ದೇಶದಲ್ಲಿ ಮೊದಲ ಬಾರಿಗೆ ಏರ್ ಆ್ಯಂಬುಲೆನ್ಸ್ ಪರಿಚಯಿಸಲಾಗಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಜಕ್ಕೂರಿನ ಏರೋ ಡ್ರಮ್ ನಲ್ಲಿ ಅತ್ಯಾಧುನಿಕ ಎರಡು ಏರ್ ಆ್ಯಂಬುಲೆನ್ಸ್ ಮುಖ್ಯಮಂತ್ರಿಯವರು ಚಾಲನೆ ನೀಡಿದರು. ಐಕ್ಯಾಟ್ ಮತ್ತು ಕ್ಯಾತಿ ಕಂಪನಿಯ ಸಹಯೋಗದೊಂದಿಗೆ ಚಾಲನೆ ನೀಡಿದರು. ಇದರ ವಿಶೇಷತೆಯೆಂದರೆ ಇದರಲ್ಲಿ ಆಕ್ಸಿಜನ್, ವೆಂಟಿಲೇಟರ್ ಮತ್ತು ಐ.ಸಿ.ಯು ವ್ಯವಸ್ಥೆ ಇದೆ. ಬೇರೆ ದೇಶಗಳಲ್ಲಿ ಮಾತ್ರ ಸಿಗುವ ಮೆಡಿಕಲ್ ಟ್ರೇನಿಂಗ್ ಪಡೆದ ಡಾಕ್ಟರ್ ಸಿಗುತ್ತಾರೆ. ಇದರ ಮೂಲಕ ಗುಡ್ಡಗಾಡು ಪ್ರದೇಶಗಳಿಗೂ ಇದರ ಸೇವೆಯನ್ನು ತಲುಪಿಸಬಹುದು. ಹೆಲಿಕಾಪ್ಟರ್ ಏರ್ ಪೋರ್ಟ್ ಇಲ್ಲದೆ ಇರುವ ಜಾಗಗಳಿಗೆ ಹೋಗಬಹುದು. ಪ್ಲೇನ್ ಗಳಿಂದ ದೂರದವರೆಗೆ ಅಂದರೆ ಏರ್ ಪೋರ್ಟ್ ನಿಂದ ಏರ್ ಪೋರ್ಟ್ ವರೆಗೆ ಹೋಗಬಹುದಾಗಿದೆ.
ಈ ಆ್ಯಂಬುಲೆನ್ಸ್ ಗಳಲ್ಲಿ ಐಸೋಲೇಶನ್ ಪೋರ್ಡ್ ಇರುವುದರಿಂದ ಕೆಲಸ ಮಾಡುವ ಪೈಲೆಟ್ಸ್ ಇತರೆ ಮೆಡಿಕಲ್ ಸ್ಟಾಪ್ ಇವರನ್ನು ಕೊರೋನಾದಿಂದ ರಕ್ಷಣೆ ಮಾಡಲು ಐಸೋಲೇಶನ್ ಪೋರ್ಡ್ ಸಹಕಾರಿಯಾಗಿದೆ. ಈ ಆ್ಯಂಬುಲೆನ್ಸ್ ಸೇವೆ ಬೇಕಾದರೆ ಆಫೀಸ್ ನ ಪೋನ್ ನಂಬರ್ ಕೊಡಲಾಗುತ್ತದೆ. ಮತ್ತು ಬೆಂಗಳೂರಿನಲ್ಲೆ ಇರುವ ಕಾರಣ ಕಡಿಮೆ ಖರ್ಚಿನಲ್ಲಿ ಪೇಷಂಟ್ ಗಳನ್ನು ಕರೆದೊಯ್ಯುತ್ತಾರೆ.
ನವಜಾತ ಶಿಶುಗಳಿಗೆ ಇನ್ ಕ್ಯುಬೇಟರ್ ವ್ಯವಸ್ಥೆಯನ್ನು ಹೊಂದಿದೆ. ಈ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಿರುವ ಉದ್ದೇಶವೆಂದರೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ತಲುಪಬೇಕು. ಮನುಷ್ಯನ ಜೀವ ಅಮೂಲ್ಯವಾದದ್ದು. ಶ್ರೀಮಂತರು ಬಡವರು ಎನ್ನದೆ ಎಲ್ಲರಿಗೂ ಈ ಸೇವೆ ಲಭ್ಯವಿದೆ. ಈ ಏರ್ ಆ್ಯಂಬುಲೆನ್ಸ್ ಗಳಲ್ಲಿ ಚಾಪರ್ ಸರ್ವಿಸ್ ಇದೆ, ಪ್ಲೇನ್ ಸರ್ವಿಸ್ ಇದೆ ಒಂದೇ ಆ್ಯಂಬುಲೆನ್ಸ್ ನಲ್ಲಿ ಈ ಎಲ್ಲ ಸರ್ವಿಸ್ ಇರುವುದರಿಂದ ಈ ರೀತಿಯ ಆ್ಯಂಬುಲೆನ್ಸ್ ಇದೆ ಮೊದಲ ಬಾರಿಗೆ ನೋಡಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿಯೂ ಸೇವೆ ಒದಗಿಸುವ ನಿಟ್ಟಿನಲ್ಲಿ ಪರಿಚಯಿಸಿರುವುದರಿಂದ ಕಡಿಮೆ ಜಾಗದಲ್ಲಿ ಇದು ಲ್ಯಾಂಡ್ ಆಗುತ್ತದೆ. ನಮ್ಮ ದೇಶದ ಮೊದಲ ಏರ್ ಆ್ಯಂಬುಲೆನ್ಸ್ ಬಗ್ಗೆ ಹೆಚ್ಚಿನ ಜನರಿಗೆ ಈ ಮಾಹಿತಿ ತಿಳಿಸಿ.