ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಜಗತ್ತಿಗೆ ಬದುಕಿನ ಪಾಠ ತಿಳಿಸಿಕೊಟ್ಟವರು ಎನ್ನುವ ವಿಷಯ ನಮಗೆಲ್ಲರಿಗೂ ಗೊತ್ತಿದೆ. ಅದೇ ರೀತಿ ಶ್ರೀಕೃಷ್ಣನ ಬದುಕಿನ ಪ್ರತಿಯೊಂದು ಘಟನೆಯೂ ನಮಗೂ ಕೂಡ ಪಾಠವೇ. ಇತ್ತೀಚೆಗೆ ನಾವು ಅತಿಹೆಚ್ಚಾಗಿ ನೋಡುತ್ತಿರುವುದು ಜಗತ್ತಿನಲ್ಲಿ ಯುವಕ-ಯುವತಿಯರ ಆತ್ಮ#ಹತ್ಯೆ ಪ್ರಕರಣ. ಆತ್ಮ#ಹತ್ಯೆ ಪ್ರಕರಣಗಳ ಹಿಂದೆ ಇರುವುದು ಪ್ರೇಮ ವೈಫಲ್ಯ. ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಕೃಷ್ಣನ ಜೀವನದಲ್ಲಿ ಕೂಡ ಒಂದು ಪ್ರೇಮದ ಕಥೆ ಇದೆ ಎನ್ನುವುದು. ಜೀವಕ್ಕಿಂತ ಹೆಚ್ಚು ಎಂದು ಅತಿಯಾಗಿ ಪ್ರೀತಿಸಿದ ಯುವತಿಯನ್ನು ತಾನು ಇನ್ನೆಂದು ಕಾಣದ ಹಾಗೆ ಬಿಟ್ಟುಹೋಗುವ ಪರಿಸ್ಥಿತಿ ಬರುತ್ತದೆ. ಈ ರೀತಿಯಾಗಿ ತನ್ನ ಯೌವನದ ಮೊದಲ ಪ್ರೇಮವನ್ನು ಬಿಟ್ಟು ಹೊರಟ ಕೃಷ್ಣ ಕಿನ್ನತೆಗೆ ಒಳಗಾಗಿ ಕುಳಿತಿದ್ದರೆ, ಒಬ್ಬ ಮಹಾನ್ ರಾಜ ತಂತ್ರಜ್ಞರಾಗಿ, ಪ್ರತಿಯೊಂದರ ಸೂತ್ರಧಾರನಾಗಿ , ಒಂದು ಕಾಲಘಟ್ಟದ ಎಲ್ಲವನ್ನು ತಾನೇತಾನಾಗಿ ನಡೆಸುವ ಮಹಾನ್ ಕ್ಷತ್ರಿಯನಾಗಿ ದೇವರ ಹಾಗೆ ಕಾಣಿಸಿಕೊಳ್ಳುತ್ತ ಇರಲಿಲ್ಲವೇನೋ. ಹುಟ್ಟಿದ ಕೂಡಲೇ ಮಧುರೆ ಇಂದ ಗೋಕುಲಕ್ಕೆ ಬಂದ ಕೃಷ್ಣ ಅಲ್ಲಿ ತನ್ನ ಲೀಲೆಗಳನ್ನು ತೋರಿಸಲು ಆರಂಭಿಸಿದ. ಕೃಷ್ಣನ ಅದ್ಭುತವಾದ ಕೊಳಲಿನ ನಾದಕ್ಕೆ ಮನಸೋಲದವರು ಯಾರಿದ್ದರು? ಹೀಗಿರುವಾಗಲೇ ಕೃಷ್ಣನಲ್ಲಿ ಕೂಡ ರಾಧಾ ಎಂಬ ಹೆಸರಿನ ಒಬ್ಬ ಗೋಪಬಾಲೆಯ ಜೊತೆ ಪ್ರೇಮಾಂಕುರವಾಗಿತ್ತು.
ರಾಧೆ ವಯಸ್ಸಿನಲ್ಲಿ ಶ್ರೀಕೃಷ್ಣನಿಗಿಂತ ಐದಾರು ವರ್ಷ ದೊಡ್ಡವಳಿರಬಹುದು. ಆದರೆ ರಾಧಾಕೃಷ್ಣನ ಅದ್ಭುತವಾದ ಪ್ರೇಮಕ್ಕೆ ಅವರ ವಯಸ್ಸು ಎಂದಿಗೂ ಅಡ್ಡ ವಾಗಿರಲಿಲ್ಲ. ಪ್ರೀತಿ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದು ಒಬ್ಬರನ್ನು ಇನ್ನೊಬ್ಬರು ಬಿಟ್ಟಿರಲಾಗದ ಒಂದು ದೈವೀ ಅನುಭೂತಿ. ದೇಹದ ವಾಂಛೆಯನ್ನು ಮೀರಿ ಬರಿ ಮನಸ್ಸಿಗೆ ಸಂಬಂಧಿಸಿದ ಶುದ್ಧವಾದ ಪ್ರೀತಿ ಅದು. ನಮ್ಮಲ್ಲಿ ಎಷ್ಟು ಜನರಿಗೆ ಅಂತಹ ದಿವ್ಯ ಪ್ರೇಮದ ಅನುಭವ ಆಗಿದೆಯೊ ಗೊತ್ತಿಲ್ಲ ಆದರೆ ಒಂದು ಸಲ ಶುದ್ಧ ಮನಸ್ಸಿನಿಂದ ಯಾರಾದರೂ ಒಬ್ಬರನ್ನು ಪ್ರೀತಿಸಿದರೆ, ಪ್ರೀತಿಸಿದ ವ್ಯಕ್ತಿಯನ್ನು ಹೊರತುಪಡಿಸಿ ಇನ್ನೇನು ಇರಲು ಸಾಧ್ಯವಿಲ್ಲ ಎನ್ನಿಸುತ್ತದೆ. ನಾವು ಉಸಿರಾಡುವ ಪ್ರತಿಯೊಂದು ಉಸಿರು ಕೂಡ ಪ್ರೀತಿಯಿಂದ ತುಂಬಿರುತ್ತದೆ ರಾಧಾಕೃಷ್ಣರ ಪ್ರೀತಿಯೂ ಕೂಡ ಅದೇ ರೀತಿ ಆಗಿತ್ತು. ಆದರೆ ರಾಧಾಕೃಷ್ಣರ ಪ್ರೀತಿ ಗೌಪ್ಯವಾಗಿ ಏನೂ ಇರಲಿಲ್ಲ ಇಡೀ ವೃಂದಾವನಕ್ಕೆ ತಿಳಿದಿತ್ತು ಈ ವಿಷಯ. ರಾಧೆ ಮಾನಸಿಕವಾಗಿ ತನ್ನನ್ನು ತಾನು ಕೃಷ್ಣನಿಗೆ ಸಮರ್ಪಿಸಿಕೊಂಡಿದ್ದಳು. ಶ್ರೀಕೃಷ್ಣನ ಕೂಡ ರಾಧೆ ಪ್ರೇಮದಲ್ಲಿ ತನ್ನನ್ನು ತಾನು ಮರೆತು ಕಳೆದುಹೋಗಿದ್ದ ಅದೇ ಸಮಯದಲ್ಲಿ ಕೃಷ್ಣನಿಗೆ ತನ್ನ ಪ್ರೇಮ ಬಂಗ ವಾಗುವ ಸಮಯ ಬಂದಿತ್ತು.
ಸಹಜವಾಗಿಯೇ ಕೃಷ್ಣ ತನ್ನ ಪ್ರೀತಿಯನ್ನು ತಾಯಿ ಯಶೋದೆಯ ಬಳಿ ಹೇಳಿಕೊಳ್ಳುತ್ತಾನೆ. ಯಶೋದೆಗೆ ಮಗ ರಾಧೆಯನ್ನು ಪ್ರೀತಿಸುತ್ತಿರುವ ವಿಷಯ ಅವರಿಬ್ಬರ ಬಾಯಿಂದ ಕೇಳಿ ತಿಳಿದಿತ್ತು. ಆದರೆ ಸ್ವತಃ ಮಗನೇ ತನ್ನ ಎದುರು ಬಂದು ನಿಂತು ಹೇಳಿದಾಗ ಯಶೋದ , ಕೃಷ್ಣ ರಾಧೆಯನ್ನು ವಿವಾಹವಾಗುವುದು ಇಷ್ಟವಿರಲಿಲ್ಲ ಅದು ಅಲ್ಲದೆ ಈಗಾಗಲೇ ಇನ್ನೊಬ್ಬರ ಜೊತೆಗೆ ವಿವಾಹ ನಿಶ್ಚಯವಾಗಿತ್ತು ರಾದೆ ಕೃಷ್ಣನಿಗಿಂತ ವಯಸ್ಸಿನಲ್ಲಿ ದೊಡ್ಡವಳು ಕೂಡ ಇದ್ದಳು. ಅಂಥವಳು ತನ್ನ ಮಗನನ್ನು ಮದುವೆಯಾಗುವುದು ಯಶೋದ ಗೆ ಇಷ್ಟವಿಲ್ಲ ಹಾಗಾಗಿ ಬೇಡ ಎಂದು ಯಶೋದ ಹೇಳಿದಳು. ಅದಕ್ಕೆ ಕಾರಣವನ್ನು ಕೃಷ್ಣ ಕೇಳಿದಾಗ ಯಶೋಧ ಕೃಷ್ಣನಿಗೆ ರಾಧೆ ನಮ್ಮ ಅಂತಸ್ತಿಗೆ ತಕ್ಕವಳಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಪ್ರತಿಯಾಗಿ ಕೃಷ್ಣ ಯಶೋದೆಗೆ ರಾಧೆ ನನ್ನನ್ನು ಮದುವೆಯಾಗಿ ನಿನ್ನ ಸೊಸೆಯಾಗಿ ಬಂದರೆ ಆಗ ಅವಳ ಅಂತಸ್ತು ನಮ್ಮ ಅಂತಸ್ತಿನ ಅಷ್ಟೇ ಆಗುವುದಿಲ್ಲವೇ? ಇಷ್ಟಕ್ಕು ಮದುವೆಯಾಗುವುದು ನಾನು; ನಾವಲ್ಲ ಎಂದು ಉತ್ತರವನ್ನು ಹೇಳುತ್ತಾನೆ. ಮತ್ತೆ ಯಶೋದ ಕೃಷ್ಣನ ಬಳಿ ರಾಧೆಗೆ ಈಗಾಗಲೇ ಮದುವೆ ನಿಶ್ಚಯವಾಗಿದೆ ಅವಳ ಭಾವಿಪತಿ ಕಂಸನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಹೀಗಿರುವಾಗ ನೀನು ಹೇಗೆ ರಾಧೆಯನ್ನು ವಿವಾಹವಾಗುವೆ? ರಾಧೆ ಗಿಂತ ಒಳ್ಳೆಯ ಹುಡುಗಿಯನ್ನು ನಿನಗೆ ತರೋಣ ಎಂದು ಯಶೋದ ಎಷ್ಟು ಹೇಳಿದರೂ ಕೃಷ್ಣ ಅವಳ ಮಾತನ್ನು ಒಪ್ಪುವುದಿಲ್ಲ. ಹಾಗೂ ತಾನು ರಾಧೆಯನ್ನು ಬಿಟ್ಟರೆ ಇನ್ಯಾರನ್ನು ವಿವಾಹವಾಗುವುದನ್ನು ಕೃಷ್ಣ ಹಠ ಹಿಡಿದು ಕುಳಿತ. ತನ್ನ ಯೌವನದ ದಿನಗಳಲ್ಲಿ ಎಲ್ಲಾ ತರುಣ ತರುಣಿಯರಿಗೆ ಆಗೋ ಹಾಗೆ ಶ್ರೀಕೃಷ್ಣ ಕೂಡ ತನ್ನ ಪ್ರೀತಿಯನ್ನು ಬಿಡುವುದೇ ಇಲ್ಲ ಎಂದು ಕುಳಿತಿದ್ದ. ಈ ವಿಷಯ ಕೃಷ್ಣನ ತಂದೆ ನಂದ ನೀವು ಕೂಡ ತಿಳಿದಿತ್ತು ನಂದ ಕೂಡ ಮಗನಿಗೆ ಬುದ್ಧಿ ಹೇಳಿದರು ಕೃಷ್ಣ ಯಾರ ಮಾತನ್ನು ಕೇಳಲ್ಲ. ನಮ್ಮಲ್ಲಿ ಗುರುಹಿರಿಯರಿಂದ ಮಕ್ಕಳಿಗೆ ಬುದ್ಧಿ ಹೇಳಿಸುವ ಪದ್ಧತಿ ಇದೆ ಹಾಗಾಗಿ ನಂದ ಕೃಷ್ಣನನ್ನು ತಮ್ಮ ಕುಲಗುರು ಗರ್ಗಾಚಾರ್ಯ ಬಳಿ ಕರೆದುಕೊಂಡು ಹೋಗಿ ಬುದ್ಧಿ ಹೇಳಿಸುತ್ತಾನೆ ಗುರುಗಳ ಮಾತನ್ನು ಕೂಡ ಕೃಷ್ಣ ಕೇಳುವುದಿಲ್ಲ.
ನಂತರ ಗರ್ಗಾಚಾರ್ಯ ರು ಕೃಷ್ಣನಿಗೆ ನಿನ್ನ ಜನನದ ಉದ್ದೇಶವೇ ಬೇರೆ ಇದೆ ನೀನು ಧರ್ಮಸಂಸ್ಥಾಪನೆಗಾಗಿ ಜನಿಸಿದವನು ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಕೃಷ್ಣ ಗರ್ಗಾಚಾರ್ಯ ರಿಗೆ ನನ್ನ ಪ್ರೇಮವನ್ನು ಕೊಲ್ಲುವ ಮೂಲಕ ಆರಂಭದಲ್ಲಿಯೇ ನನ್ನ ಕೈಯಿಂದ ಅನ್ಯಾಯವನ್ನು ಯಾತಕ್ಕಾಗಿ ಮಾಡಿಸುತ್ತಿದ್ದೀರ? ಎಂದು ಮರು ಪ್ರಶ್ನೆಯನ್ನು ಕೇಳುತ್ತಾನೆ. ಆಗ ಗರ್ಗಾಚಾರ್ಯರು ಅನಿವಾರ್ಯವಾಗಿ ಕೃಷ್ಣನಿಗೆ ಕೆಲವು ಸತ್ಯಗಳನ್ನು ಹೇಳಲೇ ಬೇಕಾಗಿತ್ತು. ಕೃಷ್ಣ ಮೂಲತಹ ನಿಜವಾಗಿಯೂ ನಂದ ಹಾಗೂ ಯಶೋದ ಅವರ ಮಗ ಅಲ್ಲ , ಕೃಷ್ಣನ ನಿಜವಾದ ತಂದೆ ತಾಯಿ ಇಬ್ಬರು ಕಂಸನ ಸೆರೆಮನೆವಾಸ ದಲ್ಲಿದ್ದಾರೆ ನಿಜವಾದ ತಂದೆ ತಾಯಿ ಇಬ್ಬರು ದೇವಕಿ ಹಾಗೂ ವಸುದೇವ. ಕಂಸನ ಸಂಹಾರಕ್ಕಾಗಿ ನಿನ್ನ ಜನನ ವಾಗಿದೆ ಎಂದು ನಾರದರು ತಿಳಿಸಿದ ಕೆಲವೊಂದು ಸತ್ಯಾಂಶಗಳನ್ನು ಗರ್ಗಾಚಾರ್ಯರೂ ಕೃಷ್ಣನಿಗೆ ತಿಳಿಸುತ್ತಾರೆ. ಜಗತ್ತಿನಲ್ಲಿ ಅಧರ್ಮ , ಅನ್ಯಾಯ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಧರ್ಮ ಸ್ಥಾಪನೆಗಾಗಿ ಜನರ ಕಲ್ಯಾಣಕ್ಕಾಗಿ ನಿನ್ನ ಜನನ ವಾಗಿದೆ. ಹೀಗಿದ್ದಾಗ ನೀನು, ತಾನು ರಾಧೆಗೆ ಮಾತ್ರ ಸ್ವಂತ ಎಂದು ಹೇಳುತ್ತಿರುವುದು ಯಾವ ರೀತಿಯ ನ್ಯಾಯ? ಎಂದು ಗರ್ಗಾಚಾರ್ಯರು ಕೃಷ್ಣನಿಗೆ ಹೇಳುತ್ತಾರೆ . ಗರ್ಗಾಚಾರ್ಯರ ಮಾತು ಕೇಳಿ ಕೃಷ್ಣನಿಗೆ ಸ್ವಲ್ಪ ಜ್ಞಾನೋದಯವಾದ ಹಾಗೆ ಆದರೂ ತಾನು ರಾಧೆಯನ್ನು ಬಿಟ್ಟು ಲೋಕದ ಕಡೆಗೆ ನಡೆಯಬೇಕ? ಅಥವಾ ಲೋಕವನ್ನು ಅಂದರೆ ತನ್ನ ಜವಾಬ್ದಾರಿಯನ್ನು ಬಿಟ್ಟು ರಾಧೆಯನ್ನರಸಿ ಹೋಗಬೇಕ? ಎನ್ನುವ ಗೊಂದಲ ಕೃಷ್ಣನ ಮನದಲ್ಲಿ ಉಂಟಾಯಿತು. ಎಲ್ಲ ಗೊಂದಲಗಳನ್ನು ತೊಡೆದುಕೊಳ್ಳುವ ಸಲುವಾಗಿ ಕೃಷ್ಣನಿಗೆ ಏಕಾಂತ ಬೇಕಾಗಿತ್ತು ಹಾಗಾಗಿ ತನ್ನೆಲ್ಲರನ್ನು ಬಿಟ್ಟು ಏಕಾಂತವನ್ನು ಬಯಸಿ ಗೋವರ್ಧನಗಿರಿಯನ್ನು ಹತ್ತಿ ಕುಳಿತಿದ್ದ ಏಕಾಂತದಲ್ಲಿ ಕೃಷ್ಣ ಕಣ್ಣೀರುಹಾಕಿದ ನೋ ? ದುಃಖಪಟ್ಟನು ಅಥವಾ ಬಿಕ್ಕಳಿಸಿದನೋ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಎಷ್ಟೋ ಸಮಯದ ಬಳಿಕ ಸಮಾಧಾನಗೊಂಡ ಕೃಷ್ಣ ಗೋವರ್ಧನಗಿರಿ ಇಂದ ಕೆಳಗಿಳಿದು ಬಂದ ಅವನ ಮನಸ್ಸಲ್ಲಿ ಒಂದು ದೃಢನಿರ್ಧಾರ ಇದ್ದಿತ್ತು.
ಒಂದು ಹುಣ್ಣಿಮೆಯ ದಿನ ಕೃಷ್ಣ ವೃಂದಾವನವನ್ನು ಬಿಟ್ಟು ಹೋಗಲು ನಿರ್ಧರಿಸುತ್ತಾನೆ. ಅಲ್ಲಿಂದ ಹೊರಡುವಾಗ ರಾಧೆಗೆ ತನ್ನ ನೆನಪಿನ ಸಲುವಾಗಿ ತನ್ನ ಸುಮಧುರ ನಾದವನ್ನು ಹೊಮ್ಮಿಸುವ ಕೊಳಲನ್ನು ಕಾಣಿಕೆಯನ್ನಾಗೀ ಕೊಟ್ಟು ಹೋಗುತ್ತಾನೆ. ಆಗ ಕೃಷ್ಣನ ಬಳಿ ರಾಧೆ ನೀನು ನನ್ನನ್ನು ವಿವಾಹ ಆಗುವುದಿಲ್ಲವೆ ಎಂದು ಕೇಳಿದಾಗ ಕೃಷ್ಣ ರಾಧೆಗೆ ಹೇಳುತ್ತಾನೆ “ನನ್ನ ಆತ್ಮ ನೀನು , ನಿನ್ನ ಆತ್ಮ ನಾನು ನಾವಿಬ್ಬರೂ ಎರಡು ದೇಹ ಒಂದೇ ಆತ್ಮ” ಆಗಿರುವಾಗ ವಿವಾಹ ಎನ್ನುವ ಬಾಹ್ಯ ಬಂಧನದ ಅವಶ್ಯಕತೆ ನಮಗಿಲ್ಲ ಎರಡು ಜೀವಗಳು ಒಂದೇ ಆದ ಮೇಲೆ ನನ್ನನ್ನು ನಾನೇ ಹೇಗೆ ವಿವಾಹವಾಗಲು ಸಾಧ್ಯ? ಎಂದು ಮಾಧುರ್ಯ ತುಂಬಿದ ಧ್ವನಿಯಲ್ಲೇ ಕೃಷ್ಣ ರಾಧೆಗೆ ಕೇಳುತ್ತಾನೆ. ಈ ಮಾತನ್ನು ಕೇಳಿ ರಾಧೇಯ ಅಂತರಂಗದ ಕಣ್ಣುಗಳು ತೆರೆದುಕೊಂಡವು ಕೃಷ್ಣ ಬೇರೆಯಲ್ಲ ರಾಧೆ ಬೇರೆಯಲ್ಲ. ಕೃಷ್ಣನನ್ನು ತಾನು ಅವನ ಮುಂದಿನ ಕರ್ತವ್ಯಕ್ಕಾಗಿ ಬಿಟ್ಟುಕೊಡಬೇಕು ಅದನ್ನು ಬಿಟ್ಟು ತನ್ನ ಸ್ವಾರ್ಥವನ್ನೇ ನೋಡಿಕೊಂಡು ಹಟ ಮಾಡಕೂಡದು ಎಂದು ಕಣ್ಣಿಂದ ಸುರಿಯುತ್ತಿದ್ದ ನೀರನ್ನು ಒರೆಸಿಕೊಂಡು ಮುಖದಲ್ಲಿ ಬಾರದ ನಗುವನ್ನು ತಂದುಕೊಂಡು ಸಂತೋಷದಿಂದ ಕೃಷ್ಣನನ್ನು ಕಳುಹಿಸಿಕೊಡುತ್ತಾಳೆ. ಕೃಷ್ಣ ಕೂಡ ಭಾರವಾದ ಹೃದಯದೊಂದಿಗೆ ತನ್ನ ಮೊದಲ ಪ್ರೀತಿಯನ್ನು ದೈಹಿಕವಾಗಿ ತೊರೆದು ಹೊರಟ ಕೃಷ್ಣ ಕಿನ್ನತೆ ಯಲ್ಲಿ ಬೀಳಲಿಲ್ಲ ಅದರ ಬದಲಿಗೆ ತನ್ನನ್ನು ತಾನು ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡ. ತನ್ನ ಪ್ರೇಮ ವೈಫಲ್ಯವೇ ತನ್ನ ಶಕ್ತಿಯನ್ನು ಆಗಿಸಿಕೊಂಡು ಸಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಸಕಲ ವಿದ್ಯೆಗಳನ್ನು ಅರೆದು ಕುಡಿದು ಎಂತಹ ಸಂದರ್ಭ ಬಂದರೂ ಕೂಡ ಅದನ್ನು ಎದುರಿಸುವ ಮಾನಸಿಕ ಸ್ಥೈರ್ಯವನ್ನು ಕೂಡ ಹೆಚ್ಚಿಸಿಕೊಂಡ. ಎಲ್ಲ ಬಂಧನಗಳ ಆಚೆ ತಾನಾಗಿಯೇ ಬೆಳೆಯತೊಡಗಿದ್ದ.
ಇದು ಗೋಪಬಾಲ ನೊಬ್ಬ ವಿಫಲತೆಯ ಪ್ರೇಮವನ್ನು ಮರೆತು ಸಾಧನೆಯ ದಾರಿಯನ್ನು ಹಿಡಿದ ಸ್ಪೂರ್ತಿದಾಯಕ ಕಥೆ. ಇವತ್ತು ಶ್ರೀಕೃಷ್ಣನಂತೆ ತನ್ನ ಮೊದಲ ಪ್ರೇಮದಲ್ಲಿ ವೈಫಲ್ಯವನ್ನು ಕಂಡರು ದೃತಿಗೆಡದೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ನಮ್ಮ ಮಧ್ಯೆ ಇದ್ದಾರೆ. ನಮ್ಮ ಪ್ರತಿಯೊಂದು ಹುಟ್ಟಿಗೂ ಕಾರಣ ಹಾಗೂ ಕರ್ತವ್ಯ ಇದ್ದೇ ಇರುತ್ತದೆ. ಬದುಕು ನಮಗೆ ದೇವರು ಕೊಟ್ಟ ವರ ಅಷ್ಟೇ ಆಗಿರದೆ ನಮ್ಮಿಂದ ಯಾವುದೇ ಒಂದು ಕರ್ತವ್ಯ ಆಗುವುದರ ಸಲುವಾಗಿ ದೇವರು ನಮ್ಮನ್ನು ಈ ಭೂಮಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಜೀವನದ ವೈಫಲ್ಯಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸಿದರೆ ನಾವು ಆಕಾಶದಷ್ಟು ಎತ್ತರಕ್ಕೆ ಬೆಳೆಯಬಹುದು.