂದು ಮಧ್ಯಮ ಗಾತ್ರದ ಟೊಮ್ಯಾಟೊ ಕಟ್ ಪಿಸ್ ಹಾಕಿಕೊಂಡು ಸ್ಟವ್ ಹಚ್ಚಿಕೊಂಡು ಅರ್ಧ ಕಪ್ ನೀರು ಹಾಕಿಕೊಂಡು ಒಂದು ಸಲ ಕಲಸಿಕೊಂಡು ಮುಚ್ಚುಳದಿಂದ ಮುಚ್ಚಿಕೊಂಡು ಐದರಿಂದ ಎಂಟು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು. ಇದನ್ನು ಸ್ವಲ್ಪ ತಣ್ಣಗೆ ಆಗಲು ಬಿಟ್ಟು ನೀರಿನ ಸಮೇತ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಪ್ಯಾನ್ ಬಿಸಿಗಿಟ್ಟು ಅದರಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ನಂತರ ಒಂದು ಟೀ ಸ್ಪೂನ್ ಅಚ್ಚಕಾರದ ಪುಡಿ, ಬೇಕಾದಲ್ಲಿ ಅಥವಾ ಇದ್ದರೆ ಅರ್ಧ ಟೀ ಸ್ಪೂನ್ ಓರೆಗ್ಯಾನೊ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಈಗ ಅದಕ್ಕೆ ರುಬ್ಬಿದ ಪೆಸ್ಟ್ ಹಾಕಿ ಚೆನ್ನಾಗಿ ಕಲೆಸಬೇಕು. ದೊಡ್ಡ ಉರಿ ಇದ್ದರೆ ಸೀದುಹೊಗುವ ಸಾಧ್ಯತೆ ಇದೆ. ಒಂದೆರಡು ನಿಮಿಷಗಳ ಕಾಲ ಅದು ಗಟ್ಟಿಯಾಗುವಂತೆ ಕುದಿಸಿಕೊಳ್ಳ ಬೇಕು. ಕುದಿಯುವಾಗ ಇದಕ್ಕೆ 1/4 ಟೀ ಸ್ಪೂನ್ ನಷ್ಟು ಉಪ್ಪು, 1/2 ಟೀ ಸ್ಪೂನ್ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಸಾಸ್ ರೀತಿಯಲ್ಲಿ ಆಗುವವರೆಗೂ ಕುದಿಸಿದ ನಂತರ ಎತ್ತಿಡಿ.
ಈಗ ಇನ್ನೊಂದು ಪ್ಯಾನ್ ನಲ್ಲಿ ಒಂದು ಟೇಬಲ್ ಸ್ಪೂನ್ ನಷ್ಟು ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು. ಇದಕ್ಕೆ ಬೆಣ್ಣೆ, ತುಪ್ಪ, ಎಣ್ಣೆ ಇತರ ಯಾವುದು ಬೇಕಾದರೂ ಬಳಸಬಹುದು. ಬೆಣ್ಣೆ ಕರಗಿದ ಮೇಲೆ ಒಂದು ಟೇಬಲ್ ಸ್ಪೂನ್ ನಷ್ಟು ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಗಂಟುಗಳಿಲ್ಲದಂತೆ ಕಲಸಿಕೊಳ್ಳಬೇಕು. ನಂತರ ಅರ್ಧ ಕಪ್ ಹಾಲನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಹೋಗಬೇಕು. ಒಂದು ವೇಳೆ ಚಿಸ್ ಇದ್ದರೆ ಇದನ್ನು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಗಟ್ಟಿಯಾಗಿದೆ ಅನಿಸಿದರೆ ಒಂದು ಟೇಬಲ್ ಸ್ಪೂನ್ ನೀರು ಅಥವಾ ಹಾಲನ್ನು ಬಳಸಬಹುದು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಬೇಕು. ಇದು ಚಿಸ್ ನ ಕನ್ಸಿಸ್ಟೆನ್ಸಿಯಂತೆ ಇರಬೇಕು. ಇದನ್ನು ಪಕ್ಕದಲ್ಲಿ ಎತ್ತಿಟ್ಟುಕೊಳ್ಳಿ. ಈಗ ನಾವೂ ಮೊದಲು ಮಾಡಿಟ್ಟಿರುವ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಒಣ ಹಿಟ್ಟನ್ನು ಹಾಕಿಕೊಂಡು 1/4 ಇಂಚು ದಪ್ಪವಾಗಿ ಲಟ್ಟಿಸಿಕೊಳ್ಳಬೇಕು. ಪಿಜ್ಜಾ ಮಾಡಲು ಕೇಕ್ ಮೊಲ್ಡ್ ಅಥವಾ ಸಿಲ್ವರ್ ಪ್ಲೇಟ್ ಅನ್ನು ಉಪಯೋಗಿಸಿಕೊಳ್ಳಬಹುದು. ಇಲ್ಲವೇ ಪಿಜ್ಜಾ ಪ್ಲೇಟ್ ಅನ್ನು ಉಪಯೋಗಿಸಿಕೊಳ್ಳಬಹುದು.
ಪಿಜ್ಜಾ ಪ್ಲೇಟ್ ಗೆ ಎಣ್ಣೆ ಸವರಿ ಲಟ್ಟಿಸಿರುವ ಹಿಟ್ಟನ್ನು ಹಾಕಿಕೊಂಡು ಪ್ಲೇಟ್ ನ ಆಕಾರಕ್ಕೆ ಕೈಯಿಂದ ಒತ್ತಿ ಸೆಟ್ ಮಾಡಿಕೊಳ್ಳಬೇಕು. ಇದರ ಮೇಲೆ ನಾವು ಮಾಡಿಟ್ಟುಕೊಂಡಿರುವ ಕೆಂಪು ಸಾಸ್ ಅನ್ನು ಹಾಕಿ ಸ್ಪ್ರೆಡ್ ಮಾಡಿಕೊಳ್ಳಬೇಕು. ಜಾಸ್ತಿ ಹಾಕಿಕೊಳ್ಳುವುದು ಬೇಡ ಯಾಕೆಂದರೆ ಸ್ವಲ್ಪ ಖಾರವಾಗಿರುತ್ತದೆ. ಟೇಸ್ಟಿಗೆ ತಕ್ಕಂತೆ ಹಾಕಿಕೊಳ್ಳಬೇಕು. ವೈಟ್ ಸಾಸ್ ಅನ್ನು ಮೇಲಿಂದ ಹಾಕಿಕೊಳ್ಳಬೇಕು. ಮೇಲಿಂದಮೇಲೆ ಸ್ಪ್ರೇಡ್ ಮಾಡಿಕೊಳ್ಳಬೇಕು ಕೆಂಪು ಸಾಸ್ ನೊಂದಿಗೆ ಮಿಕ್ಸ್ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ನಂತರ ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ ಅನ್ನು ಉದ್ದುದ್ದಕ್ಕೆ ಹೆಚ್ಚಿಕೊಂಡು ಅದರ ಮೇಲೆ ಇಟ್ಟುಕೊಳ್ಳಬೇಕು. ಚಿಲ್ಲಿ ಪ್ಲೇಕ್ಸ್ ಹಾಕಿಕೊಳ್ಳಬೇಕು. ಒರೆಗೊನ್ ಬೇಕಾದಲ್ಲಿ ಹಾಕಿಕೊಳ್ಳಬಹುದು. ಮೇಲೆ ಸ್ವಲ್ಪ ವೈಟ್ ಸಾಸ್ ಹಾಕಿಕೊಳ್ಳಬೇಕು. ಇಷ್ಟು ಆದಮೇಲೆ ಕಡಾಯಿನಲ್ಲಿ ಒಂದು ಸ್ಟಾಂಡ್ ಇಟ್ಟು ಮುಚ್ಚಳದಿಂದ ಮುಚ್ಚಿ ಸಣ್ಣ ಉರಿಯಲ್ಲಿ ಪ್ರಿಹಿಟ್ ಮಾಡಿಕೊಳ್ಳಬೇಕು. ಹಿಟ್ ಆದಮೇಲೆ ಪಿಜ್ಜಾಗೆ ರೆಡಿ ಮಾಡಿಟ್ಟಿರುವ ಟ್ರೇ ಅನ್ನು ಕಡಾಯಿಯಲ್ಲಿಟ್ಟು ಮುಚ್ಚಳದಿಂದ ಮುಚ್ಚಿ 20-25 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಒಂದು ವೇಳೆ ಓವೆನ್ ಅಗಿದ್ದಲ್ಲಿ ಪ್ರಿಹಿಟ್ 180c ಯಲ್ಲಿ ಹತ್ತುನಿಮಿಷ ಬಿಸಿ ಮಾಡಿಕೊಂಡು. ಇಪ್ಪತ್ತು ನಿಮಿಷ ಬೇಯಿಸಬೇಕು. ಗ್ಯಾಸ್ ನಲ್ಲಿ ಇಪ್ಪತ್ತೈದು ನಿಮಿಷ ಬೇಕಾಗಬಹುದು. ಹಸಿ ಇದೆ ಅನಿಸಿದಲ್ಲಿ ಮತ್ತು ಐದು ನಿಮಿಷ ಬೇಯಿಸಿಕೊಳ್ಳಬಹುದು. ಹೀಗೆ ನೀವು ಮನೆಯಲ್ಲಿಯೇ ಪಿಜ್ಜಾ ಮಾಡಿಕೊಳ್ಳಬಹುದು.