ಯಾವುದೇ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಾ ಇದ್ದರೆ ಅದಕ್ಕೆ ನೆನಪಿನ ಶಕ್ತಿ ಅತೀ ಮುಖ್ಯವಾಗಿರುತ್ತದೆ. ಮರೆವು ಅಥವಾ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆ ಎನ್ನುವುದು ಸಾಮಾನ್ಯವಾಗಿ ಎಲ್ಲದರಲ್ಲಿಯೂ ಎಲ್ಲ ವಯಸ್ಸಿನಲ್ಲಿಯೂ ಕಂಡುಬರುವಂತಹ ಸಮಸ್ಯೆಯಾಗಿದೆ. ಅದರಲ್ಲಿಯೂ ಹೆಚ್ಚಾಗಿ ಮರೆವು ಎನ್ನುವುದು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಮರೆವಿನ ಸಮಸ್ಯೆ ಅಪಾಯಕಾರಿ ಎನ್ನಬಹುದು. ಮರೆವಿನ ಸಮಸ್ಯೆ ಲಕ್ಷಣಗಳು ಏನು? ಮರೆವಿನ ಸಮಸ್ಯೆಗೆ ಕಾರಣವೇನು? ಹಾಗೂ ಮರೆವಿನ ಸಮಸ್ಯೆಗೆ ಆಯುರ್ವೇದದಲ್ಲಿ ಯಾವ ರೀತಿಯ ಸೂಕ್ತವಾದ ಚಿಕಿತ್ಸೆ ಇದೆ? ಎನ್ನುವುದನ್ನು ಆಯುರ್ವೇದ ವೈದ್ಯರಿಂದ ತಿಳಿದುಕೊಳ್ಳೋಣ.
ನೆನಪಿನ ಶಕ್ತಿಯಲ್ಲಿ ಮುಖ್ಯವಾಗಿ ಒಂದು ಶಾರ್ಟ್ ಟೈಮ್ ಮೆಮೊರಿ ಹಾಗೂ ಲಾಂಗ್ ಟೈಮ್ ಮೆಮೊರಿ ಎಂದು ಎರಡು ವಿಧ. ಒಬ್ಬ ವ್ಯಕ್ತಿ ಏನನ್ನಾದರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರೆ ಅದನ್ನು ಒಂದೆರಡು ಬಾರಿ ಮನನ ಮಾಡಿಕೊಳ್ಳಬೇಕು ಹಾಗಿದ್ದಾಗ ಮಾತ್ರ ಆ ವಿಷಯ ವ್ಯಕ್ತಿಯಲ್ಲಿ ಬಹಳ ದಿನಗಳ ಕಾಲ ಇರುತ್ತದೆ. ಮನುಷ್ಯನ ಜೀವನದಲ್ಲಿ ಬಾಲ್ಯವಸ್ಥೆ ಮಧ್ಯಮಾವಸ್ಥೆ ಹಾಗೂ ವೃದ್ಧ ಅವಸ್ಥೆ ಎಂದು ಮೂರು ಅವಸ್ಥೆಗಳು ಇರುತ್ತದೆ. ಈ ಮೂರು ಅವಸ್ಥೆಗಳಲ್ಲಿ ಮನುಷ್ಯನಿಗೆ ಬಾಲ್ಯಾವಸ್ಥೆಯಲ್ಲಿ ನೆನಪಿನ ಶಕ್ತಿ ಅತಿ ಮುಖ್ಯವಾಗಿ ಇರುತ್ತದೆ. ನೆನಪಿನ ಶಕ್ತಿ ಹೆಚ್ಚಾಗಿ ಇದ್ದಾಗ ಬಾಲ್ಯಾವಸ್ಥೆಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ತೆಗೆದುಕೊಳ್ಳಲು ಸಾಧ್ಯ. ಇನ್ನು ಮಧ್ಯಮಾವಸ್ಥೆಯಲ್ಲಿ ಓಡಿರುವುದನ್ನ ಆಯಾ ವಿಭಾಗಗಳಿಗೆ ಅನುಗುಣವಾಗಿ ಅದನ್ನು ಕಾರ್ಯ ರೂಪಕ್ಕೆ ತರಬೇಕು ಹಾಗಿದ್ದಾಗ ನೆನಪಿನ ಶಕ್ತಿ ಅತೀ ಅಗತ್ಯವಾಗಿರುತ್ತದೆ. ಇನ್ನು ವೃದ್ಧಾವಸ್ಥೆಯಲ್ಲಿ ಕೆಲವು ಹಿರಿಯ ನಾಗರಿಕರಿಗೆ ಅಲ್ಸುಮಸ್ ಡಿಸೀಸ್ ಎಂಬ ಮರೆವಿನ ಕಾಯಿಲೆ ಉಂಟಾಗುತ್ತದೆ. ಅವರು ಯಾವಾಗಲೂ ತಮ್ಮ ಜೇಬಿನಲ್ಲಿ ಮನೆಯ ವಿಲಾಸ , ಮೊಬೈಲ್ ನಂಬರನ್ನು ಚೀಟಿಯಲ್ಲಿ ಬರೆದು ಇಟ್ಟುಕೊಳ್ಳುತ್ತಾರೆ. ಹಾಗಾಗಿ ವೃದ್ಧಾವಸ್ಥೆಯಲ್ಲಿ ಕೂಡಾ ನೆನಪಿನ ಶಕ್ತಿ ಅವಶ್ಯವಾಗಿ ಇರುತ್ತದೆ.
ಈಗ ಮೊದಲು ಯಾವ ಯಾವ ಕಾರಣಗಳಿಗೆ ನಮಗೆ ಮರೆವಿನ ಶಕ್ತಿ ಬರುತ್ತದೆ ಎಂದು ನೋಡೋಣ. ನೆನಪಿನ ಶಕ್ತಿ ಬರಲು ಮುಖ್ಯವಾಗಿ ಮೊದಲನೇ ಕಾರಣ ನೋಡುವುದಾದರೆ ಅತಿಯಾದ ಮೊಬೈಲ್ ಬಳಕೆ, ಸರಿಯಾಗಿ ನಿದ್ರೆ ಇಲ್ಲದೆ ಇರುವುದು ಹಾಗೂ ಮೂರನೆಯದಾಗಿ ಕೆಟ್ಟ ಚಟಗಳು ಧೂಮಪಾನ ಮದ್ಯಪಾನ ಮಾಡುವುದು ಜಂಕ್ ಫುಡ್ ಗಳ ಸೇವನೆ ಇದರಿಂದಾಗಿ ಕೂಡ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನಾದರೂ ಒಂದು ಗುರಿಯನ್ನು ಇಟ್ಟುಕೊಂಡು ಗುರಿ ಸಾಧಿಸಲು ಹೊರಟಾಗ ನೆನಪಿನ ಶಕ್ತಿ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ನೆನಪಿನ ಶಕ್ತಿ ಇಲ್ಲದೆ ಹೋದರೆ ಮನುಷ್ಯ ತನ್ನ ಗುರಿಯನ್ನು ಸಾಧಿಸಲಾರ. ನೆನಪಿನ ಶಕ್ತಿ ಕಡಿಮೆಯಾಗಲು ಇವು ಕಾರಣಗಳಾದರೆ ನೆನಪಿನ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ನಾವು ಕೆಲವೊಂದಿಷ್ಟು ಆಹಾರಗಳನ್ನು ಸೇವಿಸುವುದರ ಮೂಲಕ ಹೆಚ್ಚಿಸಿಕೊಳ್ಳಬಹುದು ಆಹಾರಗಳು ಯಾವುದು ಅಂತ ನೋಡೋಣ. ರಾತ್ರಿ ಎಂಟರಿಂದ 10 ಬಾದಾಮಿ ನೆನೆಸಿಟ್ಟು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ತಿನ್ನಬಹುದು ಅಥವಾ ಬಾದಾಮಿಯ ಬದಲಿಗೆ ಶೇಂಗಾವನ್ನು ಕೂಡ ಬಳಕೆ ಮಾಡಬಹುದು. ಈ ಮೂಲಕ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ವಾಲ್ನಟ್ ಸೇವಿಸಬೇಕು. ನಮ್ಮ ದಿನನಿತ್ಯದ ಆಹಾರದಲ್ಲಿ ಶುದ್ಧ ಹಸುವಿನ ತುಪ್ಪವನ್ನು ಬಳಕೆ ಮಾಡಬೇಕು. ತರಕಾರಿ ಸೊಪ್ಪುಗಳನ್ನು ಸೇವಿಸಬೇಕು. ಟೀ ಕಾಫಿ ಸೇವನೆ ಕಡಿಮೆ ಮಾಡಿ ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ನೀರನ್ನು ಕುಡಿಯಬೇಕು. ಇನ್ನು ಚಿಕ್ಕಮಕ್ಕಳಿಗೆ ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಓದಿಕೊಳ್ಳುವುದರಿಂದ ಹೆಚ್ಚು ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ಹೆಚ್ಚಿನ ವ್ಯಾಯಾಮವನ್ನು ಮಾಡಬೇಕು ಅಂದರೆ ದಿನದಲ್ಲಿ 35ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಹಾಗೂ ನಮ್ಮ ದೇಹಕ್ಕೆ ಬೇಕಾಗಿರುವಂತಹ ಪ್ರೋಟೀನ್ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು.
ಮನೆ ಮದ್ದಿನ ಮೂಲಕ ನಾವು ನಮ್ಮ ನೆನೆಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದದಲ್ಲಿ ಇರುವ ಮನೆ ಮದ್ದು ಯಾವುದು ಮತ್ತು ಹೇಗೆ ಮಾಡುವುದು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ನೋಡೋಣ. ಈ ಮನೆಮದ್ದನ್ನು ಮಾಡಲು ಮುಖ್ಯವಾಗಿ ಬೇಕಾಗಿರುವುದು ಎಂಟರಿಂದ ಹತ್ತು ಒಂದೆಲಗದ ಎಲೆ, ಬಸಳೆ ಸೊಪ್ಪು ಹಾಲು ಹಾಗೂ ಜೇನುತುಪ್ಪ. ಒಂದೆಲಗದ ಎಲೆ ಮತ್ತು ಬಸಳೆ ಸೊಪ್ಪನ್ನು ಚೆನ್ನಾಗಿ ನುಣ್ಣಗೆ ಕುಟ್ಟಿಕೊಳ್ಳಬೇಕು. ಎರಡು ಸೊಪ್ಪಿನ ರಸವನ್ನು ಎರಡು ಚಮಚದಷ್ಟು ರಸವನ್ನು ತೆಗೆದುಕೊಂಡು ಅದನ್ನು ಉಗುರುಬೆಚ್ಚಗಿನ ಹಾಲಿಗೆ ಬೆರೆಸಿ ಅದಕ್ಕೆ ಅರ್ಧ ಅಥವಾ ಒಂದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು ಇದನ್ನು ನಿಯಮಿತವಾಗಿ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಮಾಡುತ್ತಾ ಬಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ. ಸಕ್ಕರೆ ಕಾಯಿಲೆ ಇರುವವರು ಜೇನುತುಪ್ಪವನ್ನು ಬಳಸದಿರುವುದು ಒಳ್ಳೆಯದು. ಈ ಮನೆಮದ್ದು ನ ಮಾಡಿಕೊಳ್ಳುವ ಮೂಲಕ ನಾವು ಯಾವುದೇ ಅಡ್ಡ ಪರಿಣಾಮವಿಲ್ಲದ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.