ತಮ್ಮ ಖಾಸಗಿ ಕೆಲಸದ ಜೊತೆಗೆ ಕುರಿ ಸಾಕಾಣಿಕೆಯನ್ನು ಮಾಡುತ್ತಾ ಇರುವ ಉತ್ಸಾಹಿ ಮಹಿಳೆ ಓಬಾರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕುರಿ ಸಾಕಾಣಿಕೆ ಮಾಡುತ್ತಾ ಇರುವ ಇವರ ಹೆಸರು ಹೇಮಾವತಿ. ಇವರು ತಮ್ಮ ಎರಡು ಎಕರೆ ತೆಂಗಿನ ತೋಟದಲ್ಲಿ ಕುರಿ ಸಾಕಾಣಿಕೆ ಹಾಗೂ ಅದರ ಜೊತೆಯಲ್ಲಿಯೇ ಕೋಳಿ ಸಾಕಾಣಿಕೆ ಕೂಡಾ ಮಾಡುತ್ತಾ ಇದ್ದಾರೆ. ಕುರಿಗಳನ್ನು ಸಾಕಲು ತೋಟದಲ್ಲಿ ಶೆಡ್ ನಿರ್ಮಾಣ ಮಾಡಲು ಇವರು ಯಾವುದೇ ಕೆಲಸಗಾರರನ್ನು ಬಳಸಿಕೊಳದೆ ಸ್ವತಃ ತಾವೇ ನಿರ್ಮಿಸಿಕೊಂಡಿದ್ದಾರೆ. ಐಟಿಐ ಓದಿದ ಹೇಮಾವತಿ ಅವರ ತಮ್ಮ ಇವರ ತೋಟದಲ್ಲಿಯೇ ಇದ್ದ ಅಡಿಕೆ ಮರಗಳನ್ನು ಬಳಸಿಕೊಂಡು ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಕೆಳಗಡೆ ನಾಟಿ ಕೋಳಿ ಸಾಕಾಣಿಕೆ ಹಾಗೂ ಮೇಲೆ ಕುರಿಗಳನ್ನು ಸಾಕುತ್ತ ಇದ್ದಾರೆ. ಹೇಮಾವತಿ ಅವರು ಹಿರಿಯೂರಿನಿಂದ ಕುರಿಗಳನ್ನು ತಂದು ಸಾಕುತ್ತಾರೆ. ಕುರಿಗಳನ್ನು ಹೊರಗಡೆ ಬಿಟ್ಟು ಮೆಯಿಸದೇ ಕಟ್ಟಿಹಾಕಿ ತಾವೇ ಪ್ರತೀ ದಿನ ಶೇಖರಿಸಿ ಇಟ್ಟ ಮೇವುಗಳನ್ನು ಹಾಕಿ ಸಾಕುತ್ತಾರೆ. ಪ್ರತೀ ದಿನ ಶೇಂಗಾ ಹೊಟ್ಟು ಮತ್ತು ಜೋಳವನ್ನು ಕುರಿಗಳಿಗೆ ಮೇವಾಗಿ ಬಳಸಲಾಗುತ್ತದೆ. ಹಾಗೂ ಕೊರೋನ ದಿಂದಾಗಿ ಅತಿಯಾಗಿ ಯಾವುದಕ್ಕೂ ಅನಾವಶ್ಯಕ ಖರ್ಚು ಮಾಡದೆ ಇತಮಿತವಾಗಿ ಖರ್ಚು ಮಾಡುತ್ತಾ ಇದ್ದಾರೆ.
ಹೇಮಾವತಿ ಅವರ ಬಳಿ ನಾಟಿ ಕುರಿಗಳು ಹಾಗೂ ಬಲರಾಮನ ತಳಿಯ ಕುರಿಗಳು ಲಭ್ಯವಿದೆ. ಹಿರಿಯೂರಿನಿಂದ ಏಳು ಸಾವಿರ ಕೊಟ್ಟು 40 ಕುರಿಗಳನ್ನು ಒಟ್ಟಿಗೆ ತಂದಿದ್ದರು. ಮೊದಲು ತರಬೇಕಿದ್ದರೆ ಕುರಿಗಳು ಆರೇಳು ಕೆಜಿ ತೂಕ ಹೊಂದಿದ್ದವು ಈಗ ಹದಿನೈದು ಕೆಜಿ ಆಗಿವೆ ಇನ್ನೂ ಆರು ತಿಂಗಳು ಅನ್ನುವಷ್ಟರಲ್ಲಿ ಇಪ್ಪತ್ತೈದು ಮೂವತ್ತು ಕೆಜಿ ಆಗುತ್ತದೆ ಎನ್ನುತ್ತಾರೆ ಹೇಮಾವತಿ. ಆರು ತಿಂಗಳ ಬಳಿಕ ಕುರಿಗಳು ಮಾರಾಟಕ್ಕೆ ಲಭ್ಯವಿದೆ. ಮೊದಲು ಇವರು ಯಾವುದೇ ವ್ಯಾಕ್ಸಿನೇಶನ್ ನೀಡದೆ ನೈಸರ್ಗಿಕವಾಗಿ ಮೆವುಗಳನ್ನು ನೀಡುತ್ತಾ ಸಾಕುತ್ತಿದ್ದರು. ಒಮ್ಮೆ ಮೂರು ಕುರಿಗಳು ಸತ್ತ ನಂತರ ಪಶು ವೈದ್ಯರನ್ನು ಸಂಪರ್ಕಿಸಿದಾಗ ವ್ಯಾಕ್ಸಿನೇಶನ್ ಮಾಡಿಸಬೇಕು ಎಂದಾಗ ಅವುಗಳಿಗೆ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಶನ್ ಮಾಡಿಸಿ ಈಗ ಎಲ್ಲಾ ಕುರಿಗಳೂ ಆರೋಗ್ಯದಿಂದ ಇವೆ ಎನ್ನುತ್ತಾರೆ.
ಕುರಿ ಸಾಕಾಣಿಕೆ ಜೊತೆಗೆ ನಾಟಿ ಕೋಳಿಗಳನ್ನು ಸಹ ಸಾಕುತ್ತಾರೆ ಇದ್ದಾರೆ ಹೇಮಾವತಿ. ಕೆಜಿ ಗೆ 320 ರೂಪಾಯಿ ಅಂತೆ 20 ಕೋಳಿಗಳನ್ನು ತಂದು ಅವುಗಳನ್ನು ಸಾಕುತ್ತಾ ಇದ್ದಾರೆ. ಇನ್ನು ಹೇಮಾವತಿ ಅವರ ಕುರಿ ಕೋಳಿ ಫಾರಂ ಹೈವೆ ಮೆನ್ ರೋಡ್ ಬಳಿಯೇ ಇದ್ದು, ಕಳ್ಳರ ಕಾಟಕ್ಕೆ ಹೇಗೆ ಯಾವ ರೀತಿಯ ಭದ್ರತೆ ಇದೆ ಎಂದು ನೋಡುವುದಾದರೆ , ಸುತ್ತಲೂ ತೋಟದಲ್ಲಿ ಯಾರೂ ಬಂದರೂ ತಿಳಿಯುವಂತೆ ತೋಟದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಹಾಗೂ ಸುತ್ತಲೂ ತಂತಿ ಬೇಲಿಗಳನ್ನು ಕೂಡಾ ಅಳವಡಿಸಲಾಗಿದೆ. ಹೊಸದಾಗಿ ಕುರಿ ಫಾರಂ ಮಾಡುವವರು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು ಉತ್ತಮ ಎನ್ನುವುದು ಹೇಮಾವತಿ ಅವರ ಸಲಹೆ. ಸಾಮಾನ್ಯವಾಗಿ ಕುರಿ ಸಾಕಾಣಿಕೆ ಹೆಣ್ಣು ಮಕ್ಕಳು ಮಾಡುವ ಕೆಲಸ ಅಲ್ಲ ಎಂದು ಕೇಳಿದರೆ ಅದಕ್ಕೆ ಪ್ರತಿಯಾಗಿ ಹೇಮಾವತಿ ಅವರು ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಅಕ್ಕ ಪಕ್ಕದವರ ಜೊತೆ ಸುಮ್ಮನೆ ಏನೇನೋ ಮಾತನಾಡುತ್ತಾ ಕಾಲಹರಣ ಮಾಡುವುದರ ಬದಲು ನಮ್ಮಷ್ಟಕ್ಕೆ ನಾವು ನಮ್ಮನ್ನು ಯಾವುದೇ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಹೇಮಾವತಿ ಅವರು ಬರೀ ಕುರಿ ಸಾಕಾಣಿಕೆ ಮಾಡುವುದು ಮಾತ್ರ ಅಲ್ಲದೆ ಇವರು LIC ಏಜೆಂಟ್ , ಪಿಗ್ಮಿ ಏಜೆಂಟ್ ಕೂಡಾ ಆಗಿದ್ದಾರೆ.