ನಿಮ್ಮ ಮನೆಯಂಗಳದಲ್ಲಿ ಅಥವಾ ಸುತ್ತಮುತ್ತಲ ಎಲ್ಲಾದರೂ ನುಗ್ಗೆ ಗಿಡ ಇದ್ದರೆ ಇದು ಒಂದು ಓರ್ವ ಪರೋಕ್ಷ ವೃದ್ಧ ಇದ್ದ ಹಾಗೆಯೇ ಎಂದು ನಮ್ಮ ಹಿರಿಯರು ಹೇಳುತ್ತಾರೆ ನುಗ್ಗೆ ಮರದ ಎಲೆ ಹೂವು ಕಾಯಿ ಪ್ರತಿಯೊಂದು ಕೂಡ ಔಷಧೀಯ ಗುಣಗಳನ್ನು ಹೊಂದಿವೆ. ನುಗ್ಗೆ ಗಿಡದ ಎಲೆಗಳಿಂದ ನಾವು ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ನಾವು ಈ ಲೇಖನದ ಮೂಲಕ ನುಗ್ಗೆಸೊಪ್ಪಿನ ಹಲವು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ನುಗ್ಗೆ ಗಿಡದ ಎಲೆಗಳ ಸೇವನೆಯಿಂದ ತ್ವಚೆ ಕೋಮಲವಾಗುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ. ತೆಂಗಿನ ಮರದ ಹಾಗೆ ನುಗ್ಗೆ ಗಿಡವು ಕೂಡ ಇದರ ಪ್ರತಿಯೊಂದು ಭಾಗವು ಔಷಧೀಯ ಗುಣಗಳನ್ನು ಹೊಂದಿದ್ದು ಪ್ರಯೋಜನಕಾರಿಯಾಗಿದೆ. ಮಧುಮೇಹಿಗಳಿಗೆ ನುಗ್ಗೆಸೊಪ್ಪು ಉತ್ತಮ ಪರಿಹಾರವಾಗಿದೆ. ಅಜೀರ್ಣ ಹಾಗೂ ಹೊಟ್ಟೆ ನೋವಿಗೆ ನುಗ್ಗೆ ಗಿಡದ ಸೊಪ್ಪು ಪರಿಹಾರವನ್ನು ಒದಗಿಸುತ್ತದೆ. ನುಗ್ಗೆ ಮರದ ತೊಗಟೆ ಹಲ್ಲುಗಳನ್ನು ಗಟ್ಟಿಗೊಳಿಸಿದರೆ , ಇದರಲ್ಲಿರುವ ವಿಟಮಿನ್ ಗಳು ಮತ್ತು ಪ್ರೋಟೀನುಗಳ ಹಲವು ಪ್ರೀತಿಯ ಪೋಷಣೆಯನ್ನು ಒದಗಿಸುತ್ತದೆ. ನಮ್ಮ ದೇಹದಲ್ಲಿ ನಮ್ಮ ದೇಹಕ್ಕೆ ಉಂಟಾಗುವಂತಹ ವೈರಾಣುಗಳ ಅಥವಾ ಬ್ಯಾಕ್ಟೀರಿಯಾಗಳ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿ ತುಂಬಾ ಮುಖ್ಯವಾಗಿರುತ್ತದೆ. ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನುಗ್ಗೆ ಸೊಪ್ಪಿನಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಿ ದಿನಕ್ಕೆರಡು ಬಾರಿಯಂತೆ ಸತತವಾಗಿ ನಾಲ್ಕು ವಾರಗಳ ಕಾಲ ಸೇವಿಸುವುದರಿಂದ ನಾವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನುಗ್ಗೆ ಎಲೆಯಲ್ಲಿ ಸಕ್ಕರೆ ಅಂಶ ಸ್ವಲ್ಪವೂ ಇಲ್ಲದೆ ಇರುವುದರಿಂದ ಮಧುಮೇಹಿಗಳು ಕೂಡ ಯಾವುದೇ ಅಂಜಿಕೆಯಿಲ್ಲದೆ ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿ ಸೇವಿಸಬಹುದು. ನುಗ್ಗೆಸೊಪ್ಪು ಸಿಗುವಷ್ಟು ದಿನಗಳಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಇಷ್ಟೇ ಅಲ್ಲದೆ ಒಂದು ಮುಷ್ಟಿಯಷ್ಟು ನುಗ್ಗೆ ಸೊಪ್ಪನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಆ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
ನುಗ್ಗೆ ಎಲೆಗಳಲ್ಲಿ ಕ್ಯಾಲ್ಸಿಯಂ ಹಾಗೂ ಇನ್ನಿತರ ಪೋಷಕಾಂಶಗಳು ಹೇರಳವಾಗಿರುವುದರಿಂದ ಮೂಳೆಗಳನ್ನು ಬಲಗೊಳಿಸಲು ಸಹಕಾರಿಯಾಗಿದೆ. ನುಗ್ಗೆ ಸೊಪ್ಪು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೂಡ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪು ಉತ್ತಮ ಕಾಮೋತ್ತೇಜಕ ವಾಗಿದ್ದು ನೈಸರ್ಗಿಕವಾಗಿ ನಪುಂಸಕತ್ವ ವನ್ನು ಇಲ್ಲವಾಗಿಸುತ್ತದೆ. ನುಗ್ಗೆ ಎಲೆಗಳಲ್ಲಿ ಉತ್ತಮವಾಗಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ನುಗ್ಗೆ ಎಲೆಗಳಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಹಾಗೂ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಕೂಡ ಸಮರ್ಪಕವಾಗಿ ಸಹಾಯಕವಾಗಿರುತ್ತದೆ. ನುಗ್ಗೆ ಎಲೆಯ ರಸವನ್ನು ಸ್ವಲ್ಪ ಜೇನುತುಪ್ಪ ಹಾಗೂ ನೀರಿನ ಜೊತೆ ಬೆರೆಸಿ ಕುಡಿಯುವುದರಿಂದ ಅತಿಸಾರವನ್ನು ತಕ್ಷಣವೇ ನಿಲ್ಲಿಸಬಹುದು. ನುಗ್ಗೆಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕರಗದ ನಾರು ಹಾಗೂ ಕ್ಲೋರೋ ಜೆನಿಕ ಎಂಬ ಆಂಟಿಆಕ್ಸಿಡೆಂಟ್ ಅಂಶವಿದ್ದು ಇದು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯಕವಾಗಿರುತ್ತದೆ. ಈ ಮೂಲಕ ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಕೂಡ ಸಹಾಯಕಾರಿಯಾಗಿದೆ. ನುಗ್ಗೆ ಎಲೆಯಲ್ಲಿ ಇರುವಂತಹ ಹಲವಾರು ಪೋಷಕಾಂಶಗಳು ಚರ್ಮದ ಮೇಲೆ ಮೊಡವೆ ಗಳನ್ನು ಕಡಿಮೆ ಮಾಡಲು ಸಹಾಯಕಾರಿಯಾಗುತ್ತದೆ. ಚರ್ಮದೊಳಗಿನ ಕೀವು ತುಂಬಿಕೊಳ್ಳುವುದನ್ನು ಕೂಡ ಕಡಿಮೆ ಮಾಡುತ್ತದೆ.
ನುಗ್ಗೆ ಎಲೆಗಳಲ್ಲಿ ಸರಿಸುಮಾರು ಹದಿನೆಂಟು ಬಗೆಯ ಅಮೈನೋ ಆಮ್ಲಗಳು ಇದ್ದು, ಇವು ದೇಹದ ಜೀವರಾಸಾಯನಿಕ ಕ್ರಿಯೆಯ ಮೂಲಗಳಾಗಿವೆ. ಇವು ನಮ್ಮನ್ನು ನಿದ್ರಾಹೀನತೆಯನ್ನು ದೂರ ಮಾಡುತ್ತವೆ. ದಿನನಿತ್ಯದ ಅಡುಗೆಯಲ್ಲಿ ನುಗ್ಗೆ ಸೊಪ್ಪನ್ನು ಬಳಸುವುದರಿಂದ ಇದು ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯಕಾರಿಯಾಗಿದೆ. ನುಗ್ಗೆ ಎಲೆಯಲ್ಲಿರುವ ವಿಟಮಿನ್-ಸಿ ಅಂಶ ನಮ್ಮ ದೇಹದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಮೆದುಳಿನ ಬೆಳವಣಿಗೆಗೆ ಕೂಡ ಸಹಾಯಕಾರಿಯಾಗಿದೆ ಹಾಗೆ ವಿಟಮಿನ್ ಮೆದುಳಿನ ಜೀವಕೋಶಗಳ ಸವೆತವನ್ನು ತಡೆದು ಮರೆಗುಳಿತನ ಬರದಂತೆ ನೋಡಿಕೊಳ್ಳುತ್ತದೆ. ನುಗ್ಗೆ ಎಲೆಯಲ್ಲಿ ಇರುವಂತಹ ಉಪಯುಕ್ತ ಕರಿ ಪೋಷಕಾಂಶಗಳು ಹೆಚ್ಚಿನ ಕೊಲೆಸ್ಟ್ರಾಲನ್ನು ನಮ್ಮ ದೇಹ ಹೀರಿಕೊಳ್ಳದಂತೆ ನೋಡಿಕೊಂಡು ಕೊಬ್ಬು ನಮ್ಮ ದೇಹದಲ್ಲಿ ಸಂಗ್ರಹವಾಗದಂತೆ ದೇಹದ ಕೊಬ್ಬನ್ನು ಇಳಿಸಿಕೊಳ್ಳಲು ಸಹಾಯಕಾರಿಯಾಗುತ್ತದೆ. ಈ ಮೂಲಕ ರಕ್ತದಲ್ಲಿ ಶೇಖರಣೆಯಾಗಿರುವ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ. ನುಗ್ಗೆ ಸೊಪ್ಪಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ಹಾಗೂ ಫ್ಲೇವನಾಯ್ಡ್ ಗಳು ಹೆಣ್ಣುಮಕ್ಕಳಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವಂತಹ ಕೆಳ ಹೊಟ್ಟೆ ನೋವು ಹಾಗೂ ಮೂತ್ರಕೋಶಗಳ ಉರಿಯನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಇಷ್ಟೊಂದು ಪ್ರಯೋಜನಗಳನ್ನು ನಾವು ನುಗ್ಗೆ ಸೊಪ್ಪಿನಿಂದ ಪಡೆದುಕೊಳ್ಳಬಹುದು.