ನಿಸರ್ಗದಲ್ಲಿ ಸಿಗುವ ಹಲವು ಬಳ್ಳಿಗಳು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ ಅದರಲ್ಲಿ ಮಂಗರವಳ್ಳಿ ಬಳ್ಳಿಯ ಮತ್ತು ಅದರ ಉಪಯೋಗದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಮಂಗರವಳ್ಳಿ ಬಳ್ಳಿಗೆ ಮಂಗರಬಳ್ಳಿ ಎಂತಲೂ ಕರೆಯುತ್ತಾರೆ. ಇದರಲ್ಲಿ ನಾಲ್ಕು ವಿಧಗಳಿವೆ. ನಾಲ್ಕು ಏಣಿಗಳುಳ್ಳದ್ದು, ಒಂದು ಏಣಿಯದ್ದು, ಮೂರು ಏಣಿಯದ್ದು, ಎರಡು ಏಣಿಯದ್ದು. ಒಂದು ಏಣಿಯ ಬಳ್ಳಿ ಸಿಗುವುದು ಕಡಿಮೆ. ಈ ಬಳ್ಳಿಗೆ ಅಸ್ತಿಭಂಜಕ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಅಸ್ತಿ ಎಂದರೆ ಎಲುಬು ಭಂಜಕ ಎಂದರೆ ಕೂಡಿಸುವುದು. ಇದರ ಚಟ್ನಿ ಮಾಡಿ ಸೇವಿಸಿದರೆ ಸಾಕು ಕಾಲುಗಳಲ್ಲಿ ಮತ್ತು ಕೀಲುಗಳಲ್ಲಿ ಮುರಿತವಿದ್ದರೆ ಕೂಡಿಸುತ್ತದೆ. ಇದನ್ನು ನಾಲಿಗೆಯ ಮೇಲೆ ಇಡುವುದರಿಂದ ಘವ ಘವವೆಂದು 2-3 ತಾಸಿನವರೆಗೆ ಇರುತ್ತದೆ.
ಈ ಬಳ್ಳಿಯಲ್ಲಿ ಕ್ಯಾಲ್ಸಿಯಂ ಮತ್ತು ಇದರಲ್ಲಿ ಕೆಲವು ವಿಶೇಷ ರಾಸಾಯನಿಕಗಳಿವೆ. ದನಗಳಿಗೆ ಬಹಳ ಉಪಯೋಗವಿದೆ. ಈ ಬಳ್ಳಿಯ ಸೇವನೆಯಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಇದರ ಬೇರನ್ನು ಬ್ರಾಹ್ಮಿ ಜೊತೆ, ಜೀರಿಗೆ ಜೊತೆ ಮತ್ತು ಖರ್ಜೂರದ ಜೊತೆ ಸೇರಿಸಿ ತಿನ್ನುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಒಮ್ಮೆ ಈ ಬಳ್ಳಿಯನ್ನು ಬೆಳೆಸಿದರೆ 50-100 ವರ್ಷ ಇರುತ್ತದೆ. ಈ ಬಳ್ಳಿಯನ್ನು ಅಡುಗೆಗೆ ಬಳಸುವುದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಈ ಬಳ್ಳಿಯನ್ನು ಸಂಸ್ಕಾರ ಮಾಡದೆ ಬಳಸಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅಲ್ಲದೆ ಇಂತಹ ಬಳ್ಳಿಯನ್ನು ಬೆಳೆಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.