ಬಾಳೆದಿಂಡಿನ ಪಲ್ಯ ಅನ್ನೋದು ಸಾಮಾನ್ಯವಾಗಿ ಬಳಹಷ್ಟು ಜನಕ್ಕೆ ಗೊತ್ತಿರುತ್ತದೆ ಈ ಪಲ್ಯದಿಂದ ಕಿಡ್ನಿಯಲ್ಲಿ ಆಗಿರುವಂತ ಕಲ್ಲು ಕರಗಿಸಿಕೊಳ್ಳಬಹುದು ಅನ್ನೋದು ಕೆಲವರಿಗೆ ಗೊತ್ತಿರುವ ವಿಚಾರವಾಗಿದೆ, ಗೊತ್ತಿಲ್ಲದವರು ಇದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಬಾಳೆಗಿಡ ಹಲವು ಉಪಯೋಗಗಳನ್ನು ಹೊಂದಿದೆ, ಬಾಳೆಹಣ್ಣು ಹಾಗೂ ಇದರ ಎಲೆ ಅಷ್ಟೇ ಅಲ್ದೆ ಇದರ ಕಾಂಡ ಕೂಡ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿಯಾಗಿದೆ. ನಿಯಮಿತವಾಗಿ ಬಾಳೆದಿಂಡ ಪಲ್ಯ ಮಾಡಿ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಕಿಡ್ನಿ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಬಾಳೆ ದಿಂಡಿನ ಪಲ್ಯವನ್ನು ಹೇಗೆ ಮಾಡುವುದು ಅನ್ನೋದನ್ನ ತಿಳಿಯೋಣ ಇದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ ಹಾಗೂ ಇದನ್ನು ಯಾವ ರೀತಿಯಲ್ಲಿ ತಯಾರಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಅನ್ನೋದಾದರೆ, ಇದಕ್ಕೆ ಬೇಕಾಗುವ ಪದಾರ್ಥಗಳು ಬಾಳೆದಿಂಡು ಕಡಲೆಬೇಳೆ ತುರಿದ ತರಂಗಿನಕಾಯಿ ಒಂದೆರಡು ಹಸಿ ಮೆಣಸಿನಕಾಯಿ ಸ್ವಲ್ಪ ಬೆಲ್ಲ ಹಾಗೂ ಹುಣಸೆಹಣ್ಣಿನ ರಸ ಮತ್ತು ರುಚಿಗೆ ತಕ್ಕಸ್ಟು ಉಪ್ಪು. ಇನ್ನು ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಶಿನ ಕೊತ್ತಂಬರಿ ಸೊಪ್ಪು ೨-೩ ಒಣ ಮೆಣಸಿನ ಕಾಯಿ.
ತಯಾರಿಸುವ ವಿಧಾನ ಹೇಗೆ ಅನ್ನೋದಾದರೆ ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಗೂ ಚಿಕ್ಕದಾಗಿ ಕತ್ತರಿಸಿಕೊಂಡ ಬಾಳೆದಿಂಡು ಒಣಮೆಣಸಿನಕಾಯಿ ಕಡಲೆಬೇಳೆ ಹಾಕಿ ಬೇಯಿಸಿಕೊಳ್ಳಬೇಕು, ಇದಾದ ಮೇಲೆ ಮಿಕ್ಸಿಯಲ್ಲಿ ಸಾಸಿವೆ, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ. ಈ ವಿಧಾನ ಎಡಿಎ ಮೇಲೆ ನಂತರ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಒಗ್ಗರಣೆ ಹಾಕಿದ ಮೇಲೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ ಉಪ್ಪು ಸ್ವಲ್ಪ ಬೆಲ್ಲ ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಹುರಿಯಬೇಕು, ಆಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ. ನೀವು ಸೇವಿಸಲು ಬಯಸುವ ಬಾಳೆದಿಂಡಿನ ಪಲ್ಯ ರೆಡಿಯಾಗಿರುತ್ತದೆ.