ಬಹುತೇಕ ಹೆಂಗಸರಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತದೆ ಇದಕ್ಕೆ ಒಂದಿಷ್ಟು ಪರಿಹಾರ ಮಾರ್ಗಗಳೇನು ಅನ್ನೋದನ್ನ ತಿಳಿಯೋಣ. ಈ ಮನೆಮದ್ದುಗಳನ್ನು ಮನೆಮದ್ದನ್ನು ಮನೆಯಲ್ಲಿಯೇ ಮಾಡಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ. ಇನ್ನು ಯಾವೆಲ್ಲ ಸಮಸ್ಯೆಗೆ ಮನೆಮದ್ದು ಇದೆ ಅನ್ನೋದನ್ನ ನೋಡೋಣ.
ಹೆಂಗಸರ ಸಮಸ್ಯೆಗಳು: ಹೊಟ್ಟೆನೋವು, ಅತಿಸ್ರಾವ, ಮೈ ಕೈ ನೋವು, ಬೆನ್ನುನೋವು, ಇನ್ನು ಋತು ಚಕ್ರದಲ್ಲಿ ಏರಿಳಿತ. ಈ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಏನು ಅನ್ನೋದನ್ನ ನೋಡೋಣ.
ಹಣ್ಣುಗಳ ರಾಣಿ ಎಂದೇ ಕರೆಯಲ್ಪಡುವ ಪರಂಗಿಕಾಯಿಯನ್ನು ಅರೆದು ಒಂದು ಲೋಟ ನೀರಿನೊಂದಿಗೆ ಮಿಶ್ರ ಮಾಡಿ ದಿನಕ್ಕೆರಡು ಬಾರಿ ಸೇವಿಸಿ ಇದರಿಂದ ಹೆಂಗಸರಲ್ಲಿ ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವಂತ ನೋವು ಕಡಿಮೆಯಾಗುತ್ತದೆ. ಜೊತೆಗೆ ಋತು ಚಕ್ರವು ಕ್ರಮ ಬದ್ದವಾಗಿ ಕೆಲಸ ಮಾಡುತ್ತದೆ.
ಇನ್ನು ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿಗೆ ಮತ್ತೊಂದು ಮನೆಮದ್ದು 4 ಚಮಚ ಎಳ್ಳನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿಗೆ ಹಾಕಿ ಚನ್ನಾಗಿ ಬೆರಸಿ, ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಸೇವಿಸಿದರೆ ನೋವು ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೆ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಅತಿಸ್ರಾವ ನಿಯಂತ್ರಣಕ್ಕೆ ಬರುತ್ತದೆ.
ತಿಂಗಳ ಮುಟ್ಟಿನ ಸಮಯದಲ್ಲಿ ದೈಹಿಕ ಒತ್ತಡ ನೀಡುವಂತ ಕೆಲಸಗಳನ್ನು ಹೆಚ್ಚಾಗಿ ಮಾಡಬಾರದು ಆ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು. ಇನ್ನು ಋತುಚಕ್ರ ಕ್ರಮಬದ್ಧವಾಗಿ ನಡೆಯಲು ಬಿಟ್ ರೊಟ್ ರಸವನ್ನು ಸೇವಿಸುವುದು ಉತ್ತಮ.
ಋತು ಚಕ್ರ ಕ್ರಮಬದ್ಧವಾಗಿ ನಡೆಯಲು ಕ್ಯಾರೆಟ್ ಜ್ಯುಸ್ ಮಾಡಿಕೊಂಡು ಕುಡಿಯುವುದರಿಂದ ಶರೀರಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುವುದರ ಜೊತೆಗೆ ಋತು ಚಕ್ರ ಕ್ರಮಬದ್ಧವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಹಸಿ ಕರ್ಜುರವನ್ನು ನಿಯಮಿತವಾಗಿ ಸೇವಿಸುವುದು ಉತ್ತಮ ಇದರಿಂದ ಕೂಡ ಅರೋಗ್ಯ ವೃದ್ಧಿಯಾಗುವುದಲ್ಲದೆ ಋತು ಚಕ್ರದಲ್ಲಿ ಯಾವುದೇ ಸಮಸ್ಯೆ ಇಲ್ಲದಂತಾಗುವುದು.