ಕೀಲುನೋವು ಮೊಣಕಾಲು ನೋವು ಬಂದರೆ ಅದನ್ನು ಯಾರಿಗೂ ಹೇಳಿಕೊಳ್ಳಲು ಆಗದಂತಹ ನೋವನ್ನು ಅನುಭವಿಸಬೇಕಾಗುವುದು. ಸರಿಯಾಗಿ ನಡೆಯಲು ಆಗದೇ ಕುಳಿತುಕೊಳ್ಳಲು ಆಗದೇ ಬಹಳ ಕಷ್ಟ ಪಡುತ್ತಾರೆ. ಆದರೆ ನಮಗೆ ನಮ್ಮ ಶರೀರದಲ್ಲಿ ಇರುವಂತಹ ವಾತ ದೋಷದ ಮೂಲವಾಗಿ ಈ ಕೀಲು ನೋವು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯ ಸಮಸ್ಯೆಯಿಂದಾಗಿ ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತ ಇದ್ದಾರೆ. ಮಲಬದ್ಧತೆ ಸರಿಯಾಗಿ ಆಗದೇ ಇದ್ದಲ್ಲಿ ಹೊಟ್ಟೆಯಲ್ಲಿಯೇ ಉಳಿದುಕೊಂಡ ವಿಷ ಪದಾರ್ಥಗಳು ಮತ್ತೆ ರಕ್ತ ಪ್ರಸರಣ ವ್ಯವಸ್ಥೆಗೆ ಬರುತ್ತದೆ. ಹೀಗೆ ಅತಿಯಾಗಿ ಆದಾಗ ಇದರಿಂದ ಮೂತ್ರ ಪಿಂಡಗಳು ಸುಲಭವಾಗಿ ಸೊಸಲು ಆಗುವುದಿಲ್ಲ. ಇದರ ಪರಿಣಾಮವಾಗಿ ಯೂರಿಕ್ ನಂತಹ ವಿಷಕಾರಿ ಪದಾರ್ಥಗಳು ನಮ್ಮ ಕೀಲುಗಳಲ್ಲಿ ಸೇರಿಕೊಂಡು ಕೆಲವು ಕೀಲುಗಳಲ್ಲಿ ನೋವುಂಟಾಗಿ ನೋವು ಕಾಣಿಸಿಕೊಳ್ಳುವುದಕ್ಕೆ ಇದು ಮುಖ್ಯವಾಗಿ ಕಾರಣವಾಗಿರುತ್ತದೆ. ಹಾಗಾಗಿ ನಾವು ನಮ್ಮ ಕೀಲು ನೋವು ಕಡಿಮೆ ಮಾಡಿಕೊಳ್ಳಬೇಕಿದ್ದಲ್ಲಿ ನಮ್ಮ ಆಹಾರದಲ್ಲಿ, ನಮ್ಮ ಜೀವನಶೈಲಿಯಲ್ಲಿ ಕೆಲವೊಂದಿಷ್ಟು ವ್ಯತ್ಯಾಸಗಳನ್ನು ಮಾಡಿಕೊಳ್ಳಲೇ ಬೇಕಾಗಿರುತ್ತದೆ. ನಮ್ಮ ಕೀಲುನೋವು ಹಾಗೂ ಕೀಲು ಊತವನ್ನು ಕಡಿಮೆ ಮಾಡಿಕೊಳ್ಳುವುದರ ಸಲುವಾಗಿ ನಾವು ಈ ಲೇಖನದ ಮೂಲಕ ಒಂದು ಸುಲಭವಾದ ಆಯುರ್ವೇದ ಮನೆಮದ್ದನ್ನು ತಿಳಿದುಕೊಳ್ಳೋಣ.
ಈ ಒಂದು ಮನೆಮದ್ದನ್ನು ಉಪಯೋಗಿಸುವುದರಿಂದ, ಸುಲಭವಾಗಿ ಮಂಡಿನೋವು ಕೀಲುನೋವು ಮೊಣಕೈ ನೋವು ಅವುಗಳನ್ನು ಸುಲಭವಾಗಿ ಶಮನ ಮಾಡಿಕೊಳ್ಳಬಹುದು. ಈ ಮನೆಮದ್ದನ್ನು ಹೇಗೆ ತಯಾರಿಸುವುದು ಹಾಗೂ ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ನೋಡೋಣ. ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಆ ಪಾತ್ರೆಗೆ ಒಂದುವರೆ ಲೋಟದಷ್ಟು ನೀರನ್ನು ಹಾಕಬೇಕು. ಇದಕ್ಕೆ ಒಂದು ಟೀ ಸ್ಪೂನ್ ನಷ್ಟು ಓಂಕಾಳು ಅಥವಾ ಅಜವಾನವನ್ನು ಹಾಕಬೇಕು. ನಂತರ ಒಂದು ಪಲಾವ್ ಎಲೆಯನ್ನೂ ಚೂರು ಮಾಡಿ ಹಾಕಬೇಕು. ಪಲಾವ್ ಎಲೆ ನಮ್ಮ ಅಡುಗೆಯಲ್ಲಿ ಉತ್ತಮ ರುಚಿಯನ್ನು ಕೊಡುವುದು ಮಾತ್ರವಲ್ಲದೆ ನಮ್ಮ ದೇಹದಲ್ಲಿ ಇರುವಂತಹ ಟಾಕ್ಸನ್ಸ್ ವಿಷಪದಾರ್ಥಗಳನ್ನು ಹೊರಹಾಕಲು ತುಂಬಾ ಸಹಾಯಕಾರಿ ಆಗಿರುತ್ತದೆ. ವಿಟಮಿನ್-ಸಿ ಇದರಲ್ಲಿ ಹೆಚ್ಚಾಗಿ ಇರುವುದರಿಂದ ನಮ್ಮ ಲಿವರ್ ಆರೋಗ್ಯದ ದೃಷ್ಟಿಯಿಂದಲೂ ಕೂಡ ನಮಗೆ ತುಂಬಾ ಒಳ್ಳೆಯದು. ಅಜವಾನ ಹಾಗೂ ಪಲಾವ್ ಎಲೆಯನ್ನು ಹಾಕಿ ಒಂದೂವರೆ ಲೋಟ ನೀರನ್ನು ಒಂದು ಲೋಟಕ್ಕೆ ಇಳಿಯುವ ಹಾಗೆ ಚೆನ್ನಾಗಿ ಕುದಿಸಬೇಕು. ನೀರು ಚೆನ್ನಾಗಿ ಕುದಿದ ಮೇಲೆ ಇದನ್ನು ಒಂದು ಲೋಟಕ್ಕೆ ಸೋಸಿಕೊಂಡು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಬೇಕು. ನಂತರ ನಿಮ್ಮ ರುಚಿಗೆ ಅನುಗುಣವಾಗಿ ಸ್ವಲ್ಪ ಬೆಲ್ಲವನ್ನು ಸೇರಿಸಿಕೊಳ್ಳಬೇಕು ಡಯಾಬಿಟಿಸ್ ಇರುವವರು ಬೆಲ್ಲವನ್ನು ಸೇರಿಸಿಕೊಳ್ಳಬಾರದು ಇದರ ಬದಲು ಒಂದು ಚಿಟಿಕೆಯಷ್ಟು ಬ್ಲಾಕ್ ಸಾಲ್ಟ್ ಅನ್ನು ಸೇರಿಸಿಕೊಳ್ಳಬಹುದು. ಇನ್ನು ಈ ಪಾನೀಯವನ್ನು ಹೇಗೆ ತೆಗೆದುಕೊಳ್ಳುವುದು ಅಂತ ನೋಡುವುದಾದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳಬೇಕು. ಇದರಿಂದ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ರಾತ್ರಿ ಮಲಗುವ ಸಮಯದಲ್ಲಿ ಕೂಡ ಒಂದು ಲೋಟ ತೆಗೆದುಕೊಳ್ಳಬಹುದೇ ಈ ರೀತಿಯಾಗಿ ಪ್ರತಿದಿನ ಎರಡು ಲೋಟದಷ್ಟು ಈ ಪಾನೀಯವನ್ನು ತೆಗೆದುಕೊಳ್ಳುವುದರಿಂದ ನಮ್ಮ ಜೀರ್ಣ ವ್ಯವಸ್ಥೆಯನ್ನು ಹೆಚ್ಚಿಸಿ, ಕೀಲುನೋವು, ಮೊಣಕೈ ಮೊಣಕಾಲು ನೋವು, ಸೊಂಟನೋವು, ಬೆನ್ನುನೋವು ಈ ಎಲ್ಲ ರೀತಿಯ ನೋವುಗಳು ಕೂಡ ಸಂಪೂರ್ಣವಾಗಿ ನಿವಾರಣೆಯಾಗುವುದು. ಸತತವಾಗಿ ಒಂದು ವಾರದ ಕಾಲ ಇದನ್ನು ತೆಗೆದುಕೊಳ್ಳುವುದರಿಂದ ಪರಿಣಾಮಕಾರಿಅನಿಸುವುದು ಇಷ್ಟಾದರೂ ಕಡಿಮೆ ಆಗದೇ ಇದ್ದಲ್ಲಿ ಒಮ್ಮೆ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.
ಅಜವಾನ ಇದು ನಮ್ಮ ಕೀಲು ನೋವು ಅಥವಾ ವಾತವನ್ನು ಕಡಿಮೆ ಮಾಡಲು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ ಎನ್ನಬಹುದು. ಹಾಗಿರದೇ ಸಂಬಂಧಿತ ಕಾಯಿಲೆಗಳಿಗೂ ಸಹ ಓಮಿನ ಕಾಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯಕಾರಿಯಾಗಿದೆ. ಅನೇಕ ವಿಧವಾದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣ ಮಾಡಿ ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಬೀರುವ ಅಂಶಗಳು ಇಲ್ಲದೆ ಇರುವುದರಿಂದ ಸುಲಭವಾಗಿ ತೆಗೆದುಕೊಳ್ಳಬಹುದು ಅಜವಾನ ಇದು ತೂಕ ಇಳಿಸಿಕೊಳ್ಳಲು ಕೂಡ ಸಹಾಯಕಾರಿಯಾಗುತ್ತದೆ. ಇದರಲ್ಲಿ ಆಂಟಿ ಇನ್ಲ್ಫ್ಯಾಮೇಟರಿ ಗುಣ ಇರುವುದರಿಂದ ನಮ್ಮ ದೇಹದಲ್ಲಿ ಗ್ಯಾಸ್ , ಅಸಿಡಿಟಿ, ವಾತ ಹಾಗೂ ಮಲಬದ್ಧತೆಗೆ ಸಂಬಂಧಿಸಿದಂತಹ ರೋಗ ಗಳನ್ನು ನಿವಾರಣೆ ಮಾಡುವಲ್ಲಿ ತುಂಬಾ ಸಹಾಯಕಾರಿ ಆಗಿರುತ್ತದೆ ಹಾಗೂ ಇವುಗಳ ಜೊತೆಗೆ ನಮ್ಮ ಜೀರ್ಣ ಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ.