ಈ ಲೇಖನದಲ್ಲಿ ನಾವು ಮೂರು ಎಲೆಗಳನ್ನು ಹೊಂದಿರುವ ಶಂಕಪುಷ್ಪ ಹೂವಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ದೇವರ ಪೂಜೆಗೆ ಬಳಕೆ ಮಾಡುವ ಶಂಕಪುಶ್ಪ ಹೂವು ಬಳ್ಳಿಗಳಲ್ಲಿ ಆಗುತ್ತದೆ. ಇದು ಮೂರು ಎಲೆಗಳನ್ನು ಹೊಂದಿರುವ ಸಂಯುಕ್ತ ಎಲೆ. ಇದರ ವೈಜ್ಞಾನಿಕ ಹೆಸರು ಟಿಟೋರಿಯಾ ಟರ್ಮಿನೇಟರ್ ಎಂದು ಹೇಳುತ್ತಾರೆ. ಶಂಕಪುಷ್ಪ ಹೂವು ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ನಮಗೆ ಕಾಣಸಿಗುತ್ತವೆ. ಇದು ಹೆಸರೇ ಹೇಳುವಂತೆ ಶಂಕದ ಆಕಾರದಲ್ಲಿ ಇರುತ್ತದೆ. ಶಂಕಪುಷ್ಪ ಹೂವಿಗೆ ಗಿರಿಕರ್ಣಿಕೆ ಎಂದೂ ಕೂಡಾ ಕರೆಯುತ್ತಾರೆ. ಕಿವಿಯ ಆಕಾರವನ್ನು ಕೂಡಾ ಹೋಲುವುದರಿಂದ ಗಿರಿಕರ್ಣಿಕೆ ಎಂದೂ ಕೂಡಾ ಕರೆಯುತ್ತಾರೆ. ಬೀಜದಿಂದ ಕೂಡಾ ಈ ಗಿಡದ ವಂಶಾಭಿವೃದ್ಧಿ ನಡೆಯುತ್ತದೆ. ಇದೊಂದು ಬಹುವಾರ್ಷಿಕ ಗಿಡವಾಗಿದೆ. ಇನ್ನು ಈ ಶಂಕ ಪುಷ್ಪ ಹೂವಿನ ಗಿಡದ / ಬಳ್ಳಿಯ ಪ್ರಯೋಜನಗಳು ಅಥವಾ ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ಯಾವ ಲಾಭಗಳಿವೆ ಅಂತಾ ನೋಡುವುದಾದರೆ, ಜಲೋಧರ ರೋಗಗಳು ಅಂದರೆ , ಹೊಟ್ಟೆಯಲ್ಲಿ ಅತಿಯಾಗಿ ನೀರು ಸೇರಿಕೊಂಡಿದ್ದರೆ ಶಂಕ ಪುಷ್ಪ ದ ಔಷಧಿಯನ್ನು ತೆಗೆದುಕೊಂಡರೆ ಜಲೋಧರ ಸಮಸ್ಯೆ ಬಹಳ ಬೇಗ ನಿವಾರಣೆ ಆಗುತ್ತದೆ.
ಯಾರಿಗೆ ಸರಿಯಾಗಿ ಬೇಧಿ ಆಗುತ್ತಾ ಇಲ್ಲವೋ ಅವರು ಈ ಶಂಕ ಪುಷ್ಪ ಹೂವಿನ ಬೇರನ್ನು ಕಷಾಯ ಮಾಡಿಕೊಂಡು ಕುಡಿಯುವುದರಿಂದ ಅಥವಾ, ಹಸಿಯಾಗಿ ಇದರ ರಸ ತೆಗೆದುಕೊಂಡು ಕುಡಿಯುವುದರಿಂದ ಬೇಧಿ ಸರಿಯಾಗಿ ಆಗುತ್ತದೆ. ಶಂಕ ಪುಷ್ಪ ಹೂವಿನ ರಸವನ್ನು ಒಂದೆರಡು ಹನಿ ಮೂಗಿಗೆ ಹಾಕುವುದರಿಂದ ಅರ್ಧ ತಲೆನೋವು ಇದ್ದರೆ ಕಡಿಮೆ ಆಗುವುದು. ಇನ್ನು ಶಂಕ ಪುಷ್ಪ ಹೂವಿನ ಬೇರಿನ ಕಷಾಯ ತಯಾರಿಸಿ ಅದಕ್ಕೆ ಸ್ವಲ್ಪ ಹಸಿ ಶುಂಠಿ ರಸವನ್ನು ಸೇರಿಸುವುದರಿಂದ ನಮ್ಮ ದೇಹದಲ್ಲಿ ಬರುವಂತಹ ಬೆವರಿನ ದುರ್ಗಂಧ ಕಡಿಮೆ ಆಗುವುದು . ಈಗೆಲ್ಲಾ ಅಂಗಡಿಗಳಲ್ಲಿ ಶಂಕಪುಷ್ಟಿ ಸಿರಪ್ ಎಂದು ಶಂಕ ಪುಷ್ಪ ಹೂವಿನ ಔಷಧಿ ಸಿಗುತ್ತದೆ ಇದನ್ನು ಒಂದೆರಡು ಚಮಚ ಹಾಕಿ ಇದಕ್ಕೆ ಸ್ವಲ್ಪ ನೀರು ಬೆರೆಸಿ ಮಕ್ಕಳಿಗೆ ನೀಡುವುದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಇದು ಉತ್ತಮ ಸಹಾಯಕಾರಿ ಆಗಿದೆ. ಇವು ಶಂಕ ಪುಷ್ಪ ಹೂವಿನ ಪ್ರಯೋಜನಗಳು.