ಗ್ರಾಮೀಣ ಭಾಗದಲ್ಲಿ ಹತ್ತಾರು ಆಯುರ್ವೇದಿಕ್ ಔಷಧಿಗಳು, ನಾಟಿ ಔಷದಿ ಮನೆಮದ್ದುಗಳು ಇರುತ್ತವೆ ಆದ್ರೆ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿ ಇಲ್ಲದಿರುವ ಕಾರಣ ಹೆಚ್ಚಾಗಿ ಜನಗಳಿಗೆ ಇದರ ಮಹತ್ವ ತಿಳಿಯುತ್ತಿಲ್ಲ. ಈ ಮೂಲಕ ಹಲ್ಲು ನೋವಿಗೆ ತೊಗರಿ ಎಲೆ ಹೇಗೆ ಸಹಕಾರಿ ಹಾಗೂ ಮತ್ತಷ್ಟು ದೈಹಿಕ ಸಮಸ್ಯೆಗಳಿಗೆ ಮನೆಮದ್ದು ಹೇಗೆ ಉಪಯೋಗಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ.
ಹಲ್ಲು ನೋವು ಸಮಸ್ಯೆ ಇದ್ರೆ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ ಈ ಮನೆಮದ್ದು ಮಾಡಿ ನೋವು ನಿವಾರಿಸಿಕೊಳ್ಳಿ, ಸಾಮಾನ್ಯವಾಗಿ ತೊಗರಿ ಎಲೆ ಅನ್ನೋದು ಗ್ರಾಮೀಣ ಭಾಗದಲ್ಲಿ ಸಿಗುವಂತ ಸಸ್ಯ ಹಾಗೂ ಇದನ್ನು ಮಳೆಗಾಲದಲ್ಲಿ ಬೆಳೆಗಳನ್ನಾಗಿ ಬೆಳೆಯುತ್ತಾರೆ. ಈ ತೊಗರಿ ಎಲೆಯನ್ನು ಚನ್ನಾಗಿ ಹಿಸುಕಿ ರಸ ತೆಗೆಯದೆ ಉಂಡೆಯಂತೆ ಮಾಡಿ ರಾತ್ರಿ ಮಲಗುವ ಮುನ್ನ ನೋವಿರುವ ಹಲ್ಲಿನ ಸ್ಥಳದಲ್ಲಿ ಆದಮಿಟ್ಟುಕೊಂಡು ಮಲಗಿ, ಬೆಳಗ್ಗೆ ಎದ್ದ ತಕ್ಷಣ ಉಪ್ಪು ಕರಗಿಸಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸಿದರೆ ಹಲ್ಲುನೋವು ಗುಣವಾಗುತ್ತದೆ.
ಹಲ್ಲುನೋವಿಗೆ ಮತ್ತೊಂದು ಮನೆಮದ್ದು: ಹಲ್ಲುನೋವು ಬಂದಾಗ ಒಣಶುಂಠಿಯನ್ನು ಪುಡಿಮಾಡಿ, ಅದಕ್ಕೆ ಪುಡಿ ಉಪ್ಪನ್ನು ಸೇರಿಸಿ ನೋವಿರುವ ಹಲ್ಲಿನಲ್ಲಿ ಹಾಕಿಕೊಂಡರೆ ಹಲ್ಲುನೋವು ಗುಣವಾಗುತ್ತದೆ.
ಇನ್ನು ಏನಾದ್ರು ಭೇದಿ ಸಮಸ್ಯೆ ಆಗುತಿದ್ರೆ ನೆಲ್ಲಿ ಗಿಡದ ಎಲೆಗಳನ್ನು ಅರೆದು ಮಜ್ಜಿಗೆಯೊಂದಿಗೆ ಸೇರಿಸಿ ಕುಡಿದರೆ ಬೇಧಿ ನಿಲ್ಲುತ್ತದೆ. ಒಂದು ಗೋಲಿಯಳತೆಯಷ್ಟು ಇಂಗನ್ನು ತುಪ್ಪದಲ್ಲಿ ಹುರಿದು ಸೇವಿಸಿ ನೀಡು ಕುಡಿದರೆ ವಾಯು ತೊಂದರೆಗಳು ನೀಗುತ್ತದೆ.